ಭ್ರಷ್ಟಾಚಾರ ಆರೋಪಕ್ಕೆ ಸಿದ್ದು ಉತ್ತರಿಸಲಿ

ಹುಬ್ಬಳ್ಳಿ, ಏ೨೮: ವಿಪಕ್ಷ ನಾಯಕ ಸಿದ್ಧರಾಮಯ್ಯನವರ ವಿರುದ್ಧ ೮ ಸಾವಿರ ಕೋಟಿ ರೂ. ಭ್ರಷ್ಠಾಚಾರದ ಆರೋಪವಿದ್ದು ಅದಕ್ಕೆ ಅವರು ಉತ್ತರ ನೀಡಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ವಿರುದ್ಧ ಭ್ರಷ್ಠಾಚಾರದ ಆರೋಪವೇನಾದರೂ ಇದ್ದರೆ ಮಾಡಲಿ ನಾನು ಉತ್ತರ ಕೊಡಲು ಸಿದ್ಧ ಎಂದು ಟಾಂಗ್ ನೀಡಿದರು.
ಸಿದ್ಧರಾಮಯ್ಯನವರ ಮತಬ್ಯಾಂಕ್ ಛಿದ್ರವಾಗಿದ್ದು ಅವರು ನನ್ನನ್ನು ಟಾರ್ಗೆಟ್ ಮಾಡುವುದು ಸಹಜ ಜನರನ್ನು ಗುಲಾಮರೆಂದು ತಿಳಿದುಕೊಂಡಿರುವ ಕಾಂಗ್ರೆಸ್ ನವರು ಚುನಾವಣಾ ಸಂದರ್ಭದಲ್ಲಿ ಹತಾಶರಾಗಿದ್ದಾರೆ. ಜನ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ನುಡಿದರು.
ಸಿದ್ಧರಾಮಯ್ಯ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ೫೦ ವರ್ಷಗಳ ಕಾಲ ಸಾರ್ವಜನಿಕ ಜೀವನದಲ್ಲಿ ಕಳೆದಿದ್ದಾರೆ, ಕೊನೆಯ ಹಂತದಲ್ಲಿ ಗೌರವಯುತವಾಗಿ ನಡೆದುಕೊಂಡರೇ ಅದು ಶೋಭೆ ತರುತ್ತದೆ ಇಲ್ಲದಿದ್ದರೆ ಜನತೆಯ ಪ್ರಶ್ನೆಗೆ ಉತ್ತರಿಸಬೇಕಾಗುತ್ತದೆ ಎಂದು ಅವರು ಕುಟಕಿದರು.