
ಬೇಕಾಗುವ ಸಾಮಗ್ರಿಗಳು
*ಬೆಂಡೆಕಾಯಿ – ೨೦೦ ಗ್ರಾಂ
*ಕಡಲೇಹಿಟ್ಟು – ೧೫೦ ಗ್ರಾಂ
*ಅಕ್ಕಿ ಹಿಟ್ಟು – ೧೦೦ ಗ್ರಾಂ
*ಜೀರಿಗೆ – ೧ ಚಮಚ
*ಚಾಟ್ ಮಸಾಲ – ೨ ಚಮಚ
*ಅಚ್ಚಖಾರದಪುಡಿ – ೨ ಚಮಚ
*ಉಪ್ಪು – ೧/೨ ಚಮಚ
*ಎಣ್ಣೆ – ೧/೨ ಲೀಟರ್
*ನಿಂಬೆಹಣ್ಣು – ಅರ್ಧ ಹೋಳು
ಮಾಡುವ ವಿಧಾನ :
ಬೆಂಡೆಕಾಯಿಯನ್ನು ನೀರಿನಲ್ಲಿ ತೊಳೆದು ಒರೆಸಿ, ಉದ್ದವಾಗಿ ಕತ್ತರಿಸಿ ಬೌಲಿಗೆ ಹಾಖಿ ಕೊಳ್ಳಿ. ಇದಕ್ಕೆ ಕಡಲೇಹಿಟ್ಟು, ಅಕ್ಕಿಹಿಟ್ಟು, ಜೀರಿಗೆ, ಚಾಟ್ ಮಸಾಲ, ಅಚ್ಚಖಾರದ ಪುಡಿ, ಉಪ್ಪು, ನಿಂಬೆರಸ, ಹಾಗೂ ಸ್ವಲ್ಪ ನೀರು ಹಾಕಿ ಹದವಾಗಿ ಕಲಸಿ, ೫ ನಿಮಿಷ ನೆನೆಯಲು ಬಿಡಿ. ಬಾಣಲಿಗೆ ಎಣ್ಣೆ ಹಾಕಿ, ಬಿಸಿಯಾದ ನಂತರ ಕಲಸಿಕೊಂಡ ಬೆಂಡೆಕಾಯಿ ಹಾಕಿ, ಗರಿಗರಿಯಾಗಿ ಕರಿದರೆ ರುಚಿಯಾದ ಭೇಂಡಿ ಪಕೋಡ ಸವಿಯಲು ರೆಡಿ.