
ಸಂಜೆವಾಣಿ ಪ್ರತಿನಿಧಿಯಿಂದ
ಹೊಸಪೇಟೆ, ಜ.17: ಪ್ರತಿಮನೆಗೂ ಬೆಳಕು, ಪ್ರತಿಗೃಹಿಣಿಗೂ ಕುಟುಂಬ ನಿರ್ವಹಣೆಗೆ 2ಸಾವಿರ ಹಣ ಸೇರಿದಂತೆ ಲಂಚಾವತಾರದ ಎಲ್ಲಾ ಹಗರಣಗಳನ್ನು ತನಿಖೆ ಮಾಡಿ ಭ್ರಷ್ಟಾಚಾರ ದ ಎಲ್ಲರನ್ನು ಕಂಬಿಯೊಳಗೆ ಕುಡಿಸುವಂತೆ ಮಾಡಲು ಕಾಂಗ್ರೆಸ್ ಬದ್ಧವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದರು.
ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈವರೆಗೂ ಕಾಂಗ್ರೆಸ್ ನೀಡಿದ್ದ ಎಲ್ಲಾ ಸೌಕರ್ಯಗಳನ್ನು ತೊಡೆದುಹಾಕಿ ಬಡವರ ಬದುಕು ಬೀದಿಪಾಲುವಾಗುವಂತೆ ಬಿಜೆಪಿ ಮಾಡಿದೆ ಎಂದರು.
ನಮ್ಮ ಭ್ರಷ್ಟಾಚಾರದ ಬಗ್ಗೆ ಈಗ ಮಾತನಾಡುವ ನೀವು ಇಷ್ಟುದಿನ ಸುಮ್ಮನಿದ್ದದು ಯಾಕೇ… ಪರವಾಗಿಲ್ಲಾ ಬನ್ನಿ ಬಹಿರಂಗವಾಗಿ ಚೆರ್ಚೆಗೆ ಇಳಿಯೋಣ, ಏಲ್ಲಿಯೇ ಕರೆ ಮಾಡಿ ಬರುತ್ತೆವೆ ಎಂದು ಪಂಥಾಹ್ವಾನ ಮಾಡಿದರು.
ಸುಭದ್ರ ಹಾಗೂ ಉತ್ತಮ ಆಡಳಿತ ನೀಡುತ್ತಿದ್ದ ಸರ್ಕಾರವನ್ನು ಹಾಳುಗೆಡವಿದ ವಿಜಯನಗರದ ಶಾಸಕರನ್ನು ಕಿತ್ತೊಗೆಯುವ ಮೂಲಕ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಮುನ್ನಡೆ ಬರೆಯುವ ಪರ್ವಕಾಲ ಬಂದಿದೆ ಮುಂದಿನ ಮೂರು ತಿಂಗಳು ಅವಿರತವಾಗಿ ದುಡಿಯಬೇಕಾಗಿದೆ ಎಂದು ಕೆ.ಪಿ.ಸಿ. ಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.
ಪ್ರಜಾಧ್ವನಿ ಯಾತ್ರೆ ಅಂಗವಾಗಿ ಆಯೋಜಿಸಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಪವಿತ್ರ ಹಾಗೂ ಅನೈತಿಕ ಸರ್ಕಾರದ ಕೇಂದ್ರಬಿಂದುವಾಗಿ ಸ್ಥಳೀಯ ಶಾಸಕರು ಕಾರ್ಯ ನಿರ್ವಹಿಸಿ ಇಡೀ ರಾಜ್ಯಕ್ಕೆ ಅಪವಿತ್ರತೆಯ ನೆರಳನ್ನು ಹಚ್ಚಿದ್ದಾರೆ.
ಬೆಲೆಯೇರಿಕೆ, ಭ್ರಷ್ಟಾಚಾರ ಸೇರಿದಂತೆ ಎಲ್ಲದಕ್ಕೂ ಕಾರಣವಾದ ಬಿಜೆಪಿಯನ್ನು ನಾಮಾವಶೇಷ ಮಾಡಲು ಸಂಕಲ್ಪಿಸಬೇಕಾಗಿದೆ ಎಂದ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು.
