ಭೋಗಾಪುರ ಗ್ರಾ.ಪಂ. ಉಪಾಧ್ಯಕ್ಷರಿಂದ ಶಾಸಕರಿಗೆ ಸನ್ಮಾನ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಫೆ.05-ತಾಲೂಕಿನ ಭೋಗಾಪುರ ಗ್ರಾ.ಪಂ.ನೂತನ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಪಿ.ಮಹದೇವಯ್ಯ ಅವರು ಹಾಗೂ ಪಂಚಾಯಿತಿ ವ್ಯಾಪ್ತಿಯ ಮುಖಂಡರು ಕ್ಷೇತ್ರದ ಶಾಸಕರು ಹಾಗೂ ಎಂಎಸ್‍ಐಎಲ್‍ನ ಅಧ್ಯಕ್ಷ ಸಿ. ಪುಟ್ಟರಂಗಶೆಟ್ಟರನ್ನು ಭೇಟಿ ಮಾಡಿ ಅಭಿನಂದಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶಾಸಕರಿಗೆ ಗುಲಾಬಿ ಹೂವಿನ ಹಾರಹಾಕಿ ಅಭಿನಂದಿಸಿ ಮಾತನಾಡಿದ ನೂತನ ಉಪಾಧ್ಯಕ್ಷ ಪಿ. ಮಹದೇವಯ್ಯ ಅವರು ಭೋಗಾಪುರ ಗ್ರಾಮಪಂಚಾಯಿತಿ ಅಭಿವೃದ್ದಿಗೆ ಹೆಚ್ಚಿನ ಅನುದಾನ ನೀಡುವ ಜೊತೆಗೆ ಗ್ರಾಮಗಳ ಪ್ರಗತಿಗೆ ಹೆಚ್ಚಿನ ಅದ್ಯತೆ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯ ಕೆಲ್ಲಂಬಳ್ಳಿ ಸೋಮಶೇಖರ್, ಮುಖಂಡರಾದ ಕೆಲ್ಲಂಬಳ್ಳಿ ಪು. ಶ್ರೀನಿವಾಸನಾಯಕ, ಎಪಿಎಂಸಿ ಮಾಜಿ ಅಧ್ಯಕ್ಷ ಡಿ. ನಾಗೇಂದ್ರ, ತಾ.ಪಂ.ಮಾಜಿ ಸದಸ್ಯ ಮಹಾಲಿಂಗು, ಗ್ರಾ.ಪಂ.ಅಧ್ಯಕ್ಷೆ ರೂಪ, ಸದಸ್ಯರಾದ ನಂಜುಂಡಸ್ವಾಮಿ, ನಂಜುಂಡೇಗೌಡ, ನಾಗು, ಪುಟ್ಟಗೌರಮ್ಮ, ಮಂಗಳಮ್ಮ, ನಾಗಮ್ಮ, ರಾಜಮ್ಮ, ಇತರರು ಇದ್ದರು.