ಭ್ರಷ್ಟ ಅಧಿಕಾರಗಳ ಬೆಂಬಲಕ್ಕೆ ನಿಂತ: ಮಾಜಿ ಶಾಸಕ ಮತ್ತು ಬಸವರಾಜಗೌಡ

ಜೇವರ್ಗಿ:ನ.12: ಪರಿಶಿಷ್ಟ ಪಂಗಡ ಯೋಜನೆಯ ಅನುದಾನದ ದುರ್ಬಳಕೆ ಮಾಡಿಕೊಂಡಿದ್ದ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುಬೇಕು, ತಾಲೂಕಿನ ವಿವಿಧ ಇಲಾಖೆಗಳ ಭ್ರಷ್ಟ ಅಧಿಕಾರಗಳ ಬೆಂಬಲಕ್ಕೆ ನಿಂತ ನರಿಬೋಳ ಕುಟುಂಬ ಮಾಜಿ ಶಾಸಕದೊಡ್ಡಪ್ಪಗೌಡ ಎಸ್ ಪಾಟೀಲ್ ನರಿಬೋಳ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಬಸವರಾಜ ಎಸ್ ಪಾಟೀಲ್ ನರಿಬೋಳ ಎಂದು ಶ್ರೀರಾಮ ಸೇನೆ ರಾಜ್ಯ ಘಟಕದ ಅಧ್ಯಕ್ಷರಾದ ಆಂದೋಲ ಸಿದ್ಧಲಿಂಗ ಸ್ವಾಮೀಜಿ ಗಂಭೀರ ಆರೋಪ ಮಾಡಿದ್ದಾರೆ.

ಮಂಗಳವಾರ ಪಟ್ಟಣದ ಶ್ರೀರಾಮ ಸೇನೆ ಕಛೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಅವರು, 2016-2017ನೇ ಸಾಲಿನಲ್ಲಿ ಟಿಎಸ್‍ಪಿ ಪರಿಶಿಷ್ಟ ಪಂಗಡ ಯೋಜನೆಯಡಿಯಲ್ಲಿ ತಾಲೂಕಿನ ಆಂದೋಲ ಗ್ರಾಮದ ಇಬ್ಬರು ಫಲಾನುಭವಿಗಳಾದ ಸರ್ವೇ ನಂ 356/13 ಸಾವಿತ್ರಿ ಗಂಡ ಕೃಷ್ಣಪ್ಪ, ಸರ್ವೇ ನಂ 545/8 ಭಿಂಬಾಯಿ ಗಂಡ ಮಲ್ಲಣ್ಣ ಈ ಇಬ್ಬರು ಫಲಾನುಭವಿಗಳು ಆಯ್ಕೆಯಾಗಿದ್ದರು ಈ ಯೋಜನೆ ಅನ್ವಯ ಅವರ ಜಮೀನಿನಲ್ಲಿ ಕೊಳವೆಭಾವಿ ಕೊರೆಸಿ, ಅದಕ್ಕೆ ವಿದ್ಯುತ್ ಪರಿವರ್ತಕ ಅಳವಡಿಸಿ ಪೈಪಲೈನ ಕಾಮಗಾರಿ ನಿರ್ವಹಿಸಬೇಕಾಗಿತ್ತು. ಆದರೆ ಇಬ್ಬರ ಫಲಾನುಭವಿಗಳ ಕಾಮಗಾರಿಗೆ ಸುಮಾರು 21.25 ಲಕ್ಷ ರೂ. ಅನುದಾನವನ್ನು ಕೆಬಿಜೆಎನ್‍ಎಲ್ ನಿಗಮದಿಂದ ಬಿಡುಗಡೆಗೊಳಿಸಲಾಗಿತು. ಆದರೆ ಈ ಯೋಜನೆ ಅಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳ ಜಮೀನಿನಲ್ಲಿ ಕಾಮಗಾರಿಗೆ ನಿರ್ವಹಿಸದೇ ಕೆಬಿಜೆಎನ್‍ಎಲ್ ನಿಗಮದ ಇಂಜಿನಿಯರ್ ಹಾಗೂ ಗುತ್ತಿಗೆದಾರರಾದ ಶಿವಾನಂದ ಬಸವರಾಜ ಮುಧೋಳ ಸೊನ್ನ ಸೇರಿಕೊಂಡು ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಶ್ರೀಗಳು ಆರೋಪಿಸಿದ್ದಾರೆ.

