’ಭ್ರಮಯುಗಂ’ ಮುಮ್ಮಟ್ಟಿ ಪ್ಯಾನ್ ಇಂಡಿಯಾ ಚಿತ್ರ

ಯಶಸ್ವಿ ಚಿತ್ರ ನೀಡಿರುವ ಹಿರಿಯ ನಿರ್ಮಾಪಕರುಗಳಾದ ಎಸ್.ಶಶಿಕಾಂತ್ ಮತ್ತು ಚಕ್ರವರ್ತಿ ರಾಮಚಂದ್ರ ಜೊತೆಯಾಗಿ ‘ನೈಟ್ ಶಿಫ್ಟ್ ಸ್ಟುಡಿಯೋ’ ಹುಟ್ಟುಹಾಕಿದ್ದಾರೆ. ಈ ಮೂಲಕ ಮಲೆಯಾಳಂ ಜನಪ್ರಿಯ ನಟ ಮಮ್ಮುಟಿ ಅಭಿನಯದ  ‘ಬ್ರಹ್ಮಯುಗಂ’ ಪೌರಾಣಿಕ ಚಿತ್ರ ನಿರ್ಮಾಣ ಕೈಗೆತ್ತಿಕೊಂಡಿದ್ದಾರೆ.

‘ದ ಏಜ್ ಆಫ್ ಮ್ಯಾಡ್‍ನೆಸ್’ ಎಂಬ ಅಡಿಬರಹ ಇದೆ.  ರಾಹುಲ್ ಸದಾಸಿವನ್ ರಚನೆ ಹಾಗೂ ನಿರ್ದೇಶನದ ಜವಬ್ದಾರಿ ಹೊತ್ತುಕೊಂಡಿದ್ದಾರೆ.

 ಈ ಕುರಿತು ಪ್ರತಿಕ್ರಿಯಿಸಿರುವ ನಿರ್ದೇಶಕರು ,ಧೀಮಂತ ನಾಯಕನ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಕನಸು ನನಸಾಗಿದೆ. ಬೆನ್ನಲುಬಾಗಿ ನಿರ್ಮಾಪಕರುಗಳು ಇದ್ದಾರೆ. ಕೇರಳದ ಕರಾಳ ಯುಗದಲ್ಲಿ ಬೇರೂರಿರುವ ಕಥೆಯಾಗಿರುವುದು ವಿಶೇಷ. ಖಂಡಿತವಾಗಿಯೂ ಮಮ್ಮುಟಿ ಅಭಿಮಾನಿಗಳು, ವಿಶ್ವದ ಅಭಿಮಾನಿಗಳಿಗೆ ಇಷ್ಟವಾಗಬಹುದಂದು ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಖ್ಯಾತ ನಟ ಮುಮುಟ್ಟಿ ಅಭಿನಯಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ.ಅದ್ಬುತ ಅನುಭವಕ್ಕೆ  ಜೀವ ತುಂಬುವ ಚಿತ್ರವಾಗಲಿದೆ. ನಿರ್ದೇಶಕರು ಸೃಷ್ಟಿಸಿದ ತಾರಾಗಣ, ತಂತ್ರಜ್ಞರು ಇರುತ್ತಾರೆ. ಕೊಚ್ಚಿ, ಒಟ್ಟಪಲಂ ಸುಂದರ ತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಚಿತ್ರಿಸಲಾಗುವುದು ಎಂದು ನಿರ್ಮಾಪಕರುಗಳು ಮಾಹಿತಿ ಹಂಚಿಕೊಂಡಿದ್ದಾರೆ. ಮಮ್ಮುಟಿ ಅವರೊಂದಿಗೆ ಅರ್ಜುನ್ ಅಶೋಕನ್, ಸಿದ್ದಾರ್ಥ್ ಭರತನ್, ಅಮಲ್‍ ಲಿಜ್ ಮುಂತಾದವರು ಅಭಿನಯಿಸುತ್ತಿದ್ದಾರೆ.

ಸಂಗೀತ  ಕ್ರಿಸ್ಟೋ ಕ್ಸೇವಿಯರ್, ಛಾಯಾಗ್ರಹಣ ಶೆಹನಾದ್ ಜಲಾಲ್, ಸಂಕಲನ ಶಫಿಕ್ಯೂ ಮೊಹಮ್ಮದ್ ಅಲಿ, ಸಂಭಾಷಣೆ ಟಿ.ಡಿ.ರಾಮಕೃಷ್ಣ, ಮೇಕಪ್ ರೋನೆಕ್ಸ್ ಕ್ಸೇವಿಯರ್, ಕಾಸ್ಟ್ಯೂಮ್ ಮೆಲ್ವಿ.ಜೆ, ಕಾರ್ಯಕಾರಿ ನಿರ್ಮಾಪಕ ವಿಕ್ಟರ್ ಪ್ರಭಾಹರನ್.ಎಂ ಅವರದಾಗಿದೆ. ಚಿತ್ರ ಮಲಯಾಳಂ ಸೇರಿದಂತೆ ಕನ್ನಡ, ತೆಲುಗು, ಹಿಂದಿ ಹಾಗೂ ತಮಿಳು ಭಾಷೆಗಳಲ್ಲಿ 2024ರ ಪ್ರಾರಂಭದಲ್ಲಿ ವಿಶ್ವದಾದ್ಯಂತ ಏಕಕಾಲಕ್ಕೆ ತೆರೆಗೆ ಬರುವ ಸಾಧ್ಯತೆ ಇದೆ.