ಭ್ರಷ್ಟರನ್ನು ಸದೆ ಬಡಿಯುವೆ: ಜಿ ಲಲ್ಲೇಶ್ ರೆಡ್ಡಿ

ಸೇಡಂ,ಎ,13: ಕಲ್ಯಾಣ ಪ್ರಗತಿ ಪಕ್ಷದ ಅಭ್ಯರ್ಥಿ ಜಿ ಲಲ್ಲೇಶ್ ರೆಡ್ಡಿಯವರು ಗೌಡನಹಳ್ಳಿ ಗ್ರಾಮದಲ್ಲಿ ಕಾರ್ಯಕರ್ತರೊಂದಿಗೆ ಬಿರುಸಿನ ಪ್ರಚಾರ ಕೈಗೊಂಡರು. ಗ್ರಾಮದ ಮನೆ ಮನೆಗಳಿಗೆ ತೆರಳಿ ಪಕ್ಷದ ಪ್ರಣಾಳಿಕೆಯ ಮಾಹಿತಿ ನೀಡಿದರು.
ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಮೇ 14ರ ನಂತರ ಸೇಡಂ ಕ್ಷೇತ್ರದಲ್ಲಿ ಭ್ರಷ್ಟಾಚಾರ ಕಡಿವಾಣ ಹಾಕುವೆ ಎಂದು ಗುಡುಗಿದರು.
ಈಗಾಗಲೇ ರಾಜ್ಯದ ಅನೇಕ ಪ್ರಭಾವೀ ನಾಯಕರುಗಳು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಟಿಕೇಟ್ ಪಡೆಯಲು ತುದಿಗಾಲಲ್ಲಿ ನಿಂತಿದ್ದಾರೆ ಅಸ್ತಿತ್ವಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ಕೆಆರ್ ಪಿಪಿ ಪಕ್ಷ ರಾಜ್ಯದಲ್ಲಿ ಜನಮನ್ನಣೆ ಪಡೆದಿರುವ ಪಕ್ಷವಾಗಿದೆ ಎಂದು ಹೇಳಿದರು.ಯಾವುದೇ ಜಾತಿಗೆ ಸೀಮಿತವಾದ ನಾಯಕ ಗಾಲಿ ಜನಾರ್ಧನ ರೆಡ್ಡಿಯವರಲ್ಲ ಅವರು ರಾಜ್ಯದಲ್ಲಿಯೇ ಸರ್ವಜನಾಂಗದ ನಾಯಕರಾಗಿ ಹೊರಹೊಮ್ಮಿದ್ದಾರೆ ಎಂದು ಹೇಳಿದರು.2028ರಲ್ಲಿ ರಾಜ್ಯದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬಂದು ಗಾಲಿ ಜನಾರ್ಧನ ರೆಡ್ಡಿಯವರು ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆಂದು ವಿಶ್ವಾಸ ವ್ಯಕ್ತಪಡಿಸಿದರು. ಸೇಡಂ ಕ್ಷೇತ್ರದ ಜನರು ದಿನನಿತ್ಯ ಒಂದಿಲ್ಲೊಂದು ರೀತಿಯಲ್ಲಿ ಕಷ್ಟಗಳಲ್ಲಿ ಸಿಲುಕಿದ್ದಾರೆ.ರೈತರ ಮಗನಾಗಿ ಜನಸಾಮಾನ್ಯರ ಕಷ್ಟಗಳನ್ನು ಅರಿತುಕೊಂಡಿದ್ದೇನೆ, ಇತರ ನಾಯಕರು ಅರಿಯದಷ್ಟು ತಾವು ಇಡೀ ಕ್ಷೇತ್ರದ ಜನರ ನಾಡಿಮಿಡಿತ ಅರಿತುಕೊಂಡಿದ್ದೇನೆ ಎಂದು ತಿಳಿಸಿದರು.ಅವರ ಕಷ್ಟಗಳನ್ನು ನೋಡದೆ ನನ್ನ ಕಣ್ಣಲ್ಲಿ ನೀರು ಬರುತ್ತದೆ ಇಷ್ಟೊಂದು ಅಧೋಗತಿಗೆ ಅಧಿಕಾರ ನಡೆಸಿದವರು ಕ್ಷೇತ್ರವನ್ನು ತಂದೊಡ್ಡಿದ್ದಾರೆಂದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಎಲ್ಲ ಸಮಸ್ಯೆಗಳನ್ನು ಹೊಡೆದೋಡಿಸಲು ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಬೆಂಬಲ ನೀಡಿ ಆಶಿರ್ವಾದ ಮಾಡಬೇಕೆಂದು ಮನವಿ ಮಾಡಿದರು.
