ಭ್ರಷ್ಟರನ್ನು ದೂರವಿಡಲು ಮತದಾರರಿಂದ ಮಾತ್ರ ಸಾಧ್ಯ:ಮುಖ್ಯ ಮಂತ್ರಿ ಚಂದ್ರು


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.29: ಪ್ರಜಾಪ್ರಭುತ್ವದ ಆಡಳಿತದ ನೀತಿ ಬದಲಾಯಿಸಲು ಪ್ರಜೆಗಳಿಂದ ಮಾತ್ರ ಸಾಧ್ಯ. ಬದಲಾಗಲಿದೆ ಬಳ್ಳಾರಿ ಎಂಬ ಭರವಸೆ ಇದೆ, ಜನಸಾಮಾನ್ಯರು ಈಗಾಗಲೇ ಎಲ್ಲಾರೀತಿಯ ಪಕ್ಷಗಳ ನಾಯಕರಿಂದ  ಬೇಸತ್ತಿದ್ದಾರೆ. ಆದ್ದರಿಂದ ಈ ಬಾರಿ ಬಳ್ಳಾರಿ ಬದಲಾಗ ಬೇಕಾದರೆ ಜನತೆ ತಮ್ಮ ಮುಂದಿನ ಮಕ್ಕಳ ಭವಿಷ್ಯ ಮತ್ತು ಇಂದಿನ ಮನೆಯ ನಿಭಾಯಿಸುವ ಹಣಕಾಸಿನ ಒತ್ತಡವನ್ನು ಒಮ್ಮೆ ಯೋಚಿಸಿ ಈ ಬಾರಿ ಆಮ್ ಆದ್ಮಿ ಪಕ್ಷಕ್ಕೆ ಬೆಂಬಲ ನೀಡುವಂತೆ ಪಕ್ಷದ ಪ್ರಚಾರ ಸಮಿತಿಯ ರಾಜ್ಯ ಅಧ್ಯಕ್ಷ  ಮುಖ್ಯ ಮಂತ್ರಿ ಚಂದ್ರು ಹೇಳಿದರು.
ಅವರು ನಿನ್ನೆ ಸಂಜೆ ನಗರದ ಗಾಂಧಿ ಭವನದಲ್ಲಿ ಆಮ್ ಆದ್ಮಿ ಪಕ್ಷದ ಚುನಾವಣಾ  ಪ್ರಚಾರದ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ನಿಟ್ಟಿನಲ್ಲಿ ಆಮ್ ಆದ್ಮಿ ಪಕ್ಷ ಕೆಲಸಮಾಡುತ್ತಿದೆ.
ಇಂದು ಪ್ರಜಾಪ್ರಭುತ್ವದಲ್ಲಿ ಕುಟುಂಬ ರಾಜಕಾರಣ ಮತ್ತು ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುತ್ತೇವೆ ಎಂದು ಹೇಳುವ ಪ್ರಧಾನ ಮಂತ್ರಿ ಮೋದಿಯವರು ಭ್ರಷ್ಟಾಚಾರವು ಹೊತ್ತಿರುವ ಈಶ್ವರಪ್ಪ, ಅರವಿಂದ್ ಲಿಂಬಾವಳಿ ಮತ್ತು ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ಏನು ಕ್ರಮ ಕೈಗೊಂಡಿದ್ದಿರಾ  ಎಂದು ಪ್ರಶ್ನಿಸಿದರು.
ಬಳ್ಳಾರಿಯಲ್ಲಿ ಈ ಬಾರಿಯ ವಿಧಾನ ಸಭಾ ಕ್ಷೇತ್ರ ತುಂಬಾನೇ ವಿಭಿನ್ನವಾದ ಹೋರಾಟವೇ ಆಗಿದೆ, ಸತ್ಯ ಹೇಳುವುದಾದರೆ ಇಲ್ಲಿ ಈ ಬಾರಿ  ಕೋಟ್ಯಧಿಪತಿಗಳ ಹೋರಾಟವೇ ಹೊರತು ಜನಸಾಮಾನ್ಯರ ನೋವಿಗಾಗಿ ಹೋರಾಡುವವರು ಯಾರು ಇಲ್ಲ. ಆದ್ದರಿಂದ ನಮ್ಮ  ಆಮ್ ಆದ್ಮಿ ಪಕ್ಷದಿಂದ ಜನಸಾಮಾನ್ಯರಾದ ಹಾಗು ಬಳ್ಳಾರಿಯ ಎಲ್ಲಾ ಸಮಸ್ಯೆಗಳ ಬಗ್ಗೆ ತಿಳಿದಂತಹ, ಉತ್ತಮ ಸಹೃದಯ ಮನಸ್ಸಿನವರಾದ  ದೊಡ್ಡ ಕೇಶವರೆಡ್ಡಿ ಅವರನ್ನು  ಅಭ್ಯರ್ಥಿಯನ್ನಾಗಿ ಮಾಡಿದೆ.  ಈ ಬಾರಿ ಬಳ್ಳಾರಿಯ ಜನತೆ ಯೋಚನೆ ಮಾಡಿ ಮತನೀಡಿ. ನೀವು ನಿಮ್ಮ ಮನೆಯ ಮಗಳಿಗೆ ಮದುವೆ ಮಾಡುವಾಗ ಹೇಗೆ ಎಲ್ಲಾ ರೀತಿಯಲ್ಲೂ ಯೋಗ್ಯರಾದಂತವರನ್ನು ನಿಮ್ಮ ಮಗಳಿಗೆ ಹುಡುಕುತ್ತಿರೋ ಹಾಗೆಯೇ ಈ ಬಾರಿ ಮತ ಹಾಕುವಾಗ ಯೋಚಿಸಿ ಮತನೀಡಿ ಎಂದರು.
 ಸಭೆಯಲ್ಲಿ  ಅಭ್ಯರ್ಥಿ ಕೊರಲಗುಂದಿ ದೊಡ್ಡ ಕೇಶವ ರೆಡ್ಡಿ, ರಾಜ್ಯಾಧ್ಯಕ್ಷೆ ಸುಷ್ಮಾ ವೀರ, ಜಿಲ್ಲಾ ಉಸ್ತುವರಿ ನವಲಿ ಹಿರೇಮಠ, ಮಹಾನಗರದ ಅಧ್ಯಕ್ಷ ಜೆ. ವಿ. ಮಂಜುನಾಥ, ರಾಜ್ಯ ಕಾರ್ಯದರ್ಶಿ ವಿ.ಬಿ. ಮಲ್ಲಪ್ಪ, ಜಿಲ್ಲಾ ಅಧ್ಯಕ್ಷ  ಟಿ ಕಿರಣ್ ಕುಮಾರ್, ಅಮೆರ್ ಖಾದ್ರಿ, ನೂರ್, ಪ್ರದೀಪ್ ರೆಡ್ಡಿ ರಾಘವ್ ರೆಡ್ಡಿ ಪ್ರಸಾದ್ ರೆಡ್ಡಿ, ರಘು ಶೆಟ್ಟಿ, ದಿವಾಕರ್, ಶಿವಲಿಂಗ ನಾಯಕ್, ಸುಹೇಲ್, ಅಮಿತ್, ಪ್ರತಾಪ್, ಶೇಖರ್ ಯಾದವ್  ಮೊದಲಾದವರು ಇದ್ದರು.