ಭೋವಿ ಯುವ ವೇದಿಕೆ ಸಭೆ

ಕೋಲಾರ, ಜು.೨೯: ಕೋಲಾರ ತಾಲೂಕು ಭೋವಿ ಯುವ ವೇದಿಕೆಯ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯನ್ನು ಬಂಗಾರಪೇಟೆಯ ಮಾಜಿ ಶಾಸಕರೂ ಹಾಗೂ ಕೋಲಾರ ಜಿಲ್ಲಾ ಭೋವಿ ಜನಾಂಗ ಸಂಘದ ಜಿಲ್ಲಾಧ್ಯಕ್ಷ ಎಂ.ನಾರಾಯಣಸ್ವಾಮಿ ಅಧ್ಯಕ್ಷತೆಯಲ್ಲಿ ನಗರದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿತ್ತು.
ಕೋಲಾರ ತಾಲೂಕು ಭೋವಿ ಯುವ ವೇದಿಕೆಯ ಗೌರವಾಧ್ಯಕ್ಷರಾಗಿ ಗರುಡನಹಳ್ಳಿ ಮುರಳೀಧರ, ಅಧ್ಯಕ್ಷರಾಗಿ ಕೋಲಾರದ ಎನ್.ಕಿರಣ್‌ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಲಕ್ಷ್ಮೀಸಾಗರ ವೆಂಕಟರಾಮ್, ಉಪಾಧ್ಯಕ್ಷರುಗಳಾಗಿ ಗುಟ್ಟಹಳ್ಳಿ ಪ್ರಭಾಕರ್, ಸೊಣ್ಣೇನಹಳ್ಳಿ ಚಂದ್ರು, ಸಂಘಟನಾ ಕಾರ್ಯದರ್ಶಿಯಾಗಿ ಕೆ.ಬಿ.ಹೊಹಳ್ಳಿ ಶ್ರೀರಾಮ್, ಕಾರ್ಯದರ್ಶಿಯಾಗಿ ಕೋಲಾರ ನವೀನ್, ಖಜಾಂಚಿಯಾಗಿ ಕೋಲಾರ ಪ್ರಶಾಂತ್ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.ನೂತನ ಪದಾಧಿಕಾರಿಗಳನ್ನು ಅಭಿನಂದಿಸಿ ಮಾತನಾಡಿದ ಕೋಲಾರ ಜಿಲ್ಲಾ ಭೋವಿ ಜನಾಂಗ ಸಂಘದ ಜಿಲ್ಲಾಧ್ಯಕ್ಷ ಎಂ.ನಾರಾಯಣಸ್ವಾಮಿ, ಅರಿತು ತಾವು ಸಮಾಜದ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಡಾ.ಶಿವಣ್ಣ, ವಿ.ಹನುಮಪ್ಪ, ಜಿಲ್ಲಾ ಭೋವಿ ಜನಾಂಗ ಸಂಘದ ಎಂ.ವಿಜಯಕುಮಾರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹೆಚ್.ಶ್ರೀನಿವಾಸಪ್ಪ, ನಿವೃತ್ತ ಉಪ ತಹಸೀಲ್ದಾರ್ ರಾಮಚಂದ್ರಪ್ಪ, ಬಂಗಾರಪೇಟೆ ತಾಲೂಕು ಅಧ್ಯಕ್ಷ ಎಸ್.ನಾರಾಯಣ್, ಪಿ.ಎಲ್.ಡಿ ನಾರಾಯಣಪ್ಪ, ನಗರಸಭೆ ಸದಸ್ಯ ಹಾಗೂ ಕೋಲಾರ ನಗರದ ಘಟಕದ ಭೋವಿ ಸಂಘದ ಅಧ್ಯಕ್ಷ ಎಲ್.ಎಲ್.ಬಿ.ಮಂಜುನಾಥ್, ಪಾಕರಹಳ್ಳಿ ಲಕ್ಷ್ಮೀನಾರಾಯಣ, ಲಕ್ಷ್ಮೀಸಾಗರ ರಾಜಣ್ಣ, ತಾಲೂಕು ಅಧ್ಯಕ್ಷ ಕೆ.ಎಂ.ಮುನಿರಾಜು, ಗರುಡನಹಳ್ಳಿ ನಾಗರಾಜ್, ಕೊಂಡರಾಜನಹಳ್ಳಿ ಮುನಿರೆಡ್ಡಿ, ಕೆ.ಎಂ.ಸುಬ್ಬರಾಮಪ್ಪ, ಬಂಗಾರಪೇಟೆ ಸಂಜೀವಪ್ಪ, ಲಕ್ಷ್ಮೀಸಾಗರ ಮಂಜುನಾಥ್, ಚೊಕ್ಕಪುರ ಗೋಪಾಲ್, ಶಿಳ್ಳಂಗೆರೆ ರಮೇಶ್, ಬೆಳಗಾನಹಳ್ಳಿ ಸೋಮಶೇಖರ್, ಜಿಲ್ಲಾ ಭೋವಿ ಮುಖಂಡ ಪಿ.ಸಿ.ಹಳ್ಳಿ ಸುಬ್ಬರಾಯಪ್ಪ, ಅಬ್ಬಣಿ ನಾಗರಾಜ್, ಕೋಲಾರದ ರವಿ (ಸಂತೇಗೇಟ್), ಪವನ್, ಭರತ್, ಗಣೇಶ್, ಅಭಿಲಾಷ್, ಉದಯ್ ಇನ್ನಿತರರು ಉಪಸ್ಥಿತರಿದ್ದರು.