ಭೌತಿಕ, ಮೌಲ್ಯಯುತ ಶಿಕ್ಷಣ ಜ್ಞಾನ ವಿಕಾಸಕ್ಕೆ ಪೂರಕ

ಕೋಲಾರ,ಮೇ ೨೨- ಗುರುಗಳು ಮಕ್ಕಳಿಗೆ ಪಠ್ಯದ ಶಿಕ್ಷಣದ ಜೂತೆಗೆ ಭೌತಿಕ ಮತ್ತು ಮೌಲ್ಯಯುತ ಶಿಕ್ಷಣವನ್ನು ಕಲಿಸುವ ಮೂಲಕ ಜ್ಞಾನ ವಿಕಾಸನಕ್ಕೆ ಪೂರಕವಾಗ ಬೇಕಾಗಿದೆ, ಶಿಕ್ಷಣದ ಜೂತೆಗೆ ಉತ್ತಮ ಸಮಾಜ ನಿರ್ಮಾಣಕ್ಕೆ, ಉತ್ತಮವಾದ ಸಂಸ್ಕಾರ, ಸಂಸ್ಕೃತಿಗಳಿಗೆ ಅದ್ಯತೆ ನೀಡ ಬೇಕಾಗಿದೆ. ಇದು ಶಿಕ್ಷಕರ ಜವಾಬ್ದಾರಿ ಮಾತ್ರವಲ್ಲ ಶಿಕ್ಷಕರಷ್ಟೆ ಪೋಷಕರ ಜವಾಬ್ದಾರಿಯು ಇರುತ್ತದೆ ಎಂಬ ಮೌಂಟ್ ಅಬೂವಿನ ಪ್ರಜಾಪೀತ ಈಶ್ವರಿಯ ವಿಶ್ವವಿದ್ಯಾಲಯದ ರಾಜಯೋಗಿ ಬ್ರಹ್ಮ ಕುಮಾರ ಭಗವಾನ್ ಭಾಯಿ ಅಭಿಪ್ರಾಯ ಪಟ್ಟರು.
ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಕೇಂದ್ರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಅಸತ್ಯದ ಕಡೆಯಿಂದ ಸತ್ಯದ ಕಡೆಗೆ,ಅಂಧಕಾರದಿಂದ ಪ್ರಕಾಶದ ಕಡೆ ಹೋಗಲು ಮೌಲ್ಯಯುತ, ಭೌತಿಕವಾದ ಶಿಕ್ಷಣವನ್ನು ಮಕ್ಕಳಿಗೆ ಕಲಿಸ ಬೇಕು, ಡಾಕ್ಟರ್ ಮತ್ತು ಇಂಜನಿಯರ್‌ನಂತ ಉದ್ಯೋಗ ಪಡೆಯಲು ಮಾತ್ರ ಶಿಕ್ಷಣ ಪಡೆದರೆ ಮಾತ್ರಕ್ಕೆ ಶಿಕ್ಷಣವು ಪೂರ್ಣವಾಗದು. ಶಿಕ್ಷಣ ಜೂತೆಗೆ ಮಾನವೀಯತೆ,ಗುಣಮಟ್ಟದ ಸಂಸ್ಕಾರ, ಸಂಸ್ಕೃತಿ, ಅಧ್ಯಾತ್ಮಿಕತೆಗಳನ್ನು ಕಲಿಸಿದಾಗ ಮಾತ್ರ ಜೀವನವು ಪರಿಪೂರ್ಣವಾಗಲು ಸಾಧ್ಯ ಎಂದು ಪ್ರತಿಪಾದಿಸಿದರು.
ಪಠ್ಯಗಳ ಜೂತೆಗೆ ಮಾನವೀಯ ಮೌಲ್ಯಗಳು ಇರುವಂತ ಧರ್ಮ ಗ್ರಂಥಗಳನ್ನು ಅಧ್ಯಾಯನ ಮಾಡಬೇಕು, ಪೋಷಕರು ತಪ್ಪು ಮಾಡುವುದು ಕಂಡಾಗ ಮಕ್ಕಳು ಸಹ ಅದೇ ಹಾದಿಯಲ್ಲಿ ಸಾಗುತ್ತಾರೆ ಹಾಗಾಗಿ ಪೋಷಕರು ತಪ್ಪು ಮಾಡಬೇಡಿ ಅದು ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂದರು.
