ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಪೊರಕೆಗೆ ಮತ ನೀಡಿ: ಕೇಶವ ರೆಡ್ಡಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.26: ಇಲ್ಲಿನ ವಾರ್ಡ್ ನಂಬರ್ 34, 35, 39 ನೇ ವಾರ್ಡಿನ ವಿದ್ಯಾನಗರ, ಭತ್ರಿ, ಇಂದಿರಾನಗರ, ಸತ್ಯವಾಣಿ ನಗರ, ಹೌಸಿಂಗ್ ಬೋರ್ಡ್  ಕಾಲೋನಿಯಲ್ಲಿ ಇಂದು ಆಮ್ ಆದ್ಮಿ  ಪಕ್ಷದ ಅಭ್ಯರ್ಥಿ  ಕೊರಲಗುಂದಿ ದೊಡ್ಡ ಕೇಶವ ರೆಡ್ಡಿ ಮತ್ತು ಅವರ ಪುತ್ರಿ ಮಂಜುಳಾ ಮನೋಹರ ರೆಡ್ಡಿ ಅವರು ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.
ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸಿ. ಈಗಾಗಲೇ ದೇಶದ  ದೆಹಲಿ ಮತ್ತು ಪಂಜಾಬ್ ರಾಜ್ಯಗಳಲ್ಲಿ   ನಮ್ಮ ಪಕ್ಷದ ಸರ್ಕಾರ ಉತ್ತಮ ಆಡಳಿತ ನೀಡಿ ಜನಮನ್ನಣೆ ಗಳಿಸಿದೆ.  ಕರ್ನಾಟಕದಲ್ಲಿ ವಿಶೇಷವಾಗಿ ಬಳ್ಳಾರಿಯಲ್ಲಿಯೂ ಸಹ ಉತ್ತಮ ಆಡಳಿತ ಮತ್ತು ಅಭಿವೃದ್ಧಿಗಾಗಿ ನಮ್ಮ ಪಕ್ಷದ ಪೊರಕೆ  ಗುರುತಿಗೆ ತಮ್ಮ  ಮತ ಹಾಕಿರಿ ಮತ್ತು ಹಾಕಿಸಿರಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಉಸ್ತುವಾರಿ ನವಲಿ ಹಿರೇಮಠ, ಮಹಾನಗರದ ಅಧ್ಯಕ್ಷ  ಜೆ. ವಿ. ಮಂಜುನಾಥ, ವಿ.ಬಿ. ಮಲ್ಲಪ್ಪ ಟಿ, ಕಿರಣ್ ಕುಮಾರ್, ಅಮೆರ್ ಖಾದ್ರಿ, ನೂರ್, ಪ್ರದೀಪ್ ರೆಡ್ಡಿ ರಾಘವ್ ರೆಡ್ಡಿ ಪ್ರಸಾದ್ ರೆಡ್ಡಿ, ರಘು ಶೆಟ್ಟಿ, ದಿವಾಕರ್, ಶಿವಲಿಂಗ ನಾಯಕ್, ಸುಹೇಲ್, ಅಮಿತ್, ಪ್ರತಾಪ್, ಶೇಖರ್ ಯಾದವ್  ಮೊದಲಾದವರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು.