ಭ್ರಷ್ಟಾಚಾರ ಕಂಡು ಬಂದರೆ ದೂರು ನೀಡಿ

(ಸಂಜೆವಾಣಿ ವಾರ್ತೆ)
ಬೈಲಹೊಂಗಲ,ಆ10: ಭ್ರಷ್ಟಾಚಾರಕ್ಕ್ರೆ ಅವಕಾಶ ನೀಡದೇ ಅಗತ್ಯ ಅವಧಿಯಲ್ಲಿ ಸಾರ್ವಜನಿಕರ ಸೇವೆಗಳನ್ನು ಪೂರೈಸಿ ಸರಕಾರಿ ಕರ್ತವ್ಯ ಮೆರೆಯಬೇಕೆಂದು ಬೆಳಗಾವಿಯ ಲೋಕಾಯುಕ್ತ ಪೆÇಲೀಸ್ ಅಧೀಕ್ಷಕ ಹನುಮಂತರಾಯ ಹೇಳಿದರು.
ಅವರು ಪಟ್ಟಣದ ಹೊಸೂರ ರಸ್ತೆಯಲ್ಲಿನ ತಾಲೂಕಾ ಪಂಚಾಯತ ಕಾರ್ಯಾಲಯದ ಸಭಾಭವನದಲ್ಲಿ ಕರ್ನಾಟಕ ಲೋಕಾಯುಕ್ತ ಬೆಳಗಾವಿ ಜಿಲ್ಲಾ ಕಚೇರಿ ಇವರ ಆಶ್ರಯದಲ್ಲಿ ನಡೆದ ಕಾನೂನು ಅರಿವು ಹಾಗೂ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿ, ಪ್ರಮಾಣಿಕತೆಯಿಂದ ನಾಗರಿಕರ ಸೇವೆ ಮಾಡಿ ಜವಾಬ್ದಾರಿ ಮೆರೆಯಬೇಕು. ಸರಕಾರ ರೂಪಿಸಿದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಪ್ರತಿ ಇಲಾಖೆಯ ಅಧಿಕಾರಿಗಳು ಯಾವದೇ ಆಶೆಗಳಿಗೆ ಬಲಿಯಾಗದೇ ಪ್ರಯತ್ನಿಸಬೇಕೆಂದರು.
ಲೋಕಾಯುಕ್ತ ಪೆÇೀಲಿಸ್ ಉಪಾಧೀಕ್ಷರಾದ ಜೆ. ರಘು ಮಾತನಾಡಿ, ಲೋಕಾಯುಕ್ತದ ವ್ಯವಸ್ಥೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವದಕ್ಕಾಗಿ ಕಾನೂನು ಅರಿವು- ಜನ ಸಂಪರ್ಕ ಸಭೆಗಳನ್ನು ಪ್ರತಿ ತಾಲೂಕಿನಲ್ಲಿ ಮಾಡಲಾಗುತ್ತಿದ್ದು ಸರಕಾರದ ಸೇವೆಯಲ್ಲಿ ಅಧಿಕಾರಿಗಳು ವಿಳಂಬ ನೀತಿ ಅನುಸರಿಸಿ ಯಾವದೇ ಅಪೇಕ್ಷೆಗಳನ್ನು ಬಯಸುತ್ತಿದ್ದರೆ ಲೋಕಾಯುಕ್ತ ಕಚೇರಿಗೆ ದೂರು ನೀಡಬೇಕೆಂದು ತಿಳಿಸಿದರು.
ಚರ್ಚಿತ ಸಭೆಯ ಸಂದರ್ಭದಲ್ಲಿ ಪಟ್ಟಣದ ಮಿನಿ ವಿಧಾನಸೌಧದಲ್ಲಿನ ಉಪ ನೊಂದಣಿ ಕಛೇರಿಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಏಜೆಂಟರ ಹಾವಳಿ ಇಲ್ಲಿ ಹೆಚ್ಚಾಗಿದ್ದು ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ನಾಗರಿಕರೊಬ್ಬರು ಆರೋಪಿಸಿದ ಪ್ರಯುಕ್ತ ಪರೀಶೀಲಿಸಿ ಕ್ರಮ ಕೈಗೊಳ್ಳುವದರ ಬಗ್ಗೆ ಗಮನ ಹರಿಸುತ್ತೇವೆಂದು ಅಧಿಕಾರಿಗಳ ವರ್ಗ ತಿಳಿಸಿತು.