ತಾಯಂದಿರು ಗರ್ಭಿಣಿ ಹಂತದಲ್ಲಿ ಶಿಶುವು ಪೋಷಕರ ಗುಣಗಳನ್ನು ಅಳವಡಿಸಿ ಕೊಳ್ಳುತ್ತದೆ ಎಂಬುವುದಕ್ಕೆ ಮಹಾಭಾರತದಲ್ಲಿ ಕೃಷ್ಣ ಪರಮಾತ್ಮನು ನೀಡಿದ ಸಂದೇಶಗಳನ್ನು ತಂಗಿ ಸುಭದ್ರೆಯ ಹೊಟ್ಟೆಯಲ್ಲಿದ್ದ ಶಿಶು(ಅಭಿಮನ್ಯು) ಅಳವಡಿಸಿ ಕೊಂಡಿತ್ತು ಅದೇ ಮಾದರಿಯಲ್ಲಿ ಶಿವಾಜಿ ಮಹಾರಾಜ ಜೀಜಬಾಯಿ ಹೊಟ್ಟೆಯಲ್ಲಿದ್ದಾಗ ಪುರಣ ಪ್ರವಚನಗಳನ್ನು ಅಲಿಸಿದ್ದು ಅವರ ಜೀವನದಲ್ಲಿ ಮೈಗೊಡಿಸಿದ್ದರು ಎಂಬ ಉದಾಹರಣೆಯನ್ನು ನೀಡಿದ ಅವರು ಉತ್ತಮವಾದ ಗ್ರಂಥಗಳನ್ನು ಅಧ್ಯಾಯನ ಮಾಡುವ ಮೂಲಕ ಮಕ್ಕಳಿಗೆ ಮಾರ್ಗದರ್ಶನ ನೀಡಬೇಕೆಂದು ತಿಳಿಸಿದರು.
ಶಿಕ್ಷಕರು ವಿದ್ಯಾರ್ಥಿಗಳಿಗೆ ಭೌತಿಕ ಕ್ಷಮತೆ, ಭಾವನಾತ್ಮಕ ಕ್ಷಮತೆ, ನೈತಿಕತೆಯ ಕ್ಷಮತೆ, ಅಧ್ಯಾತ್ಮಿಕತೆ ಕ್ಷಮತೆ ಇವುಗಳು ೪ ಅಧಾರ ಸ್ಥಂಭಗಳಾಗಿ ಪರಿವರ್ತನೆಯಾಗಿ ಉತ್ತಮವಾದ ಸಮಾಜ ನಿರ್ಮಾಣಕ್ಕೆ ಪೂರಕವಾಗಿ ಸಮಾಜದ ಮುಖ್ಯ ವಾಹಿನಿಗೆ ಬರಲು ಪೂರಕವಾಗುವುದು. ವಿದ್ಯೆ ಮೈಗೊಡಿಸಲು ವಿನಯವೇ ಭೊಷಣ, ಈ ೪ ಕ್ಷಮತೆಗಳನ್ನು ಮೈಗೊಡಿಸಿ ಕೊಂಡಲ್ಲಿ ವಿನಮ್ರತೆ ಬರುತ್ತದೆ. ಮಾನಸಿಕ ಒತ್ತಡಗಳಿಂದ ವಿಮುಕ್ತಗೊಳ್ಳಲು ಪೂರಕವಾಗುತ್ತದೆ ಎಂದು ಹೇಳಿದರು,
ಬಂಗಾರಪೇಟೆಯ ಬಿ.ಕೆ. ನಾಗೇಂದ್ರ ಮಾತನಾಡಿ ನೈತಿಕ ಶಿಕ್ಷಣದಿಂದ ಸಮಾಜ ಪರಿವರ್ತನೆ ಸಾಧ್ಯ, ಕ್ರೌರ್ಯ, ಹಿಂಸೆಗಳ ವೈಭವೀಕರಣ ಬೇಡಾ, ಸಕಾತ್ಮಾಕ ವಿಚಾರಗಳನ್ನು ಹೆಚ್ಚಾಗಿ ವೈಭವೀಕರಿಸ ಬೇಕು ಎಂದರು,
ಸುದ್ದಿಗೋಷ್ಠಿಯಲ್ಲಿ ಬ್ರಹ್ಮಕುಮಾರಿ ಬಿ.ಕೆ. ಶಕುಂತಲಾ ಮಾತನಾಡಿದರು, ಬಿ.ಕೆ.ನಾರಾಯಣಸ್ವಾಮಿ ಅವರು ಭಗವಾನ್ ಬಾಯ್ ಅವರು ಹಿಂದಿ ಭಾಷೆಯ ಮಾಹಿತಿಯನ್ನು ಕನ್ನಡ ಭಾಷೆಗೆ ತರ್ಜುಮೆ ಮಾಡಿದರು, ಬಿ.ಕೆ. ಚಂದ್ರಶೇಖರ್ ಅವರು ಮೌಂಟ್ ಅಬೂ ಭಗವಾನ್ ಬಾಯ್ ಅವರ ಕಿರು ಪರಿಚಯವನ್ನು ಮಾಡಿ ಕೊಟ್ಟರು,