ಭೈರಗೊಂಡ ಕೊಲೆ ಯತ್ನ ಪ್ರಮುಖ ಆರೋಪಿಯ ಬಂಧನ

ವಿಜಯಪುರ, ನ.22-ಭೀಮಾತೀರದ ನಟೋರಿಯಸ್ ಮಹಾದೇವ ಸಾಹುಕಾರ ಭೈರಗೊಂಡ ಕೊಲೆ ಯತ್ನ ಹಾಗೂ ಆತನ ಅಂಗರಕ್ಷಕ, ಕಾರು ಚಾಲಕ ಕೊಲೆ ಪ್ರಕರಣಕ್ಕೆ ಬಂಧಿಸಿ ದಂತೆ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ವಿಜಯಪುರ ನಗರದ ಬಂಬಳ ಅಗಸಿ ನಿವಾಸಿ ಶ್ರೀಶೈಲ ಸಿದ್ದಪ್ಪ ಡಾಂಗಿ ಎಂದು ಗುರುತಿಸಲಾಗಿದೆ.
ಬಂಧಿತನಿಂದ ಪಿಸ್ತೂಲ್, ಒಂದು‌ ಜೀವಂತ ಗುಂಡು ಹಾಗೂ ಒಂದು ಬೈಕ್ ವಶ ಪಡಿಸಿ ಕೊಳ್ಳಲಾಗಿದೆ.
ನವೆಂಬರ್ 2ರಂದು ವಿಜಯಪುರ ಹೊರ ವಲಯದ ಕನ್ನಾಳ‌ ಕ್ರಾಸ್ ಬಳಿ ಮಹಾದೇವ ಸಾಹುಕಾರ ಹಾಗೂ ಆತನ ಬೆಂಬಲಿಗರನ್ನು ಅಡ್ಡಗಟ್ಟಿ ಗುಂಡಿನ ದಾಳಿ ನಡೆಸಿದ್ದರು. ಇದರಲ್ಲಿ ಸದ್ಯ ಮಹಾದೇವ ಸಾಹುಕಾರ ಭೈರಗೊಂಡ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತನ ಇಬ್ಬರು ಬೆಂಬಲಿಗರು ಗುಂಡು ತಗುಲಿ ಸಾವನ್ನಪ್ಪಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 24 ಜನರನ್ನು ಬಂಧಿಸ ಲಾಗಿದೆ.
ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.