ಭೌದ್ಧಿಕ ಮಟ್ಟ ಹೆಚ್ಚಿಸುವಲ್ಲಿ ಕ್ರೀಡೆ ಸಹಕಾರಿ ಬಲಗೊಳ್ಳಲಿ ಶಾರೀರಿಕ ಶಿಕ್ಞಣ

ಅರಕೇರಾ.ಜು.೨೬- ಕ್ರೀಡೆಗಳು ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿಸುವುದಲ್ಲದೇ ಮಕ್ಕಳಲ್ಲಿನ ಭೌದ್ಧಿಕ ಮಟ್ಟ ಹೆಚ್ಚಿಸಲು ಸಹಕರಿಸುತ್ತದೆ ಕ್ರೀಡೆಗಳ ಮಹತ್ತರ ಸಾಧನೆ ಸಾಧಿಸಲು ಶಾಲಾ ಹಂತದಲ್ಲೇ ದೈಹಿಕ ಶಿಕ್ಷಣ ಅತ್ಯಂತ ಅವಶ್ಯಕ ಕಲಿಕಾ ಸಾಮಾರ್ಥ್ಯಕ್ಕೆ ಸದೃಡವಾದ ದೇಹದ ಜೋತೆಗೆ ಸದೃಢವಾದ ಮನಸ್ಸು ಬೇಕು ಮಕ್ಕಳಲ್ಲಿ ಕ್ರೀಡೆಯಲ್ಲಿ ಅವರಸಾಧನೆ ಅದು ಮಕ್ಕಳ ಕಲಿಗೆ ಸ್ಪೂರ್ತಿಯಾಗುತ್ತದೆಂದು ಕ್ಷೇತ್ರ ಸಮನ್ವಯಾಧಿಕಾರಿ ಶಿವರಾಜ ಪೂಜಾರಿ ಹೇಳಿದರು.
ಅವರು ಮುಸ್ಟೂರು ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿಬರುವ ಶಿವಂಗಿ ಗ್ರಾಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ದೇವದುರ್ಗದಿಂದ ಆಯೋಜಿಲಾಗಿದ್ದ ಅರಕೇರಾ ವಲಯ ಮಟ್ಟದ ಪ್ರೌಢ ಶಾಲಾ ಮಕ್ಕಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಕ್ರೀಡಾಪಟುಗಳು ನಿರ್ಣಯಕರ ತೀರ್ಪಿಗೆ ಅತ್ಯಂತ ಶಿಸ್ತು ಬದ್ಧರಾಗಿ ಕ್ರೀಡಾ ನಿಯಮಗಳನ್ನು ಪಾಲಿಸಬೇಕು.
ಕ್ರೀಡಾಪಟುಗಳು ಜಿಲ್ಲೆ ಮತ್ತು ರಾಜ್ಯ ಮಟ್ಟದವರೆಗೆ ಉತ್ತಮ ಪ್ರದರ್ಶನ ನೀಡುವ ಮೂಲಕ ಕೀರ್ತಿ ತರಬೇಕು. ಕಳೆದ ೩ ವರ್ಷಗಳಿಂದ ಕರೋನಾ ಸಾಂಕ್ರಾಮಿಕ ರೋಗದಿಂದ ವಿದ್ಯಾರ್ಥಿಗಳ ಕಲಿಕೆ ಮತ್ತು ಕ್ರೀಡೆಗೆ ಕಂಟಕ ಬಂದಂತಾಗಿತ್ತು. ಇದೀಗ ಶೈಕ್ಷಣಿಕ ಚಟುವಟಿಕೆಗಳು ಪ್ರಾರಂಭವಾಗಿದ್ದು, ಉತ್ಸಾಹಕರಾಗಿ ಕ್ರೀಡೆಯಲ್ಲಿ ಭಾಗವಹಿಸುತ್ತಿರುವುದು ಸಂತಸ ತಂದಿದೆ ಎಂದರು.
ಬಳಿಕ ಹಿರಿಯ ಮುಖಂಡ ರಾಜಶೇಖರಪ್ಪ ಗೌಡ ದಳಪತಿ ಮಾತನಾಡಿ, ಕ್ರೀಡಾ ಪಟುಗಳು ಗೆದ್ದಾಗ ಹಿಗ್ಗದೆ ಸೋತಾಗ ಕುಗ್ಗದೆ ಎರಡನ್ನು ಸಮನ್ವಯ ದೃಷ್ಠಿಯಿಂದ ಸ್ವೀಕರಿಸಿ ಕ್ರೀಡಾಭಿಮಾನ ಪ್ರದರ್ಶಿಸಬೇಕು ಎಂದು ಕಿವಿ ಮಾತು ಹೇಳಿದರು. ರಂಗನಾಥ ದೈಹಿಕ ಶಿಕ್ಷಕರಿಂದ ಮಕ್ಕಳಿಗೆ ಕ್ರೀಡಾಪ್ರತಿಜ್ಞಾ ಸ್ವೀಕಾರ ಮಾಡಿಸಿದರು.ಅರಕೇರಾ ವಲಯಮಟ್ಟದಲ್ಲಿ ೧೪ ಪ್ರೌಢಶಾಲೆಗಳು ಭಾಗವಹಿಸಿದ್ದವು.
ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷರಾದ ಹನುಮಯ್ಯ ಪೆದ್ದೆರ್, ಶರಣಗೌಡ ಹಾಲಂ ಗೌಡ್ರು, ಭೂದಾನಿಗಳಾದ ಚಿದಾನಂದಪ್ಪ, ರಾಚನಗೌಡ, ಮುಖಂಡರಾದ ರಾಜಶೇಖರಪ್ಪ ಗೌಡ ದಳಪತಿ, ರಂಗಪ್ಪ, ಧನಂಜಯ್ಯ, ಕೆ.ವೆಂಕಟೇಶ ನಾಯಕ, ದೌಲತ್‌ಬೀ ಬುಡಾನ್‌ಸಾಬ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಎಂ.ವಿ ಕವಡಿಮಟ್ಟಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹನುಮಂತ್ರಾಯ ಶಾಖೆ, ಪ್ರೌಢ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಮಹಿಬೂಬಅಲಿ, ಪ್ರೌಢ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಉಪಾದ್ಯಕ್ಷ ವಿಶ್ವನಾಥ ಪಾಟೀಲ್, ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿ ಸಿಬಿ ಪಾಟೀಲ್, ಸಿಆರ್‌ಪಿ ಶ್ರೀಶೈಲ ತಳವಾರ, ಶೃತಿ ಸಂಸ್ಕೃತಿ ಸಂಸ್ಥೆ ತಾಲೂಕು ಸಂಯೋಜಕ ರಾಮಣ್ಣ ಎನ್ ಗಣೇಕಲ್, ಮುಖ್ಯೋಪಾಧ್ಯಯರಾದ ಶಿವಜಾತಪ್ಪ, ಪ್ರಭಾಕರ ಪತ್ತಾರ .ಸೀರಾಜ್ ಮುಖ್ಯೋಪಾದಯ್ಯರು ಸರಕಾರಿ ಬಾಲಕಿಯರ ಪ್ರೌಢ ಶಾಲೆ ಅರಕೇರಾ ಮತ್ತೀತರರಿದ್ದರು. ಅರಕೇರಾ ವಲಯಮಟ್ಟದಲ್ಲಿ ೧೪ ಪ್ರೌಢಶಾಲೆಗಳು ಭಾಗವಹಿಸಿದ್ದರು.