ಭೋವಿ ನಿಗಮಕ್ಕೆ ಅಧ್ಯಕ್ಷರನ್ನಾಗಿ ನೇಮಕ ಮಾಡಲು ನಾಗೇಶ್ ಒತ್ತಾಯ

ರಾಯಚೂರು,ಆ.೬- ಬಿಜೆಪಿ ಸರ್ಕಾರ ಅವಧಿ ೫ ವರ್ಷ ಮುಗಿಯಲು ಬಂದರು ಕೂಡ ಈವರೆಗೆ ಭೋವಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡದೇ ಇರುವುದು ಖಂಡನೀಯ ಕೂಡಲೇ ಭೋವಿ ನಿಗಮಕ್ಕೆ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು ಕರ್ನಾಟಕ ರಾಜ್ಯ ಭೋವಿ ವಡ್ಡರ ಸಂಘದ ಮುಖಂಡ ನಾಗೇಶ್ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ಕೆಲವೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ಬರುತ್ತಿದೆ ಆದರೂ ಕೂಡ ಭೋವಿ ನಿಗಮ ಅಧ್ಯಕ್ಷರನ್ನಾಗಿ ನೇಮಕ ಮಾಡಲು ಸರಕಾರಕ್ಕೆ ಆಗುತ್ತಿಲ್ಲ.೨೦೧೬-೧೭ ರಲ್ಲಿ ಕಾಂಗ್ರೆಸ್ ಸರಕಾರ ಇದ್ದಾಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೋವಿ ನಿಗಮ ಅಧ್ಯರನ್ನಾಗಿ ನೇಮಿಸಿದ್ದರು.ಆದರೆ ಬಿಜೆಪಿ ಮಾತ್ರ ಇದುವರೆಗೆ ನಿಗಮದ ಅಧ್ಯಕ್ಷನ್ನಾಗಿ ನೆಮಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
೨೦೧೧-೧೨ ರಲ್ಲಿ ಬಿಜೆಪಿ ಸರಕಾರ ರಚನೆಯಾಗಲು ಭೋವಿ ಸಮಾಜದವರು ಬೆಂಬಲವನ್ನು ನೀಡಲಾಗಿತ್ತು.ಅಧಿಕಾರಕ್ಕೆ ಬಂದ ನಂತರ ಭೋವಿ ಸಮಾಜವನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ ಎಂದು ದೂರಿದರು.
ಜು.೭ ರಂದು ಭೋವಿ ಸಮಾಜದ ಬಡ ಕಾರ್ಮಿಕರಿಗೆ ಕುಲ ಕಸಬಿಗೆ ಬೇಕಾಗುವ ಸಲಕರಣೆಗಳನ್ನು ನೀಡಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಗಿತ್ತು.ಆದರೆ ಇಲ್ಲಿಯವರೆಗೂ ಯಾವುದೇ ಕುಲ ಕಸಬಿಗೆ ಬೇಕಾಗುವ ಸಲಕರಣೆಗಳನ್ನು ನೀಡಿಲ್ಲ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಹನುಮಂತು,ಶಶಿಕಲಾ ಭೀಮರಾಯ,ಈರಣ್ಣ ಭೋವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.