
ಬಳ್ಳಾರಿ:ಮೇ,7- ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ದೇಶ ಪ್ರೇಮ ಪಾರ್ಟಿಯ ಗುರುತಾದ ಪ್ರೆಜರ್ ಕುಕ್ಕರ್ ಗೆ ಮತ ನೀಡುವಂತೆ ಪಾರ್ಟಿಯ ನಗರ ಕ್ಷೇತ್ರದ ಅಭ್ಯರ್ಥಿ ಡಾ.ಕೆ.ಆರ್ ರವಿಕುಮಾರ್ ಮತದಾರರಲ್ಲಿ ಮನವಿ ಮಾಡಿದ್ದಾರೆ.
ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿ.ಜೆ.ಪಿ., ಹಾಗೂ ಪ್ರಾದೇಶಿಕ ಪಕ್ಷಗಳಾದ ಜೆ.ಡಿ.ಎಸ್. ಕೆಆರ್ ಪಿ ಪಕ್ಷಗಳ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಇವರ ಮಧ್ಯೆ ದೇಶ ಪ್ರೇಮ ಪಾರ್ಟಿ ಒಂದಾಗಿದೆ
ಪಕ್ಷದ ಅಭ್ಯರ್ಥಿ ಡಾ.ಕೆ.ಆರ್ ರವಿಕುಮಾರ್ ಅವರು ಈ ಮೊದಲು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈಗ ಶ್ರೀ ಎಸ್ ಷಣ್ಮುಖಪ್ಪ ಅವರು ಸ್ಥಾಪಿಸಿರುವ ದೇಶ ಪ್ರೇಮ ಪಾರ್ಟಿಯ ಸಿದ್ದಾಂತಗಳನ್ನು ಮೆಚ್ಚಿ ಆ ಪಕ್ಷದ ವತಿಯಿಂದ ನಗರ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ.
ಈ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷ ಷಣ್ಮುಖಪ್ಪ, ಉಪಾಧ್ಯಕ್ಷ ಸಂಗಮೇಶ್ವರಪ್ಪ ಸ್ವಾಮಿ , ವಿ. ರಾಮಕೃಷ್ಣ ಶೆಟ್ಟಿ, ವಿ.ಎನ್. ಪ್ರಸಾದ್ , ಮುರುಳಿ, ನಾಗರಾಜ್, ಗೋರ್ವದನ್, ಗಣೇಶ, ಇನ್ನೂಮುಂತಾದ ದೇಶ ಪ್ರೇಮ ಪಾರ್ಟಿಯ ನೂರಾರು ಕಾರ್ಯಕರ್ತರು ಮುಖಂಡರುಗಳು ಭಾಗವಹಿಸಿದ್ದರು.
2 Attachments • Scanned by Gmail