ಭ್ರಷ್ಟಾಚಾರ ವಿರೋಧಿ ಒಕ್ಕೂಟಕ್ಕೆ ಪದಾಧಿಕಾರಿಗಳ ನೇಮಕ

ಮಾನ್ವಿ,ಏ.೨೭- ರಾಷ್ಟ್ರೀಯ ಕಾರ್ಮಿಕರ ಮಾನವ ಹಕ್ಕುಗಳ ಭ್ರಷ್ಟಾಚಾರ ವಿರೋಧಿ ಒಕ್ಕೂಟದ ಮಾನ್ವಿ ತಾಲೂಕಿನ ಅಧ್ಯಕ್ಷರನ್ನಾಗಿ ಬಸವಲಿಂಗಪ್ಪ ಮಿಟ್ಟೆ ಕ್ಯಾಂಪ್, ಪ್ರಧಾನ ಕಾರ್ಯದರ್ಶಿಯನ್ನಾಗಿ ತಿಮ್ಮಾರೆಡ್ಡಿ ಭೋವಿ ನೀರಮಾನ್ವಿ ಮತ್ತು ಉಪಾಧ್ಯಕ್ಷರನ್ನಾಗಿ ಚನ್ನಬಸವ ನಾಯಕ ಜಾನೇಕಲ್ ಅವರನ್ನು ನೇಮಕ ಮಾಡಿ ಒಕ್ಕೂಟದ ಜಿಲ್ಲಾಧ್ಯಕ್ಷ ಕೆ.ಶಿವಪ್ಪ ನಾಯಕ ಕಲ್ಲೂರು ಅವರು ಆದೇಶ ಹೊರಡಿಸಿದ್ದಾರೆ.
ನಂತರ ರಾಷ್ಟ್ರೀಯ ಕಾರ್ಮಿಕರ ಮಾನವ ಹಕ್ಕುಗಳ ಭ್ರಷ್ಟಾಚಾರ ವಿರೋಧಿ ಒಕ್ಕೂಟದ ಜಿಲ್ಲಾಧ್ಯಕ್ಷ ಕೆ.ಶಿವಪ್ಪ ನಾಯಕ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಭ್ರಷ್ಟಾಚಾರ ಎಲ್ಲೆಡೆ ತಾಂಡವವಾಡುತ್ತಿದೆ. ಜನ ಸಾಮಾನ್ಯರು ಸರಕಾರಿ ಸೌಲಭ್ಯಗಳನ್ನು ಪಡೆಯಲು ಲಂಚದ ಬೇಡಿಕೆ ಮತ್ತು ಆಮಿಷಗಳಿಗೆ ತುತ್ತಾಗುತ್ತಿರುವುದು ಎಲ್ಲೆಡೆ ಕಂಡುಬರುತ್ತಿದೆ ಎಂದರು.
ಹಾಗಾಗಿ ಭ್ರಷ್ಟಾಚಾರ ವಿರೋಧಿ ಒಕ್ಕೂಟಕ್ಕೆ ನೇಮಕವಾದ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಜನರ ಸಮಸ್ಯೆಗಳಿಗೆ ಸ್ಪಂಧಿಸಿ ಹೋರಾಟ ಮಾಡುವ ಮೂಲಕ ಸಮಾಜದಲ್ಲಿ ಸಂಘಟನೆಯನ್ನು ಬಲಪಡಿಸಿ, ಜನ ಸಾಮಾನ್ಯರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ರವಿ ನಾಯಕ ಗವಿಗಟ್ಟು, ಸಂಗನ ಬಸವ ಬಾದರದಿನ್ನಿ, ಹುಚ್ಚುಬಸವ ಆಲ್ದಾಳ್, ನೀಲಾವತಿ ನಾಯಕ ಜಾನೇಕಲ್, ಪ್ರಭು ನಾಯಕ ಕುರ್ಡಿ, ವೀರೇಶ್ ತುಪ್ಪದೂರು, ಯಶ್ವಂತ್ ಜಾನೇಕಲ್, ತಿಮ್ಮಾರೆಡ್ಡಿ ಭೋವಿ ನೀರಮಾನವಿ, ಬಸವಲಿಂಗಪ್ಪ, ಬಸವರಾಜ ತುಪ್ಪದೂರು, ನಾಗರಾಜ ಪವಾರ್, ಹುಸೇನ್ ಪಾಷಾ, ಇನ್ನು ಅನೇಕರು ಉಪಸ್ಥಿತರಿದ್ದರು.