ಅಲ್ಲದೆ ಗೌಡನಹಳ್ಳಿ ಗ್ರಾಮದ ಗೌಡರ ಮನೆತನದ ಸುತ್ತಮುತ್ತಲಿನ ಹಳ್ಳಿಗಳಿಗೆ ಪವಿತ್ರ ಸನ್ನಿಧಿ ಇದ್ದಂತೆ ಇಲ್ಲಿ ಮಾತನಾಡುತ್ತಿರುವುದು ನನ್ನ ಭಾಗ್ಯವಾಗಿದೆ ಎಂದು ಗೌಡನಹಳ್ಳಿ ಗೌಡರ ಮನೆತನದ ಕುರಿತು ಹೆಮ್ಮೆಯ ಮಾತುಗಳನ್ನಾಡಿದರು.
ಅಧಿಕಾರವಿಲ್ಲದಿದ್ದರೂ ಕ್ಷೇತ್ರದೆಲ್ಲೆಡೆ ನನ್ನಿಂದ ಸಾಧ್ಯವಿರುವ ಕಾರ್ಯಗಳನ್ನು ಮಾಡಿ ನನ್ನ ಜನರಿಗೆ ನೆರವಾಗಿದ್ದೇನೆ ಎಂದು ಹೇಳಿದರು.
ಇದೇ ವೇಳೆ ಜನಪ್ರೀಯ ಯುವನಾಯಕರಾದ ಚಿರಂಜೀವಿ ರೆಡ್ಡಿ ಪಾಟೀಲ ಗೌಡನಹಳ್ಳಿ ನೇತೃತ್ವದಲ್ಲಿ
ಶರಣಗೌಡ ಅಪ್ಪಾಜಿ, ಶಿವಾರೆಡ್ಡಿ, ಜಗನ್ನಾಥ ದೇಸಾಯಿ, ಗ್ರಾಮ ಪಂಚಾಯಿತಿ ಸದಸ್ಯರಾದ ಹಮೀದ್ ಪಿಂಜಾರ್, ಯಲ್ಲಪ್ಪ ಜೋಗಿನ್, ಹಾಗೂ ಕಾರ್ಯಕರ್ತರಾದ ಅಯ್ಯಪ್ಪ ಮಂದಿಪಲ್ಲಿ,ಅಂಬಣ್ಣ ಘಂಟಿ,ಬುಗ್ಗಪ್ಪ ಗೊಲ್ಲರ,ಕಾಶಪ್ಪಾ ಗೊಲ್ಲರ, ರಾಜು ಬಳ್ಳಾರಿ ಸೇರಿದಂತೆ ಹಲವರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಸೇರ್ಪಡೆಯಾದರು. ಈ ವೇಳೆಯಲ್ಲಿ ಶಿವಲಿಂಗ ರೆಡ್ಡಿ ಪಾಟೀಲ್ ಬೆನಕನಹಳ್ಳಿ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ತಾಲೂಕಾ ಘಟಕದ ಅಧ್ಯಕ್ಷರಾದ ಶ್ರೀನಾಥ್ ಪಿಲ್ಲಿ, ಶ್ರೀನಿವಾಸ ಮಾಲಿಪಾಟೀಲ್ ಇದ್ದರು.