ಭ್ರಷ್ಟಾಚಾರ ಹಾಗೂ ಸೃಜನ ಪಕ್ಷಪಾತ ವಿರುದ್ಧ ನಿರಂತರ ಹೋರಾಟ: ರವಿ ಸ್ವಾಮಿ

ಬೀದರ್:ಮೇ.15: ಭ್ರಷ್ಟಾಚಾರ, ಕುತಂತ್ರ, ಸ್ವಜನಪಕ್ಷಪಾತ ಮತ್ತು ಅಹಂಕಾರದ ವಿರುದ್ಧ ಕಾನೂನು ಹೋರಾಟ ಮುಂದುವರೆಯಲಿದೆ. ಪ್ರಭು ಚವ್ಹಾಣ ಅವರು ಹೊರರಾಜ್ಯದ ಸುಮಾರು 10 ರಿಂದ 15 ಸಾವಿರ ಮತದಾರರನ್ನು ಔರಾದ ಕ್ಷೇತ್ರಕ್ಕೆ ಕರೆಸಿ ಮತ ಹಾಕಿಸಿಕೊಂಡಿದ್ದಾರೆ. ಈ ಮತದಾರರು ಕರ್ನಾಟಕ ಮತ್ತು ಮಹಾರಾಷ್ಟ್ರದ ಎರಡೂ ರಾಜ್ಯಗಳಲ್ಲಿ ಮತದಾನದ ಹಕ್ಕು ಹೊಂದಿರುತ್ತಾರೆ. ಈ ಕುರಿತು ಈಗಾಗಲೇ ಎಲೆಕ್ಷನ್ ಪಿಟಿಷನ್ ಪ್ರಕಾರ ರಿಟನಿರ್ಂಗ್ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ. ಹೋರಾಟ ಮುಂದುವರೆದಿದೆ. ಮುಂಬರುವ ದಿನಗಳಲ್ಲಿ ಲೋಕಸಭಾ ಚುನಾವಣೆ, ಜಿಲ್ಲಾ ಪಂಚಾಯತ ಮತ್ತು ತಾಲೂಕಾ ಪಂಚಾಯತ ಚುನಾವಣೆ ಬರಲಿವೆ. ಕಾರ್ಯಕರ್ತರು ಎದೆಗುಂದದೆ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷವನ್ನು ತಳಮಟ್ಟದಿಂದ ಬಲಪಡಿಸಲು ಐಕ್ಯತೆಯಿಂದ ಸಂಘಟನೆ ಮಾಡೋಣ ಎಂದು ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ಡಾ. ಭೀಮಸೇನರಾವ ಶಿಂಧೆ ಹಾಗೂ ರವೀಂದ್ರ ಸ್ವಾಮಿ ತಿಳಿಸಿದ್ದಾರೆ.