ಭ್ರಷ್ಟಾಚಾರ ಮುಕ್ತ ಸಮಾಜಕ್ಕಾಗಿ ಕೆ.ಆರ್.ಎಸ್ ಪಕ್ಷ ಬಲಪಡಿಸಿ

ರಾಯಚೂರು,ಆ.೫- ಭ್ರಷ್ಟಾಚಾರ ಮುಕ್ತ ಸಮಾಜವನ್ನು ನಿರ್ಮಿಸಲು ಹಾಗೂ ಲಂಚಮುಕ್ತ ಕರ್ನಾಟಕವನ್ನಾಗಿ ಮಾಡಲು ಕೆ.ಆರ್.ಎಸ್ ಪಕ್ಷಕ್ಕೆ ಅಧಿಕ ಸಂಖ್ಯೆ ಸೇರುವಂತೆ ಕೆ.ಆರ್.ಎಸ್ ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ಸೋಮಸುಂದರ್ ಕೆ.ಎಸ್ ಮನವಿ ಮಾಡಿದರು.
ಅವರಿಂದು ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಕೆ.ಆರ್.ಎಸ್ ಪಕ್ಷವು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ವರ್ಧಿಸಿತ್ತು , ಮುಂಬರುವ ಜಿಲ್ಲಾ ಪಂಚಾಯತ್ , ತಾಲೂಕು ಪಂಚಾಯತ್ , ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಸ್ವರ್ಧಿಸಲಿದೆ ಹೀಗಾಗಿ ಜನತೆಯು ಪಕ್ಷವನ್ನು ಬೆಂಬಲಿಸುವಂತೆ ಕೋರಿದರು. ಅಲ್ಲದೇ ಜಿಲ್ಲೆಯಲ್ಲಿ ಪಕ್ಷವನ್ನು ಸದೃಢವಾಗಿ ಕಟ್ಟಲು ನೂತನ ಜಿಲ್ಲಾಧ್ಯಕ್ಷರಾಗಿ ಕಂದೂರು ರಾಘವೇಂದ್ರ , ಉಪಾಧ್ಯಕ್ಷರಾಗಿ ಬಸವಪ್ರಭು , ಪ್ರಧಾನಕಾರ್ಯಯಾಗಿ ವಿಜಯಕುಮಾರ್ ಪೋಲ್ , ಕಾರ್ಯದರ್ಶಿಗಳಾಗಿ ಗಂಗಾ ಮಸ್ಕಿ, ಚಂದ್ರರೆಡ್ಡಿ ದೇಸಾಯಿ ಸೇರಿದಂತೆ ಜಿಲ್ಲಾ ಘಟಕವನ್ನು ಪುನರ್ ರಚಿಸಲಾಗಿದೆ . ಅಲ್ಲದೇ ನಿಕಟಪೂರ್ವ ಜಿಲ್ಲಾಧ್ಯಕ್ಷರಾಗಿ ನಿರುಪಾದಿ ಗೋಮರ್ಸಿಯವರನ್ನು ರಾಜ್ಯ ಯುವಘಟಕದ ಉಪಾಧ್ಯಕ್ಷರನ್ನಾಗಿ ನೇಮಿಸಿದೆ. ಈ ನಿಟ್ಟಿನಲ್ಲಿ ಜನತೆಯು ಪಕ್ಷಕ್ಕೆ ಸೇರುವ ಮೂಲಕ ಬೆಂಬಲಿಸುವಂತೆ ಕೋರಿದರು.
ಈ ಸಂದರ್ಭದಲ್ಲಿ ಕೆ.ಆರ್.ಎಸ್ ಪಕ್ಷದ ಪದಾಧಿಕಾರಿಗಳು , ಕಾರ್ಯಕರ್ತರು ಉಪಸ್ಥಿತರಿದ್ದರು.