ಭ್ರಷ್ಟಾಚಾರದಲ್ಲಿ ಮುಳುಗಿದ ಕಾಂಗ್ರೆಸ್ ಸರ್ಕಾರ: ಶಾಸಕ ಪಾಟೀಲ್

(ಸಂಜೆವಾಣಿ ವಾರ್ತೆ)
ಹುಮನಾಬಾದ:ಅ.18: ಬಿಜೆಪಿ ಪಕ್ಷದ ವತಿಯಿಂದ ಭ್ರಷ್ಟ ರಾಜ್ಯ ಕಾಂಗ್ರೇಸ್ ಸರ್ಕಾರ ವಜಾಗೊಳಿಸುವ ಕುರಿತು ರಾಜ್ಯಪಾಲರ ಹೆಸರಿನ ಮೇಲೆ ಬರೆದ ಮನವಿ ಪತ್ರವನ್ನು ಹುಮನಾಬಾದ ತಾಲ್ಲೂಕಾ ದಂಡಾಧಿಕಾರಿಗಳಿಗೆ ಶಾಸಕ ಸಿದ್ದು ಪಾಟೀಲ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಂಡಲದ ಅಧ್ಯಕ್ಷರಾದ ಪ್ರಬಾಕರ ನಾಗರಾಳೆ, ಜಿಲ್ಲಾ ಉಪಾಧ್ಯಕ್ಷರಾದ ವಿಶ್ವನಾಥ ಪಾಟೀಲ ಮಾಡಗೂಳ, ಪಕ್ಷದ ಹಿರಿಯ ಮುಖಂಡ ವಿನಾಯಕ ಮಂಡಾ, ಮಂಡಲದ ಪ್ರಧಾನ ಕಾರ್ಯದರ್ಶಿ ಅನೀಲ ಪಸಾರ್ಗಿ, ರಾಜಕುಮಾರ ಭಂಡಾರಿ, ಸಹೋದರ ಸಂತೋಷ ಪಾಟೀಲ, ಗೋಪಾಲಕೃಷ್ಣ ಮೋಹಳೆ, ಶಿವರಾಜ ರಾಜೋಳೆ, ನಾಗಭೂಷಣ ಸಂಗಮ್, ಗಿರೀಶ ತುಂಬಾ, ಮುಂತಾದ ಪಕ್ಷದ ಮುಖಂಡರು ಉಪಸ್ಥಿತರಿದ್ದರು.