ಭೂ ಸ್ವಾಧೀನ ಕೈ ಬಿಡಲು ಆಗ್ರಹ

ಧಾರವಾಡ,ಏ6: ಕೆಐಡಿಬಿ ಕಚೇರಿಯಲ್ಲಿ ವಿಶೇಷ ಭೂಸ್ವಾಧೀನ ಅಧಿಕಾರಿಗಳಾದ ಜುಬೇರ್ ಅಹ್ಮದ್ ಅವರೊಂದಿಗೆ ಭೂಮಿ ಉಳಿಸಿ ಹೋರಾಟ ಸಮಿತಿ ಸದಸ್ಯರು ಹಾಗೂ ರೈತ ಕೃಷಿಕಾರ್ಮಿಕ ಸಂಘಟನೆ ಮುಖಂಡರೊಂದಿಗೆ ಸಭೆ ನಡೆಯಿತು.
ಇತ್ತೀಚೆಗೆ ಧಾರವಾಡ ತಾಲೂಕಿನ 14 ಗ್ರಾಮದ ರೈತರಿಗೆ ವಿಶೇಷ ಭೂಸ್ವಾಧೀನ ಅಧಿಕಾರಿಗಳಿಂದ ರೈತರ ಭೂಮಿಯನ್ನು ಸುವರ್ಣ ಕಾರಿಡಾರ್ ಯೋಜನೆ ಅಡಿಯಲ್ಲಿ ಭೂಮಿಯನ್ನು ವಶಪಡಿಸಿಕೊಳ್ಳುತ್ತದೆ ಎಂದು ನೋಟಿಸ್ ಜಾರಿ ಮಾಡಲಾಗಿತ್ತು. ರೈತರು ಭೂಮಿ ಸ್ವಾಧೀನ ಪಡಿಸಿಕೊಳ್ಳುವುದನ್ನು ವಿರೋಧಿಸಿ ಧಾರವಾಡದಲ್ಲಿ ಮಾರ್ಚ್ 26ರಂದು ಕಲಾಭವನ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ,ಜಿಲ್ಲಾಧಿಕಾರಿಗಳಿಗೆ ಮತ್ತು ವಿಶೇಷ ಭೂಸ್ವಾಧೀನ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು.
ಇದರ ಕುರಿತು ಚರ್ಚಿಸಲು ಕೆಐಎಡಿಬಿ ಕಚೇರಿಯಲ್ಲಿ ವಿಶೇಷ ಭೂಸ್ವಾಧೀನಾಧಿಕಾರಿ ಜೊತೆಗೆ ಸಭೆ ನಡೆಯಿತು.
ಸಭೆಯಲ್ಲಿ ರೈತರು ಮತ್ತು ಭೂಮಿ ಉಳಿಸಿ ಹೋರಾಟ ಸಮಿತಿಯ ಮುಖಂಡರು ತಮ್ಮ ಒಕ್ಕೊರಲಿನಿಂದ , ನಮ್ಮಭೂಮಿ ಫಲವತ್ತಾದ ಭೂಮಿ ಆಗಿದೆ, ನೀರಾವರಿ ಭೂಮಿ ನಮ್ಮದಾಗಿದೆ ಯಾವುದೇ ಕಾರಣಕ್ಕೆ ಕೊಡುವುದಿಲ್ಲ ಈ ಪ್ರಸ್ತಾವವನ್ನು ಕೂಡಲೇ ಕೈ ಬಿಡಬೇಕು ಮತ್ತು ರೈತರಿಗೆ ಭೂಮಿ ಸ್ವಾಧೀನಪಡಿಸಿಕೊಳ್ಳುವುದು ಇಲ್ಲ ಎಂದು ನೋಟಿಸ್ ನೀಡುವವರೆಗೂ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ರೈತ ಮುಖಂಡರೊಂದಿಗೆ ಮಾತನಾಡಿದ ವಿಶೇಷ ಭೂಸ್ವಾಧೀನ ಅಧಿಕಾರಿಗಳಾದ ಜುಬೇರ್ ಅಹಮದ್ ಇದು ಪ್ರಾಥಮಿಕ ಪ್ರಸ್ತಾಪ ಕೈಬಿಡಬೇಕೆಂದು ಕೆಐಡಿಬಿಯ ವಿಶೇಷ ಜಿಲ್ಲಾಧಿಕಾರಿಗಳಿಗೆ ರೈತರ ಭೂಮಿ ಕೊಡುವುದಿಲ್ಲ ಎಂಬ ವಸ್ತುಸ್ಥಿತಿಯನ್ನು ವರದಿ ಮಾಡಿ, ಕೂಡಲೇ ಉನ್ನತ ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು. ಸಂದರ್ಭದಲ್ಲಿ ಭೂಮಿ ಉಳಿಸಿ ಹೋರಾಟ ಸಮಿತಿಯ ಮುಖಂಡರಾದ ಆರ್ ಕೆ ಎಸ್ ಜಿಲ್ಲಾ ಅಧ್ಯಕ್ಷರಾದ ಲಕ್ಷ್ಮಣ ಜಡಗಣನವರ, ವಿಠ್ಠಲ್ ಪಿರಗಾರ್,ರಮೇಶ್ ಹೂಸಮನೆ, ಗೋವಿಂದ ಕೃಷ್ಣಪ್ಪನವರ,ಮಾಂಗಜಿ,ಉದಯಕುಮಾರ್ ಪಾಟೀಲ್,ಆರ್,ಎಸ್ ಪವಾರ್,ಮಾರುತಿ ಮಾನೆ, ಗಾಯಕವಾಡ,ಮಂಜು ಮುಂತಾದವರು ಇದ್ದರು.