ಭ್ರಷ್ಟಾಚಾರ ಸಹಿಸದ ಶಾಸಕ ಭರತ್ ರೆಡ್ಡಿಯವರೆಬಂಡಿಹಟ್ಟಿ ಭೂಮಿ ವಿವಾದ ಬಗೆಹರಿಸಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.10; ನಗರ ಶಾಸಕ ನಾರಾ ಭರತ ರೆಡ್ಡಿ ಅವರು ತಾವು ಭ್ರಷ್ಟಾಚಾರ ಸಹಿಸಲ್ಲ ಎಂದು ಹೇಳಿರೆ. ಅದಕ್ಕಾಗಿ ನೀವು ಭೂಗಳ್ಳ ಪ್ರತಾಪರೆಡ್ಡಿ ಪರವಾಗಿ‌ ನಿಲ್ಲದೆ ಭೂ ವಂಚಿತರಿಗೆ ನ್ಯಾಯ ಒದಗಿಸಿ. ನೊಂದ ಜನತೆ ನ್ಯಾಯಾಲಯಕ್ಕೆ ಅಲೆಯುವುದನ್ನು ತಪ್ಪಿಸಲು
ಭೂಮಿ ಮತ್ತು ವಸತಿ ಹಕ್ಕು  ವಂಚಿತರ ಹೋರಾಟ  ಸಮಿತಿ ಮನವಿ ಮಾಡಿದೆ.
ನಗರ ಮಯೂರ ಹೊಟರೆಲ್ ನಲ್ಲಿ ಕರೆದಿದ್ದ ಸಮಿತಿ ಮುಖಂಡ ಕರಿಯಪ್ಪ ಗುಡಿಮನಿ ಅವರು  ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದರು‌.
ಭೂ ನ್ಯಾಯ ಮಂಡಳಿಯಲ್ಲಿ ಆದ ತೀರ್ಮಾನದಂತೆ ನಗರದ ಬಂಡಿಹಟ್ಡಿ ಬಳಿಯ 135 ಎಕರೆ ಜಮೀನನ್ನು ದೌರ್ಜನ್ಯದಿಂದ ಪ್ರತಾಪರೆಡ್ಡಿ ವಶಪಡಿಸಿಕೊಂಡಿದ್ದು. ಅದರ ಹೋರಾಟ ನಡೆಯುತ್ತಿದ್ದು. ಅವರ ಪ್ರಭಾವದಿಂದ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಈ ಜಮೀನಿನ ಸರ್ವೇ ಮಾಡುತ್ತಿಲ್ಲವೆಂದು ಆರೋಪಿಸಿದರು. ಈ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ರಿಯಾಜ್ ಮಾತನಾಡಿ ಬಂಡಿಹಟ್ಟಿಯ ಜಮೀನಿನ ಸರ್ವೇ ದಾಖಲೆಗಳನ್ನು ಪ್ರತಾಪ್ ರೆಡ್ಡಿ ಕೇಳಿದರೆ ತಹಶಿಲ್ದಾರ್ ಅವರು ಕೊಡುತ್ತಾರೆ. ಅದು ನಮ್ಮ‌ಜಮೀನು ಅದರ ದಾಖಲೆ ನಾವು ಕೇಳಿದರೆ ಕೊಡಲ್ಲ. ಈ ಬಗ್ಗೆ ಡಿಸಿಯವರಿಗೆ ಕೇಳಿದರೂ ಸ್ಪಂದಿಸುತ್ತಿಲ್ಲ. ಅದಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದೆ. ನ್ಯಾಯಾಲಯ ಎರೆಡು ತಿಂಗಳಲ್ಲಿ ಬಗೆಹರಿಸುವಂತೆ ಹೇಳಿದರೂ ಆರು ತಿಂಗಳಾದರೂ ಬಗೆಹರಿಸಿಲ್ಲ. ಇದರ ವಿರುದ್ದ ನ್ಯಾಯಾಂಗ ನಿಂದನೆಯ ದೂರು ದಾಖಲಿಸಲಿದೆಂದರು.
ತಾಲೂಕಿನ ಚಾನಾಳ್ ಮತ್ತು ಹಂಪಾದೇವನಹಳ್ಳಿ  ಗ್ರಾಮದಲ್ಲಿಯೂ ಇದೇ ರೀತಿ ಆಗಿದೆ. ಇನ್ನಿತರ ಗ್ರಾಮಗಳಲ್ಲೂ ಸರ್ಕಾರ ನೀಡಿದ ಜಮೀನು ಉಳ್ಳವರ ಪಾಲಾಗಿದೆ.  ಅಧಿಕಾರಿಗಳು  ಇಂತಹ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗುತ್ತಿಲ್ಲ ಎಂದು ಆರೋಪಿಸಿದರು‌.
ರಾಜ್ಯದ ಕಾಂಗ್ರೆಸ್ ಸರ್ಕಾರ ಬಡ ಜನರಿಗೆ ಹಲವಾರು ಗ್ಯಾರೆಂಟಿಗಳನ್ನು ನೀಡಿ ಆಸರೆಯಾಗಿದೆ.
ಆದರೆ, ಸರ್ಕಾರ ಬಡ ಜನತೆ ಸ್ವಾಲಂಬಿ  ಬದುಕು ಕಟ್ಟಿಕೊಳ್ಳಲು ರಾಜ್ಯದಲ್ಲಿ ಲಕ್ಷಾಂತರ ಭೂರಹಿತರು ಸರ್ಕಾರಿ ಗೋಮಾಳ, ಸರ್ಕಾರಿ ಖರಾಬ್, ಪರಂಬೋಕ್, ಇನಾಂ, ಅರಣ್ಯ ಇನ್ನಿತರ ಭೂಮಿಗಳಲ್ಲಿ ಸಾಗುವಳಿ ಮಾಡುತ್ತು ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿದ್ದಾರೆ.
ಸಲ್ಲಿಸಿರುವ ಆ ಅರ್ಜಿಗಳಿಗೆ ಭೂಮಿ ಮಂಜೂರಾತಿ ಮಾಡುವ ಮೂಲಕ ಬದುಕಿನ ಗ್ಯಾರಂಟಿ ನೀಡಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಟಿಯಲ್ಲಿ ಸಮಿತಿ ಮುಖಂಡರುಗಳಾದ ಸಂಗನಕಲ್ಲು ಕೃಷ್ಣ, ವಸಂತರಾಜ್ ಕಹಳೆ, ಸಿ.ಶಿವಕುಮಾರ್, ರಾಮಕೃಷ್ಣ, ರಾಜಶೇಖರ ರೆಡ್ಡಿ, ಕೆ.ಮೋಹನ್, ಸಂಜೀವರೆಡ್ಡಿ, ಬೇವಿನಗಿಡದ ಎರ್ರಿಸ್ವಾಮಿ ಮೊದಲಾದವರು ಇದ್ದರು‌