ಭ್ರಷ್ಟ ಅಧಿಕಾರಿಗಳ ಮೇಲಿನ ಅರೋಪ ಸಾಭೀತು ಕ್ರಮಕ್ಕೆ ನಿರ್ಲಕ್ಷ

ಕೋಲಾರ, ಜೂ. ೧೪- ಭ್ರಷ್ಟ ಅಧಿಕಾರಿಗಳ ಮೇಲಿನ ಅರೋಪವು ಸಾಭೀತು ಅಗಿದ್ದರೂ ಸಹ ಜಿಲ್ಲಾಧಿಕಾರಿಗಳು ಕಾನೂನು ರೀತ್ಯ ಕ್ರಮ ಕೈಗೊಳ್ಳದೆ ನಿರ್ಲಕ್ಷ ವಹಿಸುವ ಮೂಲಕ ಭ್ರಷ್ಟ ಅಧಿಕಾರಿಗಳಿಗೆ ಶ್ರೀರಕ್ಷೆ ಮಾಡುತ್ತಿರುವ ವಿರುದ್ದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಘೇರಾವ್ ಮಾಡಲಾಗುವುದು ಎಂದು ದಮನಿತರ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಡಾ. ಮುನಿಆಂಜನಪ್ಪ ಎಚ್ಚರಿಸಿದರು.
ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಕೋಲಾರದಲ್ಲಿ ಈ ಹಿಂದಿನ ತಹಸೀಲ್ದಾರ್ ಶೋಭಿತ,ರಾಜ್ಸಸ್ವ ನಿರೀಕ್ಷಕ ರಮೇಶ್ ಮತ್ತು ಗ್ರಾಮ ಲೆಕ್ಕಾಧಿಕಾರಿ ಆನಂದ್ ಬಾಬು ಅವರುಗಳು ಅಮಿಷಕ್ಕೆ ಒಳಗಾಗಿ ಸುಗಟೂರು ಹೋಬಳಿಯ ಉರಗಲಿ ಗ್ರಾಮ ಸರ್ವೇ ಸಂಖ್ಯೆ ೧೦೬ರ ೨.೩೦ ಎಕರೆ ಜಮೀನಿಗೆ ಅರ್ಜಿ ಸಂಖ್ಯೆ ೫೩ ಮತ್ತು ೫೭ ಹಾಕದೆ ಇರುವಂತೆ ಕೋಲಾರ ನಗರದ ಸಂತೇ ಮೈದಾನದ ನಿವಾಸಿ ನಾರಾಯಣಸ್ವಾಮಿ ಬಿನ್ ಲೇಟ್ ನಾರಾಯಣಪ್ಪ ಎಂಬುವರಿಗೆ ದರಕಾಸ್ತು ಸಮಿತಿಯಲ್ಲಿ ಮಂಜೂರು ಮಾಡಿದ್ದಾರೆ ಎಂದು ಆರೋಪಿಸಿದರು.
ಈ ಸಂಬಂಧವಾಗಿ ಪತ್ರಿಕಾ ಗೋಷ್ಠಿಯ ಮೂಲಕ ಜಿಲ್ಲಾಧಿಕಾರಿಗಳ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದೆ ಹಾಗೂ ೨೦೨೧ರ ಆಗಸ್ಟ್ ೧೪ ರಂದು ಜಿಲ್ಲಾಧಿಕಾರಿಗಳಿಗೆ, ಸೆಪ್ಟೆಂಬರ್ ೧೪ ರಂದು ಉಪವಿಭಾಗಾಧಿಕಾರಿಗಳಿಗೆ ಮತ್ತು ಭ್ರಷ್ಟಾಚಾರ ನಿಗ್ರಹದಳಕ್ಕೆ ದೂರು ನೀಡಿ ಅಕ್ರಮವಾಗಿ ದಾಖಲೆಗಳನ್ನು ಸೃಷ್ಠಿಸಿ ಜಮೀನು ಮಂಜೂರು ಮಾಡಿರುವ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಂಡು ಕ್ರಿಮಿನಲ್ ಮೊಕ್ಕದಮ್ಮೆ ದಾಖಲಿಸ ಬೇಕೆಂದು ಒತ್ತಾಯಿಸಿದ್ದೇವು ಎಂದರು,
ಜಿಲ್ಲಾಧಿಕಾರಿಗಳು ಸೆಪ್ಟೆಂಬರ್ ೨೩ ರಂದು ಸಹಾಯಕ ಕಮೀಷನರ್ ಅವರಿಗೆ ಪರಿಶೀಲಿಸಿ ನಿಯಮಾನುಸಾರ ಕ್ರಮ ಜರುಗಿಸ ಬೇಕೆಂದು ಶಿಫಾರಸ್ಸ ಮಾಡಿದ್ದರು ನಂತರ ನಾನು ಯಾವೂದೇ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಸಹಾಯಕ ಕಮೀಷನರ್ ಅವರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು ವಿಚಾರಣೆ ನಡೆದು ೨೦೨೩ರ ಮಾರ್ಚ್ ೨ ರಂದು ದರಖಾಸ್ತು ಸಮಿತಿಯಲ್ಲಿ ಅಕ್ರಮವಾಗಿ ಮಂಜೂರು ಮಾಡಿದ್ದ ಸಾಗುವಳಿ ಚೀಟಿಗಳನ್ನು ಹಾಗೂ ನಕಲಿ ದಾಖಲೆಗಳನ್ನು ವಜಾ ಮಾಡಿ ತಪ್ಪಿತಸ್ತ ಅಧಿಕಾರಿಗಳ ವಿರುದ್ದ ಕರಡು ದೋಷಾರೋಪಣಾ ಪಟ್ಟಿ ಸಿದ್ದಪಡೆಸಿ ಮೇಲಾಧಿಕಾರಿಗಳಿಗೆ ಸಲ್ಲಿಸ ಬೇಕೆಂದು ಆದೇಶಿಸಲಾಯಿತು ಎಂದು ಹೇಳಿದರು,
ಪತ್ರಿಕಾಗೋಷ್ಠಿಯಲ್ಲಿ ದಮನಿತರ ಸಂಘರ್ಷ ಸಮಿತಿ ಯುವ ಘಟಕದ ರಾಜ್ಯಾಧ್ಯಕ್ಷ ಮಾರಸಂದ್ರ ಮಂಜುನಾಥ್, ಜಿಲ್ಲಾಧ್ಯಕ್ಷ ವಿ.ಎಂ. ಮುನಿರಾಜು, ಪಧಾಧಿಕಾರಿಗಳಾದ ವೀರೇನಹಳ್ಳಿ ಮಧು, ಅಂಜಿ ಕನ್ನಡಿಗ, ಸಂತೋಷ್ ಕುಮಾರ್, ವೆಂಕಟಚಲಪತಿ, ಸತೀಶ್ ಶಂಕರ್ ಉಪಸ್ಥಿತರಿದ್ದರು,