ಭೇಟಿಗೆ ಬಂದವರು ತಂದ ಪುಸ್ತಕಗಳು

ಕಲಬುರಗಿ,ಜೂ.10-ಸಚಿವರಾದ ನಂತರ ತಮ್ಮನ್ನು ಭೇಟಿ ಮಾಡಲು ಬರುವ ಸಾರ್ವಜನಿಕರು, ಹಿತೈಷಿಗಳು ಹಾಗೂ ಪಕ್ಷದ ಕಾರ್ಯಕರ್ತರು ಹೂವಿನ ಹಾರ, ಶಾಲು ಹಾಗೂ ಹೂವಿನ ಬೊಕೆ ತರಬೇಡಿ. ಅದರ ಬದಲು ಪುಸ್ತಕಗಳನ್ನು ತರುವಂತೆ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮನವಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ತಮ್ಮನ್ನು ಭೇಟಿ ಮಾಡಲು ಬಂದ ಸಾರ್ವಜನಿಕರು, ಹಿತೈಷಿಗಳು ಹಾಗೂ ಪಕ್ಷದ ಕಾರ್ಯಕರ್ತರು ಪ್ರತಿದಿನ ಪುಸ್ತಕಗಳನ್ನು ತರುತ್ತಿದ್ದಾರೆ. ನಿನ್ನೆ ದಿನ ಹಾಗೆ ತಂದ ಪುಸ್ತಕಗಳು ಇಷ್ಟಿವೆ. ಈ ಎಲ್ಲ ಪುಸ್ತಕಗಳನ್ನು ಪಂಚಾಯತಿಯ ಗ್ರಂಥಾಲಯಕ್ಕೆ ಕಳುಹಿಸುತ್ತಿದ್ದು, ಯುವಕರಿಗೆ ಓದಲು ಸಾಕಷ್ಟು ಪುಸ್ತಕಗಳು ದೊರೆಯಲಿವೆ ಎಂದು ಸಚಿವರು ಟ್ವಿಟ್ ಮಾಡಿದ್ದಾರೆ.