ಭೈರಗೊಂಡ ಕೊಲೆ ಯತ್ನ: ಮತ್ತೆ ಮೂವರ ಬಂಧನ

ವಿಜಯಪುರ,ನ-13-ಭೀಮಾತೀರದ ಮಹಾದೇವ ಸಾಹುಕಾರ ಭೈರಗೊಂಡ ಕೊಲೆ ಯತ್ನ ಹಾಗೂ ಆತನ ಅಂಗರಕ್ಷಕ, ಕಾರು ಚಾಲಕನ ಕೊಲೆ ಪ್ರಕರಣಕ್ಕೆ ಬಂಧಿಸಿದಂತೆ ಮತ್ತೆ ಮೂವರನ್ನು ವಿಜಯಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಇಂಡಿ ತಾಲೂಕಿನ ದೇಗಿನಾಳ ಗ್ರಾಮದ ಸಂಘರ್ಷ ಸೂರ್ಯವಂಶಿ, ಉಮರಾಣಿ ಯ ಸಂಗಪ್ಪ ಯಮದೆ ಹಾಗೂ ವಿಜಯಪುರದ ಜಲನಗರದ ಚೇತನ ಶಿರಶ್ಯಾಡ ಎಂದು ಗುರುತಿಸಲಾಗಿದೆ.
ಬಂಧಿತರಿಂದ ಒಂದು ಏರಗನ್, ಒಂದು ಬೈಕ್, ಎರಡು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.
ನವೆಂಬರ್ 2ರಂದು ವಿಜಯಪುರ ಹೊರ ವಲಯದ ಕನ್ನಾಳ‌ ಕ್ರಾಸ್ ಬಳಿ ಮಹಾದೇವ ಸಾಹುಕಾರ ಹಾಗೂ ಆತನ ಬೆಂಬಲಿಗರನ್ನು ಅಡ್ಡಗಟ್ಟಿ ಗುಂಡಿನ ದಾಳಿ ನಡೆಸಿದ್ದರು. ಇದರಲ್ಲಿ ಸದ್ಯ ಮಹಾದೇವ ಸಾಹುಕಾರ ಭೈರಗೊಂಡ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತನ ಇಬ್ಬರು ಬೆಂಬಲಿಗರು ಗುಂಡು ತಗುಲಿ ಸಾವನ್ನಪ್ಪಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 16 ಜನರನ್ನು ಬಂಧಿಸಲಾಗಿದೆ. ಇವರು ಮೂವರು ಸೇರಿ ಬಂಧಿತರ ಸಂಖ್ಯೆ 19 ಕ್ಕೆ ಏರಿಕೆಯಾಗಿದೆ.
ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.