ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಆಮ್ ಆದ್ಮಿ ಪಕ್ಷ ಬೆಂಬಲಿಸಲು ಕರೆ

ಚಿತ್ರದುರ್ಗ, ಮೇ.1: ಬ್ರಿಟೀಷರು ನಾಚುವ ರೀತಿಯಲ್ಲಿ  ಪ್ರಧಾನಿ ಮೋದಿ ಸರ್ಕಾರ ಹಣವನ್ನು ಲೂಟಿ‌ ಮಾಡುತ್ತಿದೆ ಎಂದು ಪಂಜಾಬ್ ರಾಜ್ಯದ ಮುಖ್ಯಮಂತ್ರಿ ಭಗವಾನ್ ಮಾನ್ ಸಿಂಗ್ ಆರೋಪಿಸಿದ್ದಾರೆ.ನಗರದ ಹಳೇ ಮಾಧ್ಯಮಿಕ ಶಾಲಾ ಮೈದಾನದಲ್ಲಿ   ಆಮ್ ಆದ್ಮಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ 2023 ರ ವಿಧಾನಸಭಾ ಚುನಾವಣೆ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಬ್ರಿಟೀಷರು ಭಾರತ ದೇಶವನ್ನು ಸುಮಾರು ವರ್ಷಗಳ ಕಾಲ ಆಳ್ವಿಕೆ ಮಾಡಿ ಇಲ್ಲಿ ಹಣ ಸಂಪತ್ತನ್ನು ಲೂಟಿ ಮಾಡಿದರು. ಅದೇ ಬಹಳ ದೊಡ್ಡ ಮಟ್ಟದ್ದು ಎಂದು ನಾವುಗಳು ಭಾವಿಸಿದ್ದೇವು ಆದರೆ ಪ್ರಸ್ತುತ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ದೇಶದ ಎಲ್ಲಾ ಸರ್ಕಾರಿ ಸ್ವಾಮ್ಯಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವ ಮೂಲಕ ದೇಶದ ಸಂಪತ್ತು ಸೇರಿಕೊಂಡು ಬಡ ಜನರು ಕಟ್ಟುತ್ತಿರುವ ತೆರಿಗೆ ಹಣವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಇಂತಹ ಸರ್ಕಾರ ನಮಗೆ ಬೇಕಾ ? ಪ್ರಶ್ನಿಸಿದ ಅವರು, ಐದು ವರ್ಷಕ್ಕೊಮ್ಮೆ ಬದಲಾವಣೆಗಾಗಿ ಬರುವ ಈ ಚುನಾವಣೆಯನ್ನು ಬಳಸಿಕೊಂಡು ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸಲು ಮುಂದಾಗಿರುವ ಆಮ್ ಆದ್ಮಿ ಪಕ್ಷಕ್ಕೆ ಮತ ಹಾಕಿ ನಮಗೆ ಬೆಂಬಲ‌ ನೀಡಬೇಕು ಎಂದು ಮನವಿ ಮಾಡಿದರು.