ಭ್ರಷ್ಟಾಚಾರ ತೊಡಗಿಸಲು ಸಾಹಿತಿಗಳು ಮುಂದಾಗಲಿ : ಓಂಪ್ರಕಾಶ ದಡ್ಡೆ

ಬೀದರ್:ಜ.11: ಸತ್ಯದ ಪರ ಹೋರಾಟದ ದ್ವನಿಯಾಗಿ ನಿಲ್ಲಬೇಕು ಹಾಗೆವ ನಮ್ಮ ಬದುಕು ಬರಹ ಒಂದಾಗಿರಬೇಕು, ಸಾಮಾಜಿಕ ಅನಿಷ್ಟತೆಗಳಲ್ಲಿ ಒಂದಾದ ಭ್ರಷ್ಟಾಚಾರ ತೊಡಗಿಸಲು ಸಾಹಿತಿಗಳು ಮುಂದಾಗಲಿ ಎಂದು ಕರ್ನಾಟಕ ಸರಕಾರದಿಂದ ರಾಜ್ಯಮಟ್ಟದ ‘ ಉತ್ತಮ ಉಪನ್ಯಾಸಕ’ ಪ್ರಶಸ್ತಿ ಪಡೆದ ಸಾಹಿತಿ ಓಂಪ್ರಕಾಶ ದಡ್ಡೆ ನುಡಿದರು.
ಅವರು ಬೀದರ ಜಿಲ್ಲಾ ಮತ್ತು ತಾಲ್ಲೂಕು ಕಸಾಪದಿಂದ ಶನಿವಾರ ಇಲ್ಲಿನ ಉಪನ್ಯಾಸಕ ಹಾಗೂ ಸಾಹಿತಿ ಓಂಪ್ರಕಾಶ ದಡ್ಡೆ ಅವರ ನಿವಾಸದಲ್ಲಿ ನಡೆದ ಮನೆಯಂಗಳದಲ್ಲಿ ಮಾತು ಸಂವಾದ ಕಾರ್ಯಕ್ರಮದಲ್ಲಿ ತಮ್ಮ ಜೀವನಾನುಭವಗಳನ್ನು ಹಂಚಿಕೊಳ್ಳುತ್ತ ಕಳೆದ ಮೂರು ದಶಕಗಳಿಂದ ಸಾರ್ಥಕ ಸೇವೆ ಸಲ್ಲಿಸುತ್ತಿದ್ದು ವಿದ್ಯಾರ್ಥಿ ದೆಸೆಯಿಂದಲೆ ಸಾಹಿತ್ಯ ಸಂಸ್ಕøತಿಯ ಅಭಿರುಚಿ ಬೆಳೆಸಿಕೊಂಡ ನಾನು ಬಾಲ್ಯದಿಂದಲೆ ಬಂಡಾಯ ಮನೋಧರ್ಮ ಬೆಳೆಸಿಕೊಂಡವನು. ಕಲ್ಮೂಡದ ದತ್ತ ದಿಗಂಬರ ಆಶ್ರಮದ ಶಾಲಾ ಜೀವನ ನಮ್ಮಲ್ಲಿ ಶಿಸ್ತು ಸಮಯಪ್ರಜ್ಞೆ ಬೆಳೆಸಿತು. ದಿ. ಪ್ರೊ. ವೀರೇಂದ್ರ ಸಿಂಪಿ, ಮಮಾ ಬೋರಾಳಕರ್, ಶ್ರೀಕಾಂತ ಪಾಟೀಲ ದೇಶಾಂಶ ಹುಡಗಿ ಮೊದಲಾದ ಸಾಹಿತಿಗಳ ಒಡನಾಟದಿಂದ ನಾನು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು. ಶಿವಕುಮಾರ ಕಟ್ಟೆ, ರುಕ್ಮೊದ್ದಿನ್ ಇಸ್ಲಾಂಪುರ, ತಯ್ಯಬ್ ಮೊದಲಾದವರು ನನ್ನ ಬೆನ್ನಹಿಂದಿನ ಬೆಳಕಾಗಿ ನಿಂತವರಾಗಿದ್ದಾರೆ.
ಸಾಹಿತಿ ಡಾ. ರಾಜಕುಮಾರ ಅಲ್ಲೂರೆ ನಡೆಸಿಕೊಟ್ಟ ಸಂವಾದಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಅವರು ಹೆಜ್ಜೆ (ಕವನ ಸಂಕಲನ) ಕವಿಗಳು ಕಂಡ ಬಸವಣ್ಣ. (ಸಂಪಾದನೆ) ‘ಮಗು ನೀ ಜ್ಞಾನಿಯಾಗು’ ‘ನಮ್ಮ ಮಕ್ಕಳಿಗೆ ನಮ್ಮ ಸಂಸ್ಕೃತಿ’ ‘ ಮಕ್ಕಳಿಗಾಗಿ ನಾವು’ ಮೊದಲಾದ ಮಕ್ಕಳ ಪುಸ್ತಕ, ‘ಬೇಮಳಖೇಡ ಇತಿಹಾಸ’ ‘ವೈಜ್ಞಾನಿಕ ದೃಷ್ಟಿಯಲ್ಲಿ ವಿಭೂತಿ’ ಎಂಬ ವೈಚಾರಿಕ ಲೇಖನಗಳ ಕೃತಿ, ‘ನಾ ಕಂಡ ಮಥುರಾ’ ಪ್ರವಾಸ ಕಥನ ಸೇರಿದಂತೆ ಹಲವಾರು ಕೃತಿಗಳ ರಚನೆಯ ಹಿಂದಿರುವ ಆಶಯಗಳನ್ನು ವ್ಯಕ್ತಪಡಿಸುತ್ತ ಸಾಹಿತ್ಯದ ಬಗ್ಗೆ ಒಲವಿದ್ದರೆ ಅವಕಾಶವಿಲ್ಲದಿದ್ದರೂ ಅವಕಾಶಗಳನ್ನು ಸೃಷ್ಠಿಸಿಕೊಳ್ಳಬೇಕೆಂದು ನುಡಿದರು.
