ಭೂ ಸೇನಾ ನಿಗಮದಿಂದ ಅಪೂರ್ಣ ಕಾಮಗಾರಿ ಮೂಲ ಸೌಕರ್ಯ ವಂಚಿತ ಶಹಾಪುರ ಬಾಲಕರ ಪದವಿ ಪೂರ್ವ ಕಾಲೇಜು

ಶಹಾಪುರ:ಎ.26:ಹೈದ್ರಾಬಾದ ಕರ್ನಾಟಕ ಅಭಿವೃದ್ದಿ ಮಂಡಳಿ 2016-17 ನೇಯ ಸಾಲಿನ ಮೈಕ್ರೋ ಯೋಜನಡಿಯಲ್ಲಿ ಮಂಜೂರಿಯಾದ ಶಹಾಪುರ ಪಿಯುಸಿ ಶಾಲಾ ನೂತನ ಕಟ್ಟಡ ಕಾಮಗಾರಿ ಐದು ವರ್ಷ ಕಳೆದರೂ ಇನ್ನೂ ಪೂರ್ಣಗೊಳ್ಳದೆ ಅಪೂರ್ಣವಸ್ತೆಯಲ್ಲಿ ಮುಳುಗಿದೆ. ಕಟ್ಟಡ ಕಾಮಗಾರಿ ಮಾಡಿದ ಕರ್ನಾಟಕ ಭೂ ಸೇನಾ ನಿಗಮದ ಅಧಿಕಾರಿಗಳು ಶಾಲಾ ಕೊಣೆಗಳನ್ನು ಬೇಕಾಬಿಟ್ಟಿಯಾಗಿ ನಿರ್ಮಾಣ ಮಾಡಿ. ಮೂಲಭೂತ ಸೌಕರ್ಯಗಳು ಒದಗಿಸದೆ ಯಥಾಸ್ಥಿತಿಯಲ್ಲಿ ಬಿಟ್ಟಿದ್ದಾರೆ. ಶಾಲಾ ಅವರಣದಲ್ಲಿ ಬೊರ್ ಕೊರೆದರೂ ಅದಕ್ಕೆ ಸೂಕ್ತ ರಕ್ಷಾ ಕವಚಗಳಿಲ್ಲದೆ ಓಪನ್ ಮಾಡಿ ಅದೆ ಬೊರವೆಲ್ ಗೆ ಪಂಪಸೆಟ್ ಅಳವಡಿಸಿದ್ದಾರೆ. ಹೊರಗಡೆ ಬಾಯ್ತೆರೆದು ನಿಂತ ಈ ಬೊರವೆಲ್‍ಗೆ ಯಾರಾದರೂ ಮಕ್ಕಳಿಗೆ ಮತ್ತು ವಿಧ್ಯಾರ್ಥಿಗಳಿಗೆ ಏನಾದರೂ ಅವಘಡಗಳು ಸಂಭವಿಸಿದಲ್ಲಿ ಹೊಣೆಗಾರ್ಯಾರು ? ಎನ್ನವ ಪಶ್ನೆ ಕಾಡುತ್ತದೆ. ತೀರಾ ಅವ್ಯವಸ್ಥೆಯ ಆಗರದಲ್ಲಿ ಮುಳುಗಿದ ಈ ಬೊರವೆಲ್ ಸ್ಥಿತಿ ಕಂಡು ಭಯ ಉಂಟಾಗುತ್ತಿದೆ. ತೆರೆದ ಬೊರವೆಲ್ ಗಳು ಕಂಡು ಬಂದಲ್ಲಿ ತಕ್ಷಣ ಕ್ರಮ ಕೈಗೊಳ್ಳಲು ಸರ್ಕಾರ ಆದೇಶಗಳನ್ನೆ ದಿಕ್ಕರಿಸಿದ ಭೂ ಸೇನಾ ಇಲಾಖೆ ಅಧಿಕಾರಿಗಳು