ಭ್ರಷ್ಟಾಚಾರದ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಿ:ಸಂತೋಷ್‌ಹೆಗ್ಡೆ

ಪಾವಗಡ, ಜೂ. ೧೦- ಹೊಸ ಸರ್ಕಾರ ಭ್ರಷ್ಟಾಚಾರದ ವಿರುದ್ದ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂಬ ಭಾವನೆ ನನ್ನದು. ಭ್ರಷ್ಠಾಚಾರದ ವಿರುದ್ದ ಹೋರಾಟ ಮಾಡುವ ನಿಟ್ಟಿನಲ್ಲಿ ಹೊಸ ಸರ್ಕಾರ ಸಾಗಿದರೆ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದಂತಾಗುತ್ತದೆ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿಗಳಾದ ಸಂತೋಷ ಹೆಗ್ಗಡೆ ಹೇಳಿದರು.
ಪಟ್ಟಣದ ಸ್ವಾಮಿ ವಿವೇಕಾನಂದ ಅರೋಗ್ಯ ಕೆಂದ್ರದಲ್ಲಿ ನೂತನವಾಗಿ ನಿರ್ಮಿಸಿರುವ ಕಿವಿ, ಮೂಗು, ಗಂಟಲು, ಅಸ್ಪತ್ರೆಯನ್ನು ಲೋಕಾರ್ಪಣೆಗೊಳಿಸಿ, ಶಾಲಾ ಮಕ್ಕಲಿಗೆ ಕಲಿಕಾ ಸಾಮಾಗ್ರಿಗಳು ಮತ್ತು ಕಿವಿ ಯಂತ್ರಗಳನ್ನು ವಿತರಿಸಿ ಅವರು ಮಾತನಾಡಿದರು.
ಮನುಷ್ಯನಿಗೆ ಅಸೆ ಇರಬೇಕು. ಅದರೆ ದುರಾಸೆ ಇರಬಾರದು.ಪ್ರಸ್ತುತ ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ದುರಾಸೆ ಹೆಚ್ಚಾಗುತ್ತಿದೆ. ಸಮಾಜದ ಆಗು ಹೋಗುಗಳ ಬಗ್ಗೆ ನನಗೆ ಅರಿವಿರಲಿಲ್ಲ. ನಾನು ಲೋಕಾಯುಕ್ತಕ್ಕೆ ಬಂದಾಗಲೆ ಗೊತ್ತಿಗಿದ್ದು ಎಂದರು.
ವ್ಯಕ್ತಿಗಳಿಂದ ತಪ್ಪಾಗುವುದಿಲ್ಲ. ಸಮಾಜದಿಂದ ಆಗುತ್ತದೆ. ಆಗಿನ ಕಾಲದಲ್ಲಿ ತಪ್ಪು ಮಾಡಲು ಹೆದರುತ್ತಿದ್ದರು. ಈಗ ತಪ್ಪುಗಳನ್ನು ಮಾಡಲು ಜನ ಭಯಪಡುವುದಿಲ್ಲ. ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ದುರಾಸೆ ಹೆಚ್ಚಾಗುತ್ತಿದೆ. ಎಲ್ಲರೂ ಶ್ರೀಮಂತರಾಗಬೇಕೆನ್ನುತ್ತಾರೆ ಅದು ತಪ್ಪಲ್ಲ, ಕಾನೂನಿನ ಚೌಕಟ್ಟಿನಲ್ಲಿ ಶ್ರೀಮಂತರಾಗಲಿ ಎಂದರು.
ಏನೆ ಆಗಲಿ ಮೊದಲು ಮಾನವರಾಗಿ. ಹುಟ್ಟುವಾಗ ಮಾನವನಾಗಿ ಹುಟ್ಟಿ, ಜೀವನದ ಪಥದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ವೈದ್ಯಾಧಿಕಾರಿ ಡಾ. ಮಂಜುನಾಥ್ ಮಾತನಾಡಿ, ಜಿಲ್ಲಾಸ್ಪತ್ರೆಯಲ್ಲಿ ಸಿಗುವ ಸೌಲಭ್ಯಗಳು ಸ್ವಾಮಿ ವಿವೇಕಾನಂದ ಅಸ್ಪತ್ರೆಯಲ್ಲಿ ದೊರಕುತ್ತಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಪಾವಗಡ ಸರ್ಕಾರಿ ಅಸ್ಪತ್ರೆಯಲ್ಲಿ ವೈದ್ಯರ ನಡುವೆ ಶೀತಲ ಸಮರ ನಡೆಯುತ್ತಿದ್ದು ಈ ಬಗ್ಗೆ ಶಾಸಕರ ಬಳಿ ಚರ್ಚೆ ಮಾಡಿ ಈ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದು ತಿಳಿಸಿದರು.
ಬೆಂಗಳೂರಿನ ಡಾ. ಚಂದ್ರಶೇಖರ್ ಅಸ್ಪತ್ರೆಯ ವೈದ್ಯ ಡಾ. ಚಂದ್ರಶೇಖರ್ ಮಾತನಾಡಿ, ನಮ್ಮ ಅಸ್ಪತ್ರೆಯಿಂದ ಬೇಕಾದ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುದು ಎಂದರು.
ಜಪಾನಂದ ಸ್ವಾಮೀಜಿ ಮಾತನಾಡಿ, ಅಸ್ಪತ್ರೆಯು ಕಳೆದ ೨೫ ವರ್ಷಗಳಿಂದ ಎಲ್ಲ ರೀತಿಯ ಸೇವೆಯನ್ನು ಕೈಗೊಂಡಿದ್ಧೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಇಎನ್‌ಟಿ ವೈದ್ಯರಾದ ಡಾ. ರಮಾಕಾಂತ್, ಡಾ.ಚಂದ್ರಕಲಾ, ಬೆಂಗಳೂರಿನ ಲಯನ್ಸ್‌ನ ಕೃಷ್ಣಾರೆಡ್ಡಿ, ತುಮಕೂರಿನ ಸಿದ್ದಾರ್ಥ ಮೆಡಿಕಲ್ ಕಾಲೇಜಿನ ಡಾ. ಜ್ಯೋತಿಸ್ವರೂಪ್, ಸುರೇಶ್‌ಬಾಬು, ಸಾವಿತ್ರಿ, ತಾಲ್ಲೂಕು ವೈದ್ಯರಾದ ಡಾ. ತಿರುಪತಯ್ಯ, ಡಾ.ಕೀರ್ತಿ ಮತ್ತಿತರರು ಉಪಸ್ಥಿತರಿದ್ದರು.