ಚಿಕ್ಕಬಳ್ಳಾಪುರ, ಜೂ. ೨೪:ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಭ್ರಷ್ಟಾಚಾರ ತಂಡವಾಡುತ್ತಿದೆ ಎಂಬ ಸಾರ್ವಜನಿಕರ ಆರೋಪ ನಿಜಕ್ಕೂ ಸತ್ಯವಾಗಿದೆ ಇದು ರಾಜ್ಯದ ಜನತೆಗೂ ಸಹ ತಿಳಿದಿದೆ ಆದರೆ ಇನ್ನು ಮುಂದೆ ಯಾವುದೇ ಕಾರಣಕ್ಕು ನಗರಸಭೆಯಲ್ಲಿ ಹಾಗೂ ಇತರೆ ಯಾವುದೇ ಸರಕಾರಿ ಭ್ರಷ್ಟಾಚಾರ ನಡೆಯಲು ಅವಕಾಶ ಕೊಡುವುದಿಲ್ಲ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.
ನಗರದ ನಾಲ್ಕನೇ ವಾರ್ಡ್ ಮತ್ತು ಸಾಧು ಮಠ ರಸ್ತೆಯಲ್ಲಿನ ನಿವಾಸಿಗಳಿಗೆ ನಗರಸಭೆಯ ವತಿಯಿಂದ ಈ ಕಾತ ಪತ್ರವನ್ನು ಸ್ವಯಂ ಮನೆಮನೆಗೆ ತೆರಳಿ ವಿತರಣೆ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ನಾನು ಶಾಸಕನಾದ ನಂತರ ಹಾಗೂ ನನ್ನ ಮುಂದಿನ ಆಡಳಿತಾವಧಿಯಲ್ಲಿಯೂ ಸಹ ಯಾರಿಂದಲೂ ಒಂದು ರೂಪಾಯಿ ಸಹ ಅಕ್ರಮವಾಗಿ ಹಣ ಸ್ವೀಕರಿಸುವುದಿಲ್ಲ ಹಾಗೂ ನಾನು ಶಾಸಕನಾಗಿ ಇರುವಷ್ಟು ದಿನ ಸರ್ಕಾರಿ ನೌಕರರು ಸಹ ಅಕ್ರಮವಾಗಿ ಲಾಂಚಾ ಸ್ವೀಕಾರ ಮಾಡುವುದಕ್ಕೆ ಬಿಡುವುದಿಲ್ಲ ಎಂದರು.
ಇತ್ತೀಚೆಗೆ ಶಾಸಕರು ಅವರಿಗೆ ನಗರಸಭೆಯಲ್ಲಿ ಈ ಖಾತೆ ವಿತರಣೆ ವಿಚಾರದಲ್ಲಿ ನಾಗರಿಕರಿಗೆ ತುಂಬಾ ತೊಂದರೆ ಆಗಿದೆ ಅಧಿಕಾರಿಗಳು ನಾಗರಿಕರನ್ನು ಅಲೆದಾಡಿಸುತ್ತಾರೆ ಮಾಡಿಕೊಡುತ್ತಿಲ್ಲ ಎಂದು ದೂರು ಸಲ್ಲಿಸಿದ್ದರು. ಆಗ ಶಾಸಕರು ಜನತೆಗೆ ಭರವಸೆ ನೀಡಿ ಇನ್ನು ಮುಂದೆ ಈ ಖಾತೆಗಾಗಿ ನೀವು ನಗರಸಭೆಗೆ ಅಲೆದಾಡಬೇಡಿ ಈ ಖಾತೆ ಆದ ನಂತರ ನಾನೇ ನಿಮ್ಮ ಮನೆ ಬಾಗಿಲಿಗೆ ಈ ಖಾತೆ ದಾಖಲೆಯನ್ನು ತಂದು ಕೊಡುತ್ತೇನೆ ಎಂದು ಭರವಸೆ ನೀಡಿದ್ದರು.
ಅಂದು ಜನತೆಗೆ ನೀಡಿದ ಭರವಸೆಯಂತೆ ಇಂದು ಬೆಳಗ್ಗೆ ನಗರಸಭೆ ಅಧಿಕಾರಿಗಳೊಂದಿಗೆ ಸಿದ್ಧವಿದ್ದ ಈ ಖಾತೆ ದಾಖಲೆಗಳನ್ನು ಸ್ವಯಂ ಆಸ್ತಿ ಮಾಲೀಕರಿಗೆ ನೀಡುವ ಮುಖಾಂತರ ನುಡಿದಂತೆ ನಡೆದರು.
ನಗರಸಭೆ ಪೌರಾಯುಕ್ತಪಂಪಶ್ರೀ ಹಾಗೂ ಅಧಿಕಾರಿಗಳು ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರುಗಳು ಹಾಜರಿದ್ದರು.