ಭೈರಗೊಂಡ ಶೂಟೌಟ್ ಪ್ರಕರಣ: ಮತ್ತೆ ಐವರ ಬಂಧನ,2 ಕಂಟ್ರಿ ಪಿಸ್ತೂಲ್ ವಶ

ವಿಜಯಪುರ,ನ.7- ಭೀಮಾತೀರದ ಮಹಾದೇವ ಸಾಹುಕಾರ ಭೈರಗೊಂಡ ಮೇಲಿನ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಪೊಲಿಸರು ಮತ್ತೆ ಐವರನ್ನು ಬಂಧಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಎಸ್.ಪಿ. ಅನುಪಮ ಅಗರವಾಲ್ ಅವರು, ಗುಂಡಿನ ದಾಳಿಯಲ್ಲಿ ಭಾಗಿಯಾಗಿದ್ದ ಯಾಶೀನ್ ರಮಜಾನಸಾಬ್ ದಂದರಗಿ, ಕರೆಪ್ಪ ಅಲಿಯಾಸ್ ಗೂಳಿ ಮಹಾದೇವ ಸೊನ್ನದ, ಸಿದ್ದು ಅಲಿಯಾಸ್ ಸಿದ್ದರಾಯ ಬಸಪ್ಪ ಬೊಮ್ಮನಜೋಗಿ, ಸಂಜು ಅಲಿಯಾಸ್ ಸಚೀನ ತುಕಾರಾಂ ಮಾನವರ ಸಾ.ಅಲಿಯಾಬಾದ ಹಾಗೂ ರವಿ ಧರೆಪ್ಪ ಬಂಡಿ ಸಾ.ಚಡಚಣ ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ 2 ಕಂಟ್ರಿ ಪಿಸ್ತೂಲ್, 5 ಜೀವಂತ ಗುಂಡುಗಳು, 4 ಮೊಬೈಲ್, 1 ಅಟೋರಿಕ್ಷಾ, 1 ಮಚ್ಚನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
ಇದೆ ದಿ.2 ರಂದು ಭೀಮಾತೀರದ ಮಹಾದೇವ ಸಾಹುಕಾರ ಭೈರಗೊಂಡ ಮೇಲೆ ಗುಂಡಿನ ದಾಳಿ ನಡೆದಿತ್ತು. ದಾಳಿಯಲ್ಲಿ ಭೈರಗೊಂಡ ಅವರ ಇಬ್ಬರು ಸಹಚರರು ಹತರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.