ಭೈರಗೊಂಡರ ಮೇಲಿನ ಫೈರಿಂಗ್ ಪ್ರಕರಣಃ ಬಂಧಿತರ ಸಂಖ್ಯೆ 11ಕ್ಕೆ ಏರಿಕೆ

ವಿಜಯಪುರ, ನ.8- ಜಿಲ್ಲೆಯ ಕನ್ನಾಳ ಕ್ರಾಸ್ ಬಳಿ ಭೀಮಾ ತೀರದ ಕಾಂಗ್ರೆಸ್ ಮುಖಂಡ ಮಹಾದೇವ ಸಾಹುಕಾರ ಭೈರಗೊಂಡರ ಮೇಲೆ ನಡೆದ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಲ್ಲಿಯವರೆಗೂ 11ಜನರನ್ನು ಬಂಧಿಸಿದ್ದಾರೆ.
ಇಲ್ಲಿನ ಪೊಲೀಸರು ದಿನದಿಂದ ದಿನಕ್ಕೆ ಪ್ರಕರಣವನ್ನು ಭೇದಿಸುತ್ತಿದ್ದು, ಈ ಮೊದಲು 7 ಜನರನ್ನು ಬಂಧಿಸಿದ್ದ ಅವರು, ತಲೆ ಮರೆಸಿಕೊಂಡಿದ್ದ ಮತ್ತೆ ನಾಲ್ವರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಾದ ಕಾಶಿನಾಥ ಭೀಮಪ್ಪ ತಾಳಿಕೊಟಿ (23) ಸಾ.ರಾಜರತ್ನ ಕಾಲೋನಿ ವಿಜಯಪುರ, ಯೂನೂಸ್ ಅಲಿ ರಜಾಸಾಬ ಗುನ್ನಾಪುರ (24) ಸಾ.ಕುಂಬಾರ ಓಣಿ ವಿಜಯಪುರ, ರಾಜು ಅಲಿಯಾಸ ರಾಜ ಅಹ್ಮದ ತಂದೆ ರಜಾಕಸಾಬ ಗುನ್ನಾಪುರ (27) ಸಾ.ಕುಂಬಾರ ಓಣಿ ವಿಜಯಪುರ, ಹಾಗೂ ಸಿದ್ದು ಅಲಿಯಾಸ ಶಹಾಪೇಠ ಸಿದ್ದು ತಂದೆ ಗುರುಪಾದಪ್ಪ ಮೂಡಂಗಿ ಮೂಡಲಗಿ (24) ಸಾ.ಯೋಗಾಪುರ ಕಾಲೋನಿ ವಿಜಯಪುರ ಇವರೆಲ್ಲರನ್ನು ಪೊಲೀಸರ ತನಿಖಾ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬಂಧಿತರಿಂದ ಕೃತ್ಯಕ್ಕೆ ಬಳಸಿದ ಒಂದು ಮಚ್ಚು, ಎರಡು ಮೋಬೈಲ್, ಎರಡು ಬೈಕಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಪ್ರಕರಣದ ಬಂಧಿತ ಆರೋಪಿಗಳ ಸಂಖ್ಯೆ 11ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ ಅಗ್ರವಾಲ ಅವರು ತಿಳಿಸಿದ್ದಾರೆ. ಪ್ರಕರಣದ ತನಿಖೆಗಾಗಿ ರಚಿಸಿದ ಪೊಲೀಸ ತಂಡದ ಕೆಲಸವನ್ನು ಅವರು ಶ್ಲಾಘನಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.