ಭ್ರಷ್ಟಾಚಾರಕ್ಕೆ ಸಹಕಾರ ನೀಡುವುದು ಸಹ ಅಪರಾಧ : ಹಿರೇಮಠ

ಬಳ್ಳಾರಿ,ಅ.30: ಭ್ರಷ್ಟಾಚಾರ ನಿರ್ಮೂಲನೆ ಮಾಡಲು ನಾಗರಿಕರು ಮತ್ತು ಖಾಸಗಿ ವಲಯದ ಎಲ್ಲಾ ಪಾಲುದಾರರು ಕೈಜೋಡಿಸಿದರೆ ಮಾತ್ರ ಭ್ರಷ್ಟಾಚಾರ ನಿರ್ಮೂಲನೆ ಮಾಡಬಹುದು. ಭ್ರಷ್ಟಾಚಾರಕ್ಕೆ ಸಹಕಾರ ನೀಡುವುದು ಕೂಡ ಅಪರಾಧವಾಗಿದ್ದು, ಸಾರ್ವಜನಿಕರು ಇದನ್ನೆಲ್ಲ ಅರಿತುಕೊಳ್ಳಬೇಕು ಎಂದು ಭ್ರಷ್ಟಾಚಾರ ನಿಗ್ರಹದಳದ ಇನ್ಸ್‍ಪೆಕ್ಟರ್ ಪ್ರಭುಲಿಂಗಯ್ಯ ಹಿರೇಮಠ ಅವರು ಹೇಳಿದರು.
ಅವರು ನಿನ್ನೆ ಇಲ್ಲಿನ ಪಾಲಿಕೆಯ ಸಭಾಂಗಣದಲ್ಲಿ ಕರ್ನಾಟಕ ಲೋಕಾಯುಕ್ತ ಕಚೇರಿ, ಭ್ರಷ್ಟಾಚಾರ ನಿಗ್ರಹದಳ ಹಾಗೂ ಮಹಾನಗರಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸತರ್ಕ ಭಾರತ-ಸಮೃದ್ದ ಭಾರತ ಜಾಗೃತಿ ಅರಿವು ಸಪ್ತಾಹ-2020 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮತನಾಡಿದರು.
ಸಾರ್ವಜನಿಕರು ತಮ್ಮ ಅವಶ್ಯಕತೆಗಳಿಗೆ ತಮ್ಮ ಕಚೇರಿಗಳಿಗೆ ಬಂದರೆ ವಿಳಂಬ ಮಾಡದೆ ಅವರ ಕೆಲಸಗಳನ್ನು ಮಾಡಿಕೊಡಿ, ವಿಳಂಬ ಮಾಡಿದಲ್ಲಿ ಸಾರ್ವಜನಿಕರು ಮತ್ತು ನೌಕರರ ಮದ್ಯ ದÀಲ್ಲಾಳಿಗಳಿಂದ ಭ್ರಷ್ಟಾಚಾರಕ್ಕೆ ನಾಂದಿಯಾಗುತ್ತದೆ. ಇಂತಹ ದಲ್ಲಾಳಿಗಳನ್ನು ಹತ್ತಿರ ಸೇರಿಸಿಕೊಳ್ಳದೆ ಅಧಿಕಾರಿಗಳು ಸಾರ್ವಜನಿಕರೊಂದಿಗೆ ನೇರ ಸಂಪರ್ಕ ಹೊಂದಬೇಕು ಎಂದು ಹೇಳಿದರು.
ಪಾಲಿಕೆಯ ಪ್ರಭಾರ ಆಯುಕ್ತ ಈರಪ್ಪ ಬಿರಾದರ್ ಮಾತನಾಡಿ, ಭ್ರಷ್ಟಾಚಾರ ಬರೀ ನೌಕರರು ಅಷ್ಟೇ ಅಲ್ಲ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳನ್ನು ಬೇಗನೆ ಮಾಡಿಸಿಕೊಳ್ಳಲು ಲಂಚ ನೀಡುವುದು ಸಹ ಭ್ರಷ್ಟಾಚಾರ, ಇಂತಹ ಅಮೀಷಗೆ ಒಳಗಾಗದೆ ನೌಕರರು ಸಾರ್ವಜನಿಕರ ಕಾರ್ಯಗಳನ್ನು ಯಾವುದೇ ರೀತಿಯಲ್ಲಿ ವಿಳಂಭವಾಗದಂತೆ ಮಾಡಿಕೊಡಬೇಕು. ಸಾರ್ವಜನಿಕರನ್ನು ಭ್ರಷ್ಟಾಚಾರಕ್ಕೆ ಆಸ್ಪದ ನೀಡದಂತೆ ನೊಡಿಕೊಳ್ಳಿ. ಭ್ರಷ್ಟಚಾರ ನಿಯಂತ್ರಿಸಲು ಸಾರ್ವಜನಿಕರ ಸಹಕಾರ ಸಹ ಅಗತ್ಯವಾಗಿರುತ್ತದೆಂದರು.
ಕರ್ನಾಟಕ ಲೋಕಾಯುಕ್ತ ಜಿಲ್ಲಾ ಕಚೇರಿಯ ಇನ್ಸ್‍ಪೆಕ್ಟರ್ ಸತೀಶ್, ಸಿಪಿಐ ವಿಜಯಕುಮಾರ ಹಾಗೂ ಮಹಾನಗರ ಪಾಲಿಕೆಯ ಸಿಬ್ಬಂದಿಗಳು ಸೇರಿದಂತೆ ಇತರರು ಇದ್ದರು.