ಈ ಕರಿತು ದಿನಾಂಕ 30-11-2019 ರಂದು ಕೆಬಿಜೆಎನ್‍ಎಲ್ ನಿಗಮದ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ ನಂತರ ಭೀಮರಾಯನಗುಡಿ ವೃತ್ತದ ಸೂಪರಿಂಟೆಂಡಂಟ್ ಇಂಜಿನಿಯರ ಖುದ್ದು ಕಾಮಗಾರಿ ಪರಿಶೀಲಿಸಿದ್ದಾರೆ. ನಂತರ ಮುಖ್ಯ ಇಂಜಿನಿಯರ ವರದಿ ಸಲ್ಲಿಸಿದ್ದರು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಅಂದಿನಿಂದ ಇಂದಿನವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ, ಕೂಡಲೇ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಪರಿಶಿಷ್ಟ ಪಂಗಡ ಯೋಜನೆ ಅಡಿಯಲ್ಲಿ ಅಯ್ಕೆಯಾದ ಫಲಾನುಭವಿಗಳಿಗೆ ನ್ಯಾಯ ಒದಗಿಸಬೇಕು. ಪೊಲೀಸ್ ಠಾಣೆಯಲ್ಲಿ ಬಡವರಿಗೆ ನ್ಯಾಯ ಸಿಗುತ್ತಿಲ್ಲ, ನಾವು ನೀಡಿ ಲಿಖಿತ ದೂರುಗಳಿಗೆ ರಾಜಕೀಯ ಒತ್ತಡಕ್ಕೆ ಮಣಿದುಪ್ರಕರಣಗಳು ದಾಖಲಿಸಿದೆ ಕರ್ತವ್ಯ ಲೋಪವೆಸಗುತ್ತಿದ್ದಾರೆ. ಕಾನೂನು ಕಾಪಾಡಬೇಕಾದವರು ಪೊಲೀಸ್ ಇಲಾಖೆಯವರು ಆದರೆ ಮಾಜಿ ಶಾಸಕ ದೊಡ್ಡಪ್ಪಗೌ ಎಸ್ ಪಾಟೀಲ್ ನರಿಬೋಳ ಮತ್ತು ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಬಸವರಾಜಗೌಡ ಎಸ್ ಪಾಟೀಲ್ ನರಿಬೋಳ ಇವರ ಕೈಗೊಂಬೆಯಾಗಿ ಸಿಪಿಐ ರಮೇಶ ರೋಟ್ಟಿ, ಪಿಎಸ್‍ಐ ಮಂಜುನಾಥ ಹೂಗಾರ ಕೆಲಸ ಮಾಡುತ್ತಿದ್ದಾರೆ. ಖಾಕಿಯವರಿಗೆ ಶ್ರೀರಕ್ಷೆಯಾಗಿ, ತಾಲೂಕಿನ ವಿವಿಧ ಇಲಾಖೆಗಳ ಉದಾಹರಣೆ: ಪೊಲೀಸ್ ಇಲಾಖೆ, ಎಹೆಚ್‍ಓ ಸಹಾಯಕ ಅಧಿಕಾರಿ ಶಶಿಕಾಂತ ಅಧಿಕಾರಿಗಳ ತಮ್ಮ ತಮ್ಮ ಅನುಕೂಲತಕ್ಕಂತೆ ಅವರನ್ನು ಬಳಸಿಕೊಂಡು ಅವರನ್ನು ಉಳಿಸಿಕೊಳ್ಳುವುದಕ್ಕೆ ನರಿಬೋಳ ಕುಟುಂಬ ನಿಂತಿದ್ದಾರೆ, ಇವರಿಬ್ಬರನ್ನು 24 ಗಂಟೆ ಒಳಗಾಗಿ ಇವರನ್ನು ವರ್ಗಾವಣೆ ಮಾಡದಿದ್ದರೆ ಮುಂಬರುವ ದಿನಗಳಲ್ಲಿ ಶ್ರೀರಾಮ ಸೇನೆ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸುದ್ದಿಗೋಷ್ಟಿಯಲ್ಲಿ ಶ್ರೀರಾಮ ಸೇನೆ ತಾಲೂಕ ಅಧ್ಯಕ್ಷರಾದ ಈಶ್ವರ ಹಿಪ್ಪರಗಿ, ಆನಂದ ದೇಸಾಯಿ, ಜೈಪ್ರಕಾಶ ಖಾದ್ಯಾಪೂರ, ಕಿರಣಗೌಡ ಚನ್ನೂರ, ಭಗವಂತ ಮೈನಾಳ ಇದ್ದರು.