
ಆಳಂದ,ಮೇ.10- ತಾಲೂಕಿನ ಭೋದನ ಗ್ರಾಮದಲ್ಲಿ ಸಿಡಿಲು ಬಡಿದು ಎತ್ತು ಸಾವಿಗೀಡಾಗಿರುವ ಘಟನೆ ನಿನ್ನೆ ಸಂಭವಿಸಿದೆ
ಗ್ರಾಮದ ರೈತ ನಾಗರಾಜ ಸಿ.ಪಗಡಿ ಅವರಿಗೆ ಸೇರಿದ ಕೃಷಿ ಬಳಕೆಯ ಎತ್ತಿಗೆ ಸಿಡಿಲು ಬಡಿದ ಪರಿಣಾಮ ಸತ್ತುಹೋಗಿದೆ, ನೊಂದ ರೈತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.