ಭೂ ಸ್ವಾಧೀನ ಕೈಬಿಡುವಂತೆ ಆಗ್ರಹಿಸಿ ಧರಣಿ


ಸಂಜೆವಾಣಿ ವಾರ್ತೆ
ಕುಕನೂರು, ಅ.03: ಜಿಲ್ಲಾಡಳಿತವು ಕುಕನೂರಿನ ಬಡ ರೈತರ ಜಮೀನು ಗಳಲ್ಲಿ ಒತ್ತಾಯ ಪುವ೯ಕ ಜಮೀನುಗಳನ್ನು ಭೂಸ್ವಾಧೀನ ಮಾಡಲು ಯತ್ನಿಸಿದ್ದು ಅದನ್ನು ಕೈಬಿಡುವಂತೆ ಆಗ್ರಹಿಸಿ ನೊಂದ ರೈತರು ಮಂಗಳವಾರ ಇಲ್ಲಿಯ ಪ.ಪಂ.ಆವರಣದ ಮುಂದೆ ಧರಣಿ ನಡೆಸಿದರು. ಶ್ರೀನಿವಾಸ್ ರಾವ್ ಕುಲಕರ್ಣಿ, ಆನಂದರಾವ್ ಕುಲಕರ್ಣಿ, ಗುಡ್ನೆಪ್ಪಾ ಚಂಡುರ್, ಮೌಲಾಸಾಬ್ ಕೊಪ್ಪಳ,ಮಾಣಿಕ್ ರಾವ್ ಸೇರಿದಂತೆ ಹಲವಾರು ರೈತರ ಜಮಿನುಗಳನ್ನು ಅಭಿವೃದ್ದಿ ಗಾಗಿ ವಶ ಪಡಿಸಿಕೊಳ್ಳುವ ಹುನ್ನಾರ ಕೂಡಲೇ ನಿಲ್ಲಿಸಬೇಕು, ಬೇಕಿದ್ದರೆ ಮಾಜಿ ಸಚಿವ ಹಾಲಪ್ಪ ಆಚಾರ ಜಮೀನುಗಳನ್ನು ಅಭಿವೃದ್ದಿ ಕಾಯ೯ಕೇ ಮುಂದಾಗಬೇಕು ಎಂದು ಜಿಲ್ಲಾಧಿಕಾರಿಗೆ ಬರೆದ ಮನವಿಯಲ್ಲಿ ಆಗ್ರಹಿಸಿದರು. ನೊಂದ ರೈತರು ಧರಣಿಯಲ್ಲಿ ಪಾಲ್ಗೊಂಡಿದ್ದರು.