ಭೌತಶಾಸ್ತ್ರ ಭರವಸೆಯ ಶಾಸ್ತ್ರ: ಪ್ರೊ.ರಂಗನಾಥಯ್ಯ

ಕಲಬುರಗಿ,ಜೂ 20: ಪಿಯುಸಿ ವಿದ್ಯಾರ್ಥಿಗಳಿಗೆ ಭೌತಶಾಸ್ತ್ರವೆಂದರೆ ಕಬ್ಬಿಣದ ಕಡಲೆ,ಅದೊಂದು ಭೀತಿಶಾಸ್ತ್ರವೆಂದು ಭಯಪಡುತ್ತಾರೆ. ಆದರೆ ಭೌತಶಾಸ್ತ್ರವೆಂದರೆ ಭೀತಿಶಾಸ್ತ್ರವಲ್ಲ.ಅದು ಭರವಸೆಯ ಶಾಸ್ತ್ರವಾಗಿದೆ ಎಂದು ಶಿವಮೊಗ್ಗ ಡಿವಿಎಸ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ಪ್ರೊ .ರಂಗನಾಥಯ್ಯ ಅವರು ಹೇಳಿದರು.
ನಗರದ ಚಂದ್ರಕಾಂತ ಪಾಟೀಲ ವಿಜ್ಞಾನ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಓರಿಯಂಟೇಶನ್ ಕಾರ್ಯಾಗಾರದಲ್ಲಿ ಅವರು ಮಾತನಾಡಿ ಭೌತಶಾಸ್ತ್ರದ ಕುರಿತಂತೆ 38 ವರ್ಷಗಳ ತಮ್ಮ ಸುದೀರ್ಘ ಅನುಭವಗಳನ್ನು ತೆರೆದಿಟ್ಟರು.
ಇದೇ ಸಂದರ್ಭದಲ್ಲಿ ಪ್ರೊ ರಂಗನಾಥಯ್ಯ ಅವರು ರೇ ಆಪ್ಟಿಕಲ್ ಮತ್ತು ಆಪ್ಟಿಕಲ್ ಉಪಕರಣಗಳ ವಿಷಯ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರು ಕೇಳಿದ ಪ್ರಶ್ನೆಗೆ ಉತ್ತರಗಳನ್ನು ನೀಡಿದರು.ಪ್ರಾಂಶುಪಾಲ ಡಾ. ಆರ್ ಕೃಷ್ಣಮೂರ್ತಿ,ಹಿರಿಯ ಉಪನ್ಯಾಸಕ ಶಿವಾನಂದ ಪಾಟೀಲ ಅವರು ಸೇರಿದಂತೆ ಪ್ರಾಧ್ಯಾಪಕರು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.