
ಕಲಬುರಗಿ:ನ.7: ಭ್ರಷ್ಟಾಚಾರ ದೇಶಕ್ಕೆ ಮಾರಕ ವಾಗಿದ್ದು ಇದರಿಂದ ದೇಶದ ಪ್ರಗತಿಗೆ ಅಡ್ಡಿಯಾಗುತ್ತಿದೆ ಎಂದು ಜಿಲ್ಲಾ ನ್ಯಾಯಾಲಯದ ವಕೀಲೆ ವಿಜಯಾ ಪಾಟೀಲ್ ಹೇಳಿದರು.
ಖಾಜಾ ಬದಾನವಾಜ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ಸೋಮವಾರ ಏರ್ಪಡಿಸಿದ್ದ ‘ಜಾಗೃತ ಜಾಗೃತಿ ಸಪ್ತಾಹ:-ಭ್ರಷ್ಟಾಚಾರ ಬೇಡ ಎಂದು ಹೇಳಿ – ರಾಷ್ಟ್ರಕ್ಕೆ ಬದ್ಧರಾಗಿ’ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ನಮ್ಮ ದೇಶವನ್ನು ಭ್ರಷ್ಟಾಚಾರ ಮುಕ್ತಗೊಳಿಸುವಲ್ಲಿ ಪ್ರಜೆಗಳ ಪಾತ್ರ ಮುಖ್ಯವಾಗಿದೆ. ಸಂವಿಧಾನದಲ್ಲಿ ಹಕ್ಕುಗಳ ಜೊತೆಗೆ ಕರ್ತವ್ಯಗಳೂ ಇವೆ. ನಾವು ಜವಾಬ್ದಾರ ನಾಗರಿಕರಾಗಬೇಕು. ನಮ್ಮ ಕರ್ತವ್ಯಗಳನ್ನು ಪಾಲಿಸಬೇಕು.
ಲಂಚ ತೆಗೆದುಕೊಳ್ಳುವುದು ಅಷ್ಟೇ ಅಲ್ಲ ಕೊಡುವುದು ಕೂಡ ತಪ್ಪು. ಭ್ರಷ್ಟಾಚಾರಿಗಳಿಗೆ ಉತ್ತೇಜನ ಕೊಡದೆ ಅವರ ವಿರುದ್ಧ ಧ್ವನಿ ಎತ್ತಿದಲ್ಲಿ ದೇಶದ ಪ್ರಗತಿ ಸಾಧ್ಯ ಎಂದರು.
ವಿದ್ಯಾರ್ಥಿಗಳು ನಾಳಿನ ಭವಿಷ್ಯ, ಅವರು ಈಗಿನಿಂದಲೇ ಭ್ರಷ್ಟಾಚಾರ ರಹಿತ ರಾಷ್ಟ್ರ ಕಟ್ಟಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಭಾಷಾ, ಕಲಾ, ಮಾನವೀಕತೆ, ಸಮಾಜ ವಿಜ್ಞಾನದ ಡೀನ್ ಡಾ. ನಿಶಾತ್ ಆರೀಫ್ ಹುಸ್ಸೇನಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಮಾಜದ ಪ್ರತಿ ಕರ್ತವ್ಯ ನಿಭಾಯಿಸುವುದು ಅವಶ್ಯ ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಜಾಗೃತ ಜಾಗೃತಿ ಸಪ್ತಾಹ ಅಂಗವಾಗಿ ಹಮ್ಮಿಕೊಂಡ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಾನೂನು ವಿಭಾಗದ ವಿದ್ಯಾರ್ಥಿನಿ ಫಲಿಹಾ ಖಾನ ಪ್ರತಿಜ್ಞೆ ಬೋಧಿಸಿದರು.
ಈ ಕಾರ್ಯಕ್ರಮದಲ್ಲಿ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಸಜಾವುದ್ದಿನ್ ಸಫಿ ಅತಿಥಿಗಳನ್ನು ಸ್ವಾಗತಿಸಿ ನಿರೂಪಿಸಿದರೆ, ಆಹಾರ ಮತ್ತು ಪೆÇೀಷಣೆ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ವಿನೋದ ಪಾಟೀಲ ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರಾಣಿ ಶಾಸ್ತ್ರದ ಸಹಾಯಕ ಪ್ರಾಧ್ಯಾಪಕಿ ಡಾ. ಹೀನಾ ಮುಬಿನ ವಂದಿಸಿದರು.