ನವದೆಹಲಿ,ಏ.22-: ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿದ್ದ ಅವಧಿಯಲ್ಲಿ ರಾಜ್ಯ ಸರಕಾರಕ್ಕೆ ಆರೋಗ್ಯ ವಿಮೆ ಒದಗಿಸುವ ಒಪ್ಪಂದಕ್ಕೆ ಸಂಬಂಧಿಸಿದ ಕಡತ ಇತ್ಯರ್ಥಮಾಡಲು 300 ಕೋಟಿ ರೂಪಾಯಿ ಲಂಚ ನೀಡಲಾಗಿತ್ತು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್ ಅವರನ್ನು ಸಿಬಿಐ ಮುಂದಿನ ವಾರ ವಿಚಾರಣೆ ನಡೆಸಲಿದೆ.ಕಿರು ಜಲವಿದ್ಯುತ್ ಯೋಜನೆಗೆ ಸಂಬಂಧಿಸಿದ ನೌಕರರಿಗೆ ಸಂಬಂಧಿಸಿದ ಕಡತ ಸೇರಿದಂತೆ ಎರಡು ಕಡತಗೊಳಿಗೆ ಸಹಿ ಹಾಕಲು ಲಂಚ ನೀಡಲು ಮುಂದಾಗಿದ್ದರು ಎಂದು ಅರೋಪ ಮಾಡಿದ್ದರು.ಎರಡು ಕಡತಗಳನ್ನು ತೆರವುಗೊಳಿಸಲು ತನಗೆ 300 ಕೋಟಿ ರೂ. ಆಫರ್ ನೀಡಲಾಗಿತ್ತು ಎಂಬ ಮಲಿಕ್ ಹೇಳಿಕೆಯನ್ನು ಆಧರಿಸಿ, ಸಿಬಿಐ ಕಳೆದ ವರ್ಷ ಏಪ್ರಿಲ್‌ನಲ್ಲಿ ಎರಡು ಪ್ರಕರಣಗಳನ್ನು ದಾಖಲಿಸಿ 15 ಸ್ಥಳಗಳಲ್ಲಿ ಶೋಧ ನಡೆಸಿತ್ತು.ಮಲಿಕ್ ತನ್ನ ಹೇಳಿಕೆಯಲ್ಲಿ ಹೆಸರಿಸಿರುವ ಕಾರ್ಯದರ್ಶಿ ಶ್ರೇಣಿಯ ಅಧಿಕಾರಿಯನ್ನು ಸಹ ಸಂಸ್ಥೆ ಪ್ರಶ್ನಿಸಲಿದೆ ಎಂದು ಮೂಲವೊಂದು ತಿಳಿಸಿದೆ.ನೋಟಿಸ್ ಬಂದ ಬೆನ್ನಲ್ಲೇ ಮಲಿಕ್, ” ಸತ್ಯವನ್ನು ಮಾತನಾಡುವ ಮೂಲಕ ಕೆಲವರ ಪಾಪಗಳನ್ನು ಬಹಿರಂಗಪಡಿಸಿದ್ದೇನೆ. ಬಹುಶಃ ಅದಕ್ಕಾಗಿಯೇ ಸಿಬಿಯ ಬಂದಿದೆ. ನಾನು ರೈತನ ಮಗ, ನಾನು ಗಾಬರಿಯಾಗುವುದಿಲ್ಲ. ಸತ್ಯದ ಪರವಾಗಿ ನಿಲ್ಲುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.ಅರೆಸೈನಿಕ ಸಿಬ್ಬಂದಿಯನ್ನು ಸಾಗಿಸಲು ವಿಮಾನವನ್ನು ಒದಗಿಸುವಂತೆ ಸಿಆರ್‌ಪಿಎಫ್‌ನ ಮನವಿಯನ್ನು ಗೃಹ ಸಚಿವಾಲಯ ಒಪ್ಪಿಕೊಂಡಿದ್ದರೆ ಪುಲ್ವಾಮಾ ಭಯೋತ್ಪಾದಕ ದಾಳಿ ತಡೆಯಬಹುದಿತ್ತು ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಹೇಳಿದ್ದಾಗಿ ಮಲಿಕ್‌ಗೆ ಹೇಳಿದ್ದಾರೆ.ರಾಜ್ಯದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಕುರಿತು ಜೆ ಮತ್ತು ಕೆ ಗವರ್ನರ್ ಆಗಿ ಮಾಡಬೇಕಾದ ಅಗತ್ಯವಿದ್ದರೂ ಅವರನ್ನು ಸಂಪರ್ಕಿಸಿಲ್ಲ ಮತ್ತು ಅವರು ಏನು ಮಾಡಬೇಕೆಂದು ಕೇಳಿದ್ದಕ್ಕೆ ಸಹಿ ಹಾಕಿದ್ದಾರೆ ಎಂದು ಅವರು ಹೇಳಿದ್ದಾರೆ.ಮೇ 27-28 ರಂದು ತನಿಖಾ ಸಂಸ್ಥೆಯ ಪ್ರಧಾನ ಕಚೇರಿ ಅಥವಾ ಅದರ ಅತಿಥಿ ಗೃಹದಲ್ಲಿ ನಿಗದಿಪಡಿಸುವ ಸಾಧ್ಯತೆಯಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ,ಜಮ್ಮು ಕಾಶ್ಮೀರ ನೌಕರರ ಆರೋಗ್ಯ ವಿಮಾ ಯೋಜನೆಯ ಗುತ್ತಿಗೆಯನ್ನು ಖಾಸಗಿ ಕಂಪನಿಯೊಂದಕ್ಕೆ ನೀಡುವುದು ಮತ್ತು 2017-18ರಲ್ಲಿ 60 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡುವುದು ಮತ್ತು ಇನ್ನೊಂದರ ಆಯ್ಕೆಯ ಅಕ್ರಮಗಳ ಆರೋಪಗಳನ್ನು ಪರಿಶೀಲಿಸಲು ಜಮ್ಮು ಕಾಶ್ಮೀರ ಸರ್ಕಾರದ ಕೋರಿಕೆಯ ಮೇರೆಗೆ ಸಿಬಿಐ ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದೆ.2019 ರಲ್ಲಿ ಕಿರು ಜಲವಿದ್ಯುತ್ ಯೋಜನೆಗೆ ಸಂಬಂಧಿಸಿದ ಸಿವಿಲ್ ಕಾಮಗಾರಿಗಳನ್ನು ನಿರ್ವಹಿಸಲು ಖಾಸಗಿ ಸಂಸ್ಥೆಗೆ 2,200 ಕೋಟಿ ರೂ ಮೊತ್ತದ ಯೋಜನೆ ಇದಾಗಿದೆ.