ಭೌತಿಕ ಸಂಪತ್ತಿನಿಂದ ಸಂತೋಷ, ಸಾಂಸ್ಕೃತಿಕ ಸಂಪತ್ತಿನಿಂದ ಆನಂದ 

       

ಸಂಜೆವಾಣಿ ವಾರ್ತೆ

ದಾವಣಗೆರೆ ಮೇ ೨೫; ಆಸ್ತಿ, ಅಂತಸ್ತು, ಅಧಿಕಾರ, ಹಣದಿಂದ ಸಂತೋಷ ಪಡೆಯಬಹುದೇ ಹೊರತು  ಆನಂದ ಪಡೆಯಲು ಸಾಧ್ಯವಿಲ್ಲ, ಶಾಸ್ತ್ರೀಯ ನೃತ್ಯ ಸಂಗೀತಗಳು ಆನಂದ ನೀಡಬಲ್ಲವು ಎಂದು ಹಿರಿಯ ಪತ್ರಕರ್ತ ಡಾ.ಎಚ್.ಬಿ.ಮಂಜುನಾಥ ಹೇಳಿದರು.ನಗರದ ನಮನ ಅಕಾಡೆಮಿ ಹಾಗೂ ಶ್ರೀಲಂಕಾದ  ಬೆಸಿಲಿಕ ಸ್ಪೋರ್ಟ್ಸ್ ಅಂಡ್ ಲೀಶರ್ ಜಂಟಿಯಾಗಿ ಏರ್ಪಾಡಿಸಿದ್ದ ಇಂಡೋ ಶ್ರೀಲಂಕಾ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅಭಿನಂದನಾ ಸನ್ಮಾನ ಸ್ವೀಕರಿಸಿ ಮಾತಾಡುತ್ತಾ ಭಾರತ ಕೇವಲ ವಿಶ್ವದ ದೊಡ್ಡ ಆರ್ಥಿಕ ಶಕ್ತಿಯಷ್ಟೇ ಅಲ್ಲ ಜಗತ್ತೇ ಪೂಜ್ಯ ಭಾವನೆಯಿಂದ ಗೌರವಿಸುವ ಶಾಸ್ತ್ರೀಯ ಕಲಾಸಂಪತ್ತು ನಮ್ಮಲ್ಲಿದೆಯಾದ ರೂ ಬೇರೆ ದೇಶಗಳ ಕಲಾಪ್ರಕಾರಗಳನ್ನು ಗೌರವಿಸುವ ಔದಾರ್ಯತೆ ನಮ್ಮದು ಎಂದರು.   ಮುಖ್ಯಅತಿಥಿಗಳಾಗಿ ಶ್ರೀಲಂಕಾದ ಬೆಸಿಲಿಕ ಸ್ಪೋರ್ಟ್ಸ್ ಅಂಡ್ ಲೀಶರ್ ನ ರೋಷನ್ ಸಿಲ್ವ,ಹಿಮಾಲಿ ಉಪೇಕ್ಷಾ ಜಯತಿಲಕಾ,ಮರಿನಾ  ಪೆರೇರಾ  ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ನಮನ ಕಾಡಮಿಯ  ಗೋಪಾಲಕೃಷ್ಣ ಸ್ವಾಗತ ಕೋರಿದರೆ ಮಾಧವಿ ಗೋಪಾಲಕೃಷ್ಣ ಪ್ರಾಸ್ತಾವಿಕ ನುಡಿಗಳೊಂದಿಗೆ ವರದಿ ವಾಚಿಸಿದರು.  ಮಾನಸಿ,ಶ್ರೀಧರ್ ನಿರೂಪಿಸಿದರೆ ಪಿ ಸಿ ರಾಮನಾಥ್ ವಂದನೆ ಸಲ್ಲಿಸಿದರು. ಅನಿಲ್ ಬಾರೆಂಗಳ ಮುಂ ತಾದವರು ಭಾಗವಹಿಸಿದ್ದರು. ಶ್ರೀಲಂಕಾ ಹಾಗೂ ಭಾರತೀಯ ಶಾಸ್ತ್ರೀಯ,ಲಘು ಶಾಸ್ತ್ರೀಯ ನೃತ್ಯ ಪ್ರಸ್ತುತಿಗಳು ಸಭಾಸದರ ಮನಸೂರೆಗೊಳಿಸಿದವು. ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿನ ಎಸ್ ಎಸ್ ಮಲ್ಲಿಕಾರ್ಜುನ ಸಾಂಸ್ಕೃತಿಕ ಭವನದಲ್ಲಿ ಕಾರ್ಯಕ್ರಮ ಏರ್ಪಾಡಾಗಿತ್ತು.