ಭ್ರಷ್ಟಚಾರದ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬಾರದು: ಸುರ್ಜಿವಾಲ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.04: ನಾನ್ ತಿನ್ನಲ್ಲ ತಿನ್ನುವವರನ್ನು ಬಿಡಲ್ಲ ಎನ್ನುವ ಮೋದಿಗೆ ನಿಮ್ಮದೇ ಪಕ್ಷದ ಚೆನ್ನಗಿರಿ ಶಾಸಕ ಕೋಟಿ ಕೋಟಿ ತಿಂದಿರುವುದು ಭ್ರಷ್ಟಾಚಾರ ಅಲ್ಲದೆ ಇನ್ನೇನು ಇಂತಹ ಬಿಜೆಪಿ  ಸರ್ಕಾರವನ್ನು ಕಿತ್ತೊಗೆಯಬೇಕು, ಮತ್ತೆ ಅಧಿಕಾರಕ್ಕೆ ಬರದಂತೆ ಹೋರಾಟ ಮಾಡಬೇಕು ಎಂದು ಎಐಸಿಸಿ ಮುಖಂಡ ರಣಜಿತ್ ಸಿಂಗ್ ಸುರ್ಜಿವಾಲ ಹೇಳಿದರು.
ಅವರು ಇಂದು ನಗರದ ಗುರು ಪಂಕ್ಷನ್ ಹಾಲ್ ನಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಹಮ್ಮಿಕೊಂಡಿದ್ದ  ಕಾಂಗ್ರೆಸ್ ಗ್ಯಾರೆಂಟಿಗಳ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ನಮ್ಮ ಪಕ್ಷ ರಾಜ್ಯದಲ್ಲಿ  ಮುಂಬರುವ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ, ಪ್ರತಿ ಕುಟುಂಬದ ಮಹಿಳೆಗೆ ಮಾಸಿಕ ಎರೆಡು ಸಾವಿರ ರೂ, ಪ್ರತಿ ಕುಟುಂಬಕ್ಕೆ ಮಾಸಿಕ ಎರೆಡು ನೂರು ಯುನೀಟ್ ವಿದ್ಯುತ್ ಉಚಿತವಾಗಿ ನೀಡಲಿದೆ. ಅಲ್ಲದೆ ಮಾಸಿಕ ಪ್ರತಿ ವ್ಯಕ್ತಿಗೆ 10 ಕಿಲೋ ಅಕ್ಕಿ ನೀಡಲಿದೆಂದು  ಗ್ಯಾರೆಂಟೆ ಕೊಡುವುದಾಗಿ ಹೇಳಿದರು.
ಭ್ರಷ್ಟಾಚಾರ ಮಾಡಲ್ಲ, ಮಾಡಲ್ಲ ಎನ್ನುತ್ತಲೇ ಬಿಜೆಪಿಯವರು ಎಷ್ಟು, ಎಷ್ಟು ತಿಂದಿದ್ದಾರೆ ಎಂಬುದು ಲೋಕಾಯುಕ್ತ ದಾಳಿಯಿಂದ ತಿಳಿದಿದೆ. ಇದೇ ರೀತಿ ಇನ್ನಿತರ ಸಚಿವರ ಮನೆಗಳ ಮೇಲೆ ದಾಳಿ ಮಾಡಿದರೆ ಅವರ ಬಂಡವಾಳ ಬಯಲಿಗೆ ಬರಲಿದೆ.
ಬಡವರ, ರೈತರ, ಮಹಿಳೆಯರ, ಅಲ್ಪ ಸಂಖ್ಯಾತರು ಸೇರಿದಂತೆ ಜನಪರ ಪಕ್ಷ ಎಂದರೆ ಕಾಂಗ್ರೆಸ್, ಇದಕ್ಕೆ ಈ ವರಗೆ ದೇಶದಲ್ಲಿ ಆದ ಕ್ಷೀರ, ಹಸಿರು, ಸಂಪರ್ಕ ಕ್ರಾಂತಿಗಳೇ ಸಾಕ್ಷಿ, ಹಿಂದುತ್ವದ ಮಾತುಗಳಿಂದ ನಿಮನ್ನು ವಂಚಿಸುವ ಬಿಜೆಪಿ ಕೇವಲ ಬಂಡವಾಳ ಶಾಹಿಗಳ, ಶ್ರೀಂಮತಪರವಾದ ಪಕ್ಷ ಎಂಬುದನ್ನು ಅರಿಯಬೇಕು ಎಂದರು.
ಪಕ್ಷದ ಮುಖಂಡ ಈಶ್ವರ ಖಂಡ್ರೆ ಮಾತನಾಡಿ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸಬೇಕು‌ ಬರುವ 20 ರಿಂದ 25 ದಿನದಲ್ಲಿ ಚುನಾವಣೆ ಘೋಷಣೆ ಆಗುತ್ತೆ ನಿವೇಲ್ಲ ಸಿದ್ದರಾಗಿ ಎಂದರು.
ರಾಜ್ಯ ಸಭಾ ಸದಸ್ಯ ನಾಸೀರ್ ಹುಸೇನ್ ಮಾತನಾಡಿ .ಕಾಂಗ್ರೆಸ್ ಪಕ್ಷ ಈ ಬಾರಿ ಅಧಿಕಾರಕ್ಕೆ ಬಂದೇ ಬರುತ್ತೆ ಬಂದರೆ ನಾವೇನು ಗ್ಯಾರೆಂಟಿ ಕೊಡುತ್ತೇವೆಂದು ತಿಳಿಸಿದರು.
ಸಮಾರಂಭದಲ್ಲಿ ಎಐಸಿಸಿ ಮುಖಂಡ ಶ್ರೀಧರ ಬಾಬು, ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರಖಂಡ್ರೆ,  ರಾಜ್ಯದ ಸಭಾ ಸದಸ್ಯ ಡಾ. ಸೈಯದ್ ನಾಸಿರ್ ಹುಸೇನ್, ಶಾಸಕರಾದ ತುಕರಾಂ, ನಾಗೇಂದ್ರ, ಗಣೇಶ್, ಮಾಜಿ ಸಂಸದ ಉಗ್ರಪ್ಪ, ಮಾಜಿ ಸಚಿವ ಎಂ.ದಿವಾಕರ ಬಾಬು, ಮಾಜಿ ಶಾಸಕರಾದ ಅನಿಲ್ ಲಾಡ್, ಚಂದ್ರಶೇಖರಯ್ಯ,  ಅನಿಲ್ ನಾಯ್ಡು, ಮೇಯರ್ ಎಂ.ರಾಜೇಶ್ವರಿ ಸುಬ್ಬರಾಯಡು, ವಿಧಾನ ಪರಿಷತ್ ಸದಸ್ಯ ಕೆ.ಎಸ್.ಎಲ್ ಸ್ವಾಮಿ,ಜಿಲ್ಲಾ ಅಧ್ಯಕ್ಷ ಜಿ.ಎಸ್.ಮಹಮ್ಮದ್ ರಫೀಕ್, ಆಂಜನೇಯಲು, ಅಲ್ಲಂ.ಪ್ರಶಾಂತ್, ಕಲ್ಕಂಬ ಪಂಪಾಪತಿ, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳ, ಎ.ಮಾನಯ್ಯ ಮೊದಲಾದವರು ಇದ್ದರು.