ಪಟ್ಟಣದ ಚನ್ನಮ್ಮ ಸಮಾಧಿ ರಸ್ತೆಯ ಅವ್ಯವಸ್ಥೆ, ತಾಲೂಕಿನ ಕಚೇರಿಗಳಲ್ಲಿನ ಅವ್ಯವಸ್ಥೆ, ರಾಜ್ಯ ಹೆದ್ದಾರಿಗಳಲ್ಲಿನ ರೋಡ ಹಂಪ್ಸ್‍ಗಳಿಂದ ಆಗುತ್ತಿರುವ ಸಮಸ್ಯ, ಕೃಷಿ, ಗ್ರಾಮಾಭಿವೃದ್ದಿ, ಪುರಸಭೆ, ಲೋಕೋಪಯೋಗಿ, ಅಬಕಾರಿ ಮುಂತಾದ ಇಲಾಖೆಗಳಲ್ಲಿನ ಸೇವೆಯ ನ್ಯೂನ್ಯತೆಯ ಬಗ್ಗೆ ಆರೋಪ, ಅಹವಾಲು ಕೇಳಿಬಂದಿದ್ದರಿಂದ ಸಂಬಂಧಿಸಿದ ಅಧಿಕಾರಿಗಳಿಗೆ ಇತ್ಯರ್ಥ ಪಡಿಸಲು ಲೋಕಾಯುಕ್ತ ಅಧಿಕಾರಿಗಳು ಆದೇಶಿಸಿದರು.
ಲೋಕಾಯುಕ್ತ ಪೆÇೀಲಿಸ್ ಉಪಾಧೀಕ್ಷಕರಾದ ಬಿ.ಎಸ್.ಪಾಟೀಲ, ಭರತ ಎಸ್.ಆರ್. ಪೆÇೀಲಿಸ್ ನಿರೀಕ್ಷಕ ಯು.ಎಸ್.ಆವಟಿ, ಲೋಕಾಯುಕ್ತ ಉಪ ನೀರಿಕ್ಷಕ ಎ.ಆರ್. ಕಲಾದಗಿ. ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಎಸ್. ಎಸ್. ಸಂಪಗಾಂವಿ ಆರಕ್ಷಕ ಠಾಣೆಯ ಉಪನೀರಿಕ್ಷಕ ಪಿ. ವ್ಹಿ. ಸಾಲಿಮಠ, ಗ್ರೇಡ್ 2 ಪ್ರಭಾರಿ ತಹಶೀಲ್ದಾರ ಜಗದೀಶ ಅಷ್ಟಗಿಮಠ ಹಾಗೂ ವಿವಿಧ ಇಲಾಖೆಗಳ ಅಧಿಕಾರಿ ವರ್ಗ, ಸಾರ್ವಜನಿಕರು ಪಾಲ್ಗೊಂಡಿದ್ದರು.
ತಾಲೂಕಾ ಅಕ್ಷರ ದಾಸೋಹ ಕಾರ್ಯನಿರ್ವಹಣಾಧಿಕಾರಿ ಡಾ.ಪ್ರಕಾಶ ಮೆಳವಂಕಿ ಸ್ವಾಗತಿಸಿದರು. ಸಹಾಯಕ ನಿರ್ಧೇಶಕ ಗ್ರಾಮೀಣ ಉದ್ಯೋಗ ಅಧಿಕಾರಿ ವಿಜಯ ಪಾಟೀಲ ವಂದಿಸಿದರು. ತಾಲೂಕಿನ ಪ್ರತಿ ಇಲಾಖೆಯ ಅಧಿಕಾರಿ ವರ್ಗ ಈ ಸಂದರ್ಭದಲ್ಲಿ ಹಾಜರಿದ್ದರು.