ಭ್ರಷ್ಟಾಚಾರದ ವಿರುದ್ಧ ಹೋರಾಡಲು ಗೋಪಿಕೃಷ್ಣ ಕರೆ


ಧಾರವಾಡ ನ.03-ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ ಎಂದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಅಧ್ಯಕ್ಷ ಪಿ ಗೋಪಿಕೃಷ್ಣ ಹೇಳಿದರು. ಅವರು ಸೋಮವಾರದಂದು ಧಾರವಾಡದ ಡಾ: ಡಿ ಜಿ ಶೆಟ್ಟಿ ಪ್ರಥಮ ದರ್ಜೆ ಕಲೇಜಿನಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು “ಭಾರತದಿಂದ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವೇ” ಎಂಬ ವಿಷಯದ ಮೇಲೆ ಏರ್ಪಡಿಸಿದ್ದ ಚರ್ಚಾ ಕೂಟವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಭ್ರಷ್ಟಾಚಾರ, ರಾಜಕೀಯ ಅಥವಾ ಅಧಿಕಾರಿಶಾಹಿ ವರ್ಗಕ್ಕಷ್ಟೇ ಸೀಮಿತವಾಗಿಲ್ಲ.ಅದು ಸಮಾಜದ ಉದ್ದಗಲಕ್ಕೂ ಒಂದಿಲ್ಲೊಂದು ಕಾರಣದಿಂದ ಆಳವಾಗಿ ಬೇರೂರಿದೆ. ಅದನ್ನು ಬೇರು ಸಹಿತ ಕಿತ್ತೊಗೆಯಲು ಪ್ರತಿಯೊಬ್ಬರೂ ದೀಕ್ಷಾಬದ್ಧರಾಗಬೇಕಾದ ಕಾಲ ಇದೀಗ ಸನ್ನಿಹಿತವಾಗಿದೆ. ಈ ನಿಟ್ಟಿನಲ್ಲಿ ಯುವಕರು ಅದರಲ್ಲೂ ವಿದ್ಯಾರ್ಥಿಗಳು ಮುಂದಾಳತ್ವ ವಹಿಸಬೇಕು ಎಂದು ಗೋಪಿಕೃಷ್ಣ ಹೇಳಿದರು. ಆನ್ ಲೈನ್ ವಂಚನೆ ಬಗ್ಗೆ ತಿಳಿಸಿದ ಅವರು ಯಾವ ಬ್ಯಾಂಕೂ ಮಾಹಿತಿಯನ್ನು ದೂರವಾಣಿ ಮೂಲಕ ಕೇಳುವುದಿಲ್ಲ. ಹಾಗಾಗಿ ಗ್ರಾಹಕರು, ತಮ್ಮ ಖಾತೆಗಳ ವಿವರ, ಆಧಾರ್ ಸಂಖ್ಯೆ ಮತ್ತು ಏಟಿಎಮ್ ಪಿನ್ ಮುಂತಾದವುಗಳನ್ನು ಯರೊಂದಿಗೂ ಹಂಚಿಕೊಳ್ಳದಿರಲು ಸುಚಿಸಿದರು.ಉಪ ಪ್ರಾಂಶುಪಾಲ ಡಾ: ಎಸ್ ಎಮ್ ಸಾಲಿಮಠ ಮಾತನಾಡಿ ಚರ್ಚಾ ಸ್ಪರ್ಧೆ ವಿದ್ಯಾರ್ಥಿಗಳ ಸಂವಹನ ಕಲೆಯನ್ನು ಹೆಚ್ಚಿಸುವಲ್ಲಿ ಪೂರಕವಾಗಿದೆ. ಹೆಚ್ಚಿನ ಓದು ವಿದ್ಯಾರ್ಥಿಗಳ ಜ್ಞಾನವನ್ನು ಹೆಚ್ಚಿಸುತ್ತವೆ ಎಂದರು. ಬ್ಯಾಂಕಿನ ಮುಖ್ಯ ಜಾಗೃತ ಅಧಿಕಾರಿ ಶೈಲ್ ಪಾಟೀಲ ಮಾತನಾಡಿ ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ಮಾಹಿತಿ ಹಕ್ಕು ಕಾ0iÉ್ದು , ಲೋಕಾಯುಕ್ತ, ಭಾರತೀಯ ದಂಡ ಸಂಹಿತೆಯ ವಿವಿಧ ಕಲಮುಗಳ ಬಗ್ಗೆ ಮಾಹಿತಿ ನೀಡಿದರು.ಬ್ಯಾಂಕಿನ ಹಿರಿಯ ಪ್ರಬಂಧಕ ಉಲ್ಲಾಸ ಗುನಗಾ ಆನ್ ಲೈನ್ ಚರ್ಚಾ ಸ್ಪರ್ಧೆ ಸಂಘಟಿಸಿದರು.
ಕಾವೇರಿದ ಚರ್ಚೆಯಲ್ಲಿ ಎಸ್ ಡಿ ಶರತ್ ಮೊದಲ ಸ್ಥಾನ ಪಡೆದುಕೊಂಡರು. ಅಕ್ಷಯ ಜಹಗೀರದಾರ ದ್ವಿತೀಯ ಸ್ಥಾನ ಪಡೆದರೆ ರೋಹಿತ್ ಮೂರನೇ ಸ್ಥಾನ ಪಡೆದುಕೊಂಡರು.ಕಾಲೇಜು ಆಡಳಿತ ಮಂಡಳಿಯ ರಶ್ಮಿ ಶೆಟ್ಟಿ, ಮಂಜುರಾಮ ಶೆಟ್ಟಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.