
ಸೊರಬ.ಮಾ.7:ಬಿಜೆಪಿ ಸರ್ಕಾರ ವ್ಯಾಪಾಕವಾಗಿ ನಡೆಸುತ್ತಿರುವ ಭ್ರಷ್ಟಾಚಾರದ ಗಮಲು ವಿಧಾನಸೌಧದ ಗೋಡೆ,ಕಿಟಕಿಗಳಿಗೆ ಮೆತ್ತಿಕೊಂಡಿದೆ. ಪ್ರತಿ ಜಿಲ್ಲೆಯಲ್ಲೂ ಸಚಿವರು, ಶಾಸಕರು ಕೋಟ್ಯಂತರ ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ಕೆಪಿಸಿಸಿ ಹಿಂದುಳಿದ ವಿಭಾಗದ ಅಧ್ಯಕ್ಷ ಮಧು ಬಂಗಾರಪ್ಪ ಆರೋಪಿಸಿದರು. ಸೊರಬದ ಬಂಗಾರ ಧಾಮದಲ್ಲಿ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.ಚನ್ನಗಿರಿ ಕ್ಷೇತ್ರದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಕಾಮಗಾರಿಗಳಲ್ಲಿ ಗುತ್ತಿಗೆದಾರರಿಂದ ಕೋಟ್ಯಂತರ ಹಣ ಪಡೆದರೂ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬೆಂಬಲಕ್ಕೆ ನಿಂತಿದ್ದಾರೆಬಿಜೆಪಿ ಶಾಸಕರಿಗೆ ಭ್ರಷ್ಟಾಚಾರ ನಡೆಸಲು ಪರೋಕ್ಷವಾಗಿ ಮುಖ್ಯ ಮಂತ್ರಿಗಳು ಸಾಥ್ ನೀಡಿದ್ದಾರೆ ಎಂದರು.ಸಚಿವರು,ಶಾಸಕರು ಗುತ್ತಿಗೆದಾರರಿಂದ ಹಣದ ಬೇಡಿಕೆ ಇಟ್ಟಿದ್ದರಿಂದಲೇ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರು.ಕ್ಷೇತ್ರದಲ್ಲಿ ಶಾಸಕ ಕುಮಾರ್ ಬಂಗಾರಪ್ಪ ತಮಗೆ ಮಾಮೂಲು ಕೊಡುತ್ತಿಲ್ಲ ಎಂದು 16ಜನ ತಹಶೀಲ್ದಾರ್ ಬದಲಾವಣೆ ಮಾಡಿದ್ದಾರೆ ಎಂದು ತಿಳಿಸಿದರು.ಯಡಿಯೂರಪ್ಪ ಅವರ ಮೇಲೆ ವಿಶ್ವಾಸವಿಟ್ಟು ಗೆಲ್ಲಿಸಿದ ಮೂಲ ಬಿಜೆಪಿಗರಿಗೆ ಅನ್ಯಾಯ ಮಾಡಿದ್ದಾರೆ. ಬಡವರಿಗೆ ಮನೆ ಕೊಡಲಿಲ್ಲ. ರೈತರಿಗೆ ಪರಿಹಾರ ಕೊಡಿಸಲಿಲ್ಲ. ಬಡವರಿಗೆ ಕೊಡುವ ಯೋಜನೆಯಲ್ಲಿ ಕಮಿಷನ್ ಇಲ್ಲ ಎಂದು ರಸ್ತೆಗಳಿಗೆ ಮರು ಡಾಂಬರೀಕರಣ ಮಾಡಿ ಹಣ ಲೂಟಿ ಹೊಡೆಯತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.