ಭ್ರಷ್ಟಾಚಾರ ಮುಕ್ತ ಚುನಾವಣೆ ನಡೆಸಲು ಸಿರಗಾಪೂರ ಆಗ್ರಹ

ಕಲಬುರಗಿ:ಏ.19: ಈಗಾಗಲೇ ಲೋಕಸಭಾ ಚುನಾವಣೆ ಘೋಷಣೆಯಾಗಿದ್ದು ಚುನಾವಣಾ ಆಯೋಗ
ಭ್ರಷ್ಟಾಚಾರ ಮುಕ್ತ ಚುನಾವಣೆ ನಡೆಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಸಿರಗಾಪೂರ ಅವರು ಆಗ್ರಹಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ.ಮೆ.7 ರಂದು ಮತದಾನ ನಡೆಯಲಿದೆ.ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆ ಪ್ರಾರಂಭವಾಗಿದ್ದು ಚುನಾವಣೆಯಲ್ಲಿ ಗೆಲ್ಲಲು ಅಭ್ಯರ್ಥಿಗಳು ಅಕ್ರಮ ಮಾರ್ಗ ಹಿಡಿಯುತ್ತಾರೆ.ಮತದಾರರಿಗೆ ಹಣ,ಹೆಂಡದ ಆಮೀಷ ತೋರಿಸುತ್ತಾರೆ.ಚುನಾವಣ ನೀತಿ ಸಂಹಿತೆ ಕಟ್ಟು ನಿಟ್ಟಾಗಿ ಜಾರಿಗೆ ತಂದರೂ ಕಣ್ಣು ತಪ್ಪಿಸಿ ಮತದಾರರಿಗೆ ಹಣ ಹಂಚುವ ಕೆಲಸ ನಡೆಯುತ್ತದೆ.ಕೂಡಲೇ ಬಿಗಿ ಕ್ರಮ ಕೈಗೊಂಡರೆ ಅಕ್ರಮಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ.ಈಗಾಗಲೆ ಅನೇಕ ಕಡೆ ವಾಹನಗಳನ್ನು ತಪಾಸಣೆ ಮಾಡಲು ಪೆÇಲೀಸ್ ಇಲಾಖೆ ಚೆಕ್ ಪೆÇೀಸ್ಟ್ ಗಳನ್ನು ಹಾಕಲಾಗಿದೆ.ದಾಖಲೆ ಇಲ್ಲದೆ ಕೋಟ್ಯಂತರ ರೂಪಾಯಿಗಳನ್ನು ಜಪ್ತಿ ಮಾಡಿರುವ ಪೆÇಲೀಸರ ಕಾರ್ಯಾಚರಣೆ ಶ್ಲಾಘನೀಯ ಎಂದಿದ್ದಾರೆ.

ಚುನಾವಣೆ ಮುಗಿಯುವವರೆಗೂ ಚುನಾವಣಾ ಆಯೋಗ ಭ್ರಷ್ಟಾಚಾರದಲ್ಲಿ ತೊಡಗುವ ಅಭ್ಯರ್ಥಿಗಳ ಮೇಲೆ ಹದ್ದಿನ ಕಣ್ಣಿಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.