ಭ್ರಷ್ಟಾಚಾರದ ಕೂಪವಾಗುತ್ತಿರುವ ಉದ್ಯೋಗ ಖಾತ್ರಿ ಕೆಲಸಗಾರರು 10 ಜನ ಮಾತ್ರ ಹಾಜರಿ ಮಾತ್ರ 70 ಜನ

ಆಳಂದ ;ಮೇ.14: ಸರಕಾರ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸಾರ್ವಜನಿಕರಿಗೆ ವರದಾನವಾಗಬೇಕಿದ್ದು ಆದರೆ ಕೆಲವರ ಸ್ವಹಿತಾಸಕ್ತಿಯಿಂದಾಗಿ ಉಳ್ಳವರ ಪಾಲಾಗಿ ಸಂಪೂರ್ಣವಾಗಿ ಬೋಗಸ್ ನಿರ್ಮಾಣಮಾಡಿ ಅನುದಾನ ಮಾತ್ರ ಅಧಿಕಾರಿಗಳ ಜನ್ರತಿನಿಧಿಗಳ ಜೇಬು ಸೇರುತ್ತಿದೆ. ಅಂಥ ಘಟನೆ ಆಳಂದ ತಾಲೂಕಿನ ದರ್ಗಾಶಿರೂರ ಗ್ರಾ.ಪಂ ವ್ಯಾಪ್ತಿಯ ನಿಂಗದಳ್ಳಿ ಗ್ರಾಮದಲ್ಲಿ ನಡೆಯುತ್ತಿದೆ. ಉದ್ಯೋಗ ಖಾತ್ರಿ ಅಡಿಯಲ್ಲಿ ಹಳ್ಳದ ಹೂಳು ತಗೆಯಲು ಹೆಸರು ನೊಂದಾಯಿಸಿದ್ದ 70 ಜನ ಆದರೆ ಅಲ್ಲಿ ಕೆಲಸ ಮಾಡುತ್ತಿರವುದು ಮಾತ್ರ 10 ಜನ ಮಾತ್ರ ಎಲ್ಲರ ಹಾಜರಿ ಹಾಕಿ ಕೆಲಸ ಮಾಡದೆ ಅನುದಾನ ಅನಾಮತ್ತಾಗಿ ಎತ್ತಿ ಹಾಕಲಾಗುತ್ತಿದೆ ಎಂದು ಗ್ರಾಮದ ಮುಖಂಡ ಬಸವರಾಜ ರಾಂಪುರೆ ಆರೋಪಿಸಿದ್ದಾರೆ ಈ ಕುರಿತು ಮಾನ್ಯ ಜಿ,ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರು ನೀಡಿದ ಅವರು ಗ್ರಾಮದಲ್ಲಿ ಉದ್ಯೋಗ ಖಾತ್ರಿ ಕೆಲಸ ಪಾರದರ್ಶಕವಾಗಿ ನಡೆಯುತ್ತಿಲ್ಲ ಕೆಲಸ ಮಾಡದೆ ಹಾಜರಿ ಹಾಕಲಾಗುತ್ತಿದೆ ಎಲ್ಲೋ ಒಂದು ಕಡೆ ಸೇರಿ ಜಿಪಿಎಸ್ ಮಾಡಲಾಗುತ್ತಿದೆ ಇದರ ಬಗ್ಗೆ ತಾ,ಪಂ ಇಓ ಅವರ ಗಮನಕ್ಕೂ ತರಲಾಗಿದೆ ಆದರೆ ಯಾವುದೆ ಪ್ರಯೋಜನ ವಾಗುತ್ತಿಲ್ಲ ಇದರಲ್ಲಿ ಪಿಡಿಓ ಟಿಎಇ ಮತ್ತು ಬಿಎಫ್.ಟಿ ಅಧಿಕಾರಿಗಳು ಶಾಮಿಲಾಗಿದ್ದು ನೆರೆಗೆ ಯೋಜನೆಯನ್ನು ದುರ್ಬಳಕೆ ಮಾಡುತ್ತಿದ್ದಾರೆ ಕೂಡಲೆ ಗ್ರಾಮದ ಉದ್ಯೋಗ ಖಾತ್ರಿ ಕೆಲಸ ತನಿಖೆ ಮಾಡಿ ಶಾಮಿಲಾದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.