ಪದವಿಪೂರ್ವ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷರಾದ ಓಂಕಾರ ಸೂರ್ಯವಂಶಿ ಅವರು ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತ ತಾಯಿ, ತಾಯಿನೆಲದ ಋಣ ತೀರಿಸುವುದು ನಮ್ಮ ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷರಾದ ಸುರೇಶ ಚನಶೆಟ್ಟಿಯವರು ಯಾವುದೆ ಭೇದಭಾವ, ಗುಂಪುಗಾರಿಕೆಯಿಲ್ಲದೆ, ಎಲ್ಲರನ್ನು ಒಳಗೊಳ್ಳುವ ಸಾಂಸ್ಕøತಿಕ ವಾತಾವರಣ ನಿರ್ಮಿಸಿ ಕನ್ನಡಿಗರ ಮನಸ್ಸನ್ನು ಕಟ್ಟುವ ಕೆಲಸ ಮಾಡುತ್ತಿದ್ದಾರೆಂದು ಅಭಿಪ್ರಾಯ ಪಟ್ಟರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ ಚನಶೆಟ್ಟಿಯವರು ಮಾತನಾಡುತ್ತ ಸಾಹಿತಿಗಳ ಮನೆಗೆ ಪರಿಷತ್ತು ಬಂದು ಅವರ ಬದುಕಿನ ಸಂವೇದನೆಗಳನ್ನು ಸುತ್ತಲಿನ ಸಮಾಜಕ್ಕೆ, ಜನಮಾನಸಕ್ಕೆ ತಲುಪಿಸುವ ಉದ್ದೇಶದ ಜೊತೆಗೆ ಕನ್ನಡ ಸಾಹಿತ್ಯ ಸಂಸ್ಕøತಿಯ ಅಸ್ಮಿತೆ ಉಳಿಸಲು ಇಂಥ ಕಾರ್ಯಕ್ರಮಗಳು ಸಹಾಯಕವಾಗುತ್ತವೆಂದು ಅಭಿಪ್ರಾಯ ಪಟ್ಟರು.
ತಾಲ್ಲೂಕು ಕಸಾಪ ಅಧ್ಯಕ್ಷರಾದ ಎಂ. ಎಸ್. ಮನೋಹರ ಅವರು sಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೇಶವ ದಡ್ಡೆ ಕವನ ವಾಚನ ಮಾಡಿದರು. ರೇಣುಕಾ ಓಂಪ್ರಕಾಶ ದಡ್ಡೆ ದಂಪತಿಗಳನ್ನು ಸನ್ಮಾನಿಸಲಾಯಿತು
ಸಾಹಿತಿಗಳಾದ ಎಂ. ಜಿ. ದೇಶಪಾಂಡೆ, ಡಾ. ರಘುಶಂಖ ಭಾತಂಬ್ರಾ, ಶಿವಕುಮಾರ ಕಟ್ಟೆ. ಬಾಬುರಾವ ದಾನಿ. ಬಿ.ಜೆ.ವಿಷ್ಣುಕಾಂತ .ರಮೇಶ ಬಿರಾದಾರ. ಡಾ. ಸಂಜೀವಕುಮಾರ ಅತಿವಾಳೆ. ದೇವೇಂದ್ರ ಕರಂಜೆ. ಡಾ. ಬಸವರಾಜ ಬಲ್ಲೂರ, ಜಗನ್ನಾಥ ಕಮಲಾಪುರೆ, ಉಪನ್ಯಾಸಕರಾದ ಪ್ರೇಮನಾಥ ಪಂಚಾಳ. ರಮೇಶ್ ಪಾಟೀಲ. ಬಾಲಾಜಿ ಡಿ. ಅಶೋಕ ಬುದಿಯಾಳ ಸುಭಾಷ್ ರಾಠೋಡ ಶಿವಶಂಕರ್ ಮೊದಲಾದವರು ಭಾಗವಹಿಸಿದ್ದರು. ರುಕ್ಮೊದ್ದಿನ್ ಇಸ್ಲಾಂಪೂರ ಸ್ವಾಗತಿಸಿದರೆ, ಕಲ್ಯಾಣರಾವ ಚಳಕಾಪೂರೆ ನಿರೂಪಿಸಿದರು. ಟಿ ಎಂ ಮಚ್ಚೆ. ವಂದಿಸಿದರು.