ಭೌತಶಾಸ್ತ್ರ ಉಪನ್ಯಾಸಕಿ ಸರಿತಾಗೆ ಆದರ್ಶ ಶಿಕ್ಷಕಿ ಪ್ರಶಸ್ತಿ

ಸೈದಾಪುರ:ಸೆ.20:ಇಲ್ಲಿಗೆ ಸಮೀಪದ ಬಾಲಚೇಡ ಗ್ರಾಮದ ಎಪಿಜೆ ಅಬ್ದುಲ್ ಕಲಾಂ ವಸತಿ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕಿ ಸರಿತಾಗೆ ಯಾದಗಿರಿ ನಗರದ ಉರ್ದು ಭವನದಲ್ಲಿ ಹೆಲ್ಪಿಂಗ್ ಹ್ಯಾಂಡ್ಸ್ ಫೌಂಡೇಶನ್ ವತಿಯಿಂದ ಆದರ್ಶ ಶಿಕ್ಷಕಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಪ್ರಶಸ್ತಿ ಪ್ರಮಾಣ ಪತ್ರ ಸ್ವೀಕರಿಸಿ ಉಪನ್ಯಾಸಕಿ ಸರಿತಾ ಮಾತನಾಡಿ, ಪ್ರಶಸ್ತಿಯಿಂದ ನನ್ನ ಜವಬ್ದಾರಿ ಹೆಚ್ಚಾಗುವಂತೆ ಮಾಡಿದೆ. ಗಡಿ ಗ್ರಾಮೀಣ ಭಾಗದವರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಸಂತಸವನ್ನುಂಟು ಮಾಡಿದೆ. ನನ್ನ ಈ ಸಾಧನೆಗೆ ವಿದ್ಯಾರ್ಥಿಗಳು ಕಾರಣರಾಗಿದ್ದಾರೆ. ಇನ್ನೂ ಹೆಚ್ಚಿನ ಸೇವೆ ಸಲ್ಲಿಸುವಲ್ಲಿ ಹಿರಿಯರ ಮಾರ್ಗದರ್ಶದೊಂದಿಗೆ ಕಾರ್ಯ ನಿರ್ವಹಿಸುತ್ತೇನೆ ಎಂದು ಹೇಳಿದರು.
ಉಪನ್ಯಾಸಕಿ ಸರಿತಾ ಅವರ ಸಾಧನೆಗೆ ಜಿಲ್ಲಾ ಅಲ್ಪಾ ಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ರಾಜು, ಸಿಬ್ಬಂದಿ ಮಾಶಾಬಿ, ಪ್ರಾಂಶುಪಾಲ ಹನುಮಂತರಾಯ, ವಾರ್ಡನ ಮಹೇಂದ್ರ, ಬಸವರಾಜ ಬಡಿಗ, ವಿನೋದ, ಬಸವರಾಜ, ವಹೀದಾ ಪರ್ವೀನ ಸೇರಿದಂತೆ ಇತರರು ಹರ್ಷ ವ್ಯಕ್ತಪಡಿಸಿದ್ದಾರೆ.