ಭ್ರಷ್ಟಾಚಾರದ ಆರೋಪ; ಅನಿಲ್ ದೇಶ್ ಮುಖ್ ರಾಜೀನಾಮೆ

ಮುಂಬೈ,ಏ.5-ಭ್ರಷ್ಟಾಚಾರ ಆರೋಪದಡಿ ಮುಂಬೈ ಹೈಕೋರ್ಟ್ ಸಿಬಿಐ ತನಿಖೆಗೆ ಆದೇಶ ಹೊರಡಿಸಿದ ಬೆನ್ನಲ್ಲೇ ಗೃಹ ಸಚಿವ ಅನಿಲ್ ದೇಶ್ ಮುಖ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಈ ಸಂಬಂಧಿಸಿದಂತೆ ಮುಖ್ಯಮಂತ್ರಿ‌ ಉದ್ದವ್ ಠಾಕ್ರೆ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಭ್ರಷ್ಟಾಚಾರದ ‌ಆರೋಪದ ಹಿನ್ನೆಲೆಯಲ್ಲಿ ಮಹಾ ಅಗಾಡಿ ನೇತ್ರತ್ವದ ಮೈತ್ರಿ ಸರ್ಕಾರದ ಮೊದಲ ವಿಕೆಟ್ ಪತನವಾಗಿದೆ.

ನೈತಿಕ ಹೊಣೆ:

ತಮ್ಮ ವಿರುದ್ದ ‌ಕೇಳಿ ಬಂದಿರುವ ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಿರುವುದಾಗಿ ಅನಿಲ್ ದೇಶ್ ಮುಖ್ ತಿಳಿಸಿದ್ದಾರೆ.

ಮುಂಬೈ ಹೈ ಕೋರ್ಟ್ ತಮ್ಮ ವಿರುದ್ದ ಸಿಬಿಐ ತನಿಖೆಗೆ ವಹಿಸಿರುವ ಹಿನ್ನೆಲೆಯಲ್ಲಿ ನೈತಿಕತೆ ‌ಜವಬ್ದಾರಿ ಹಿನ್ನೆಲೆಯಲ್ಲಿ ‌ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಾಗಿದೆ ಎಂದರು

ಮಹಾರಾಷ್ಟ್ರದಲ್ಲಿ ಎನ್ ಸಿ‌ಪಿ, ಶಿವಸೇನೆ ಮತ್ತು ಕಾಂಗ್ರೆಸ್ ಜತೆಗೂಡಿ ಮೈತ್ರಿ ಸರ್ಕಾರ ಸರ್ಕಾರ ಮಾಡಿತ್ತಿದೆ. ಅನಿಲ್ ದೇಶ್ ಮುಖ್ ಎನ್ ಸಿಪಿ ಪಕ್ಣಕ್ಕೆ ಸೇರಿದವರಾಗಿದ್ದಾರೆ.

100 ಕೋಟಿ ಆರೋಪ:

100 ಕೋಟಿ ರೂಪಾಯಿ ಭ್ರಷ್ಟಾಚಾರದ ಕುರಿತು ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಂ ಬೀರ್ ಸಿಂಗ್ ,ಅನಿಲ್ ದೇಶ್ ಮುಖ್ ವಿರುದ್ದ ಸಿಬಿಐ ತನಿಖೆ ನಡೆಸುವಂತೆ ಮುಂಬೈ ಹೈಕೋರ್ಟ್ ಮೆಟ್ಟಿಲೇರಿದ್ದರು.

ಮುಂಬೈನ‌ಲ್ಲಿ ಉದ್ಯಮಿ ಮುಖೇಶ್ ಅಂಬಾನಿ‌ ಅವರ ಮನೆ ಮುಂದೆ ಸ್ಪೋಟಕ ತುಂಬಿದ್ದ ವಾಹನ‌ ನಿಲುಗಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏನ್ ಕೌಂಟರ್ ಸ್ಪೆಷಲಿಸ್ಟ್ ಸಚಿನ್ ವಾಜೆ ಅವರನ್ನು ವಜಾ ಮಾಡಲಾಗಿತ್ತು

ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೋಲೀಸ್ ಆಯುಕ್ತರಾಗಿದ್ದ ಪರಂಬೀರ್ ಸಿಂಗ್ ಅವರನ್ನು ವರ್ಗಾವಣೆ ಮಾಡಲಾಗಿತ್ತು.

ಇದರಿಂದ ಕೆರಳಿದ ಪರಂ ಬೀರ್ ಸಿಂಗ್ ಗೃಹ ಸಚಿವರ ವಿರುದ್ದ 100 ಕೋಟಿ ರೂಪಾಯಿ ಭ್ರಷ್ಟಾಚಾರದ ಆರೋಪ ಹೊರಿಸಿದ್ದರು.