ಹಿರಿಯನಾಯಕ ಹೆಚ್.ಕೆ.ಪಾಟೀಲ್ ಮಾತನಾಡಿ ಬಿಜೆಪಿ ಹೊಲಸನ್ನು ತೊಳೆಯಲು ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸನ್ನು 41ಕ್ಷೇತ್ರದಲ್ಲಿ ನಾಯಕ ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರೀಯ ಅಧ್ಯಕ್ಷರಾದ ಈ ಸಂದರ್ಭದಲ್ಲಿ ಆಯ್ಕೆ ಮಾಡಲು ಪಣತೊಡಬೇಕು ಎಂದರು.
ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಮಾತನಾಡಿ ಸರ್ಕಾರ 40%ಸರ್ಕಾರ ಪಡೆದಿಲ್ಲಾ ಎನ್ನುವುದಾದರೆ ನ್ಯಾಯಾಂಗ ತನಿಖೆಗೆ ಒಳಪಡಿಸಲಿ ಎಂದರು,ಜನರ ಭಾವನೆಯೊಂದಿಗೆ ಆಟವಾಡುತ್ತಿದ್ದಾರೆ ಎಂದರು. ಹೊಸಪೇಟೆಯ ಕ್ರೀಡಾಂಗಣದಲ್ಲಿ ನಿರ್ಮಾಣವಾಗಿರುವ ಧ್ವಜಸ್ಥಂಭ 6 ಕೋಟಿಯಲ್ಲಿಯೂ ಎಲ್ಲಾ ನಿಯಮವನ್ನು ಗಾಳಿಗೆ ತೂರಿ ಕಮಿಷನ್ ನಲ್ಲಿಯೇ ಜೀವನ ಎನ್ನುವಂತೆ ಮಾಡಿದೆ ಎಂದರು. ರೈತರು, ಸಾಮಾನ್ಯರು, ಪರದಾಡುವಂತೆ ಮಾಡಿದೆ ಇಂತಹ ಪಕ್ಷವನ್ನು ಕಿತ್ತೊಗೆಯಲು ಅಣಿಯಾಗುವಂತೆ ಮಾಡಿದೆ ಎಂದರು.
ಬಿಜೆಪಿಯ ಭ್ರಷ್ಟಾಚಾರದ ತಾಂಡವವನ್ನು ತಡೆಯಬೇಕು, ತೊಲಗಬೇಕು ಎಂದು ವಿಧಾನಸಭೆಯ ಮಾಜಿ ಸಚೇತಕ ಪ್ರಕಾಶ ರಾಥೋಡ ಅಭಿಪ್ರಾಯ ಪಟ್ಟರು.
ಪ್ರಜಾಧ್ವನಿಯಲ್ಲಿ ಮಾತನಾಡಿದ ಅವರು ಮತ್ತೇ ನುಡಿದಂತೆ ನಡೆದು ಹೇಳಿದ 95% ಆಸ್ವಾಸನೆಯನ್ನು ಪೂರ್ಣಗೊಳಿಸಿದ ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೆಸ್ ಸರ್ಕಾರದಂತೆ ಮತ್ತೆ ಕಾಂಗ್ರೆಸ್ ಸರ್ಕಾರ ರಚನೆಗೆ ಅಣಿಯಾಗಲು ಮುಂದಾಗಬೇಕಾಗಿದೆ.
ಬಿಜೆಪಿಯ ಭ್ರಷ್ಟಾಚಾರ, ಸ್ವಪಕ್ಷೀಯರ ಅಸಾಹಾಯಕತೆ ಬದಲಾವಣೆಗೆ ನಾಂದಿಯಾಗಿದೆ ಈ ನೋವು ಇಂದು ಪ್ರಜಾಧ್ವನಿಯಾಗಿ ರಾಜ್ಯದಲ್ಲಿ ಬದಲಾವಣೆ ಅಣಿಯಾಗಲಿದೆ ಎಂದು ರಣಜೀತ್ ಸಿಂಗ್ ಸುರ್ಜೀವಾಲ
ಅಭಿಪ್ರಾಯಪಟ್ಟರು.. ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರ ಎಷ್ಟು ಹಾಳಾಗಿದೆ ಎಂದರೆ, ವೇಶ್ಯಯರು ಯಾವ ಜಿಲ್ಲೆಯಲ್ಲಿ ಎಸ್ ಪಿ ಯಾರಿರಬೇಕು ಎಂದು ತೀರ್ಮಾನಿಸುತ್ತಿರುವುದು, ಮುಖ್ಯ ಮಂತ್ರಿ 2000 ಕೋಟಿ ರೂಪಾಯಿಗೆ ಹರಾಜಿದೆ ಎಂದು ಬಿಜೆಪಿ ಶಾಸಕರೇ ಹೇಳುತ್ತಿರುವುದು, ಸರ್ಕಾರದ ಸಚಿವ ಆನಂದಸಿಂಗ್ ದಲಿತರೊಬ್ಬರ ಮನೆ ಮುಂದೆ ಹೋಗಿ ಬೆಂಕಿ ಹಚ್ಚಲ್ಲು ಮುಂದಾಗಿದ್ದರು ಮುಖ್ಯಮಂತ್ರಿಗಳು ಸುಮ್ಮನಿರುವುದು ಮೌನವಾಗುರುವುದು ಏಕೆ ಇದು ಅವರ ಅಸಹಾಯಕತೆಗೆ ಸಾಕ್ಷಿಯಲ್ಲವೆ? ಎಂದರು.
ಹೊಸ ಕರ್ನಾಟಕದ ನಿರ್ಮಾಣಕ್ಕೆ ಮುಂದಾಗೋಣ ರೈತರು, ಕೃಷಿಕರು, ಸಾಮಾನ್ಯರ ಪರವಾದ ಪ್ರಜಾ ಸರ್ಕಾರವನ್ನು ರಚಿಸಲು ವಿಜಯನಗರದಿಂದ ಅಣಿಯಾಗೋಣ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಪ್ರತಿಪಕ್ಷನಾಯಕ ಸಿದ್ಧರಾಮಯ್ಯ ಉಪನಾಯಕ ಬಿ.ಕೆ.ಹರಿಪ್ರಸಾದ. ರಣಜೀತ್ ಸಿಂಗ್ ಸುರ್ಜಿವಾಲ, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ರಾಮಚಂದ್ರಪ್ಪ, ಸಜೀನ್ ಮೇಘಾ, ವಿ.ಎಸ್, ಉಗ್ರಪ್ಪ, ವಿಭಾಗದ ಉಸ್ತುವಾರಿ ಶ್ರೀಧರಬಾಬು, ಹೆಚ್.ಕೆ.ಪಾಟೀಲ್, ಅಲ್ಲಂ ವೀರಭದ್ರಪ್ಪ, ಬಸವರಾಜ ರಾಯರೆಡ್ಡಿ, ಪಿ.ಟಿ.ಪರಮೇಶ್ವರನಾಯ್ಕ್, ಶಾಸಕರಾದ ಪ್ರೋ ಐ. ಜಿ. ಸನದಿ, ಅಬ್ದುಲ್ ವಹಾಬ್ , ಹೆಚ್ ಆರ್,ಗವಿಯಪ್ಪ, ಅನಿಲ್ ಲಾಡ್, ತುಕಾರಾಂ, ಭೀಮಾನಾಯ್ಕ್, ಗಣೇಶ್, ಸೇರಿದಂತೆ ಅವಳಿ ಜಿಲ್ಲೆಯ ಮುಂಚೋಣಿ ನಾಯಕರು ಹಾಗೂ ಅಸಂಖ್ಯಾತ ಕಾರ್ಯಕರ್ತರು ಪಾಲ್ಗೊಂಡಿದ್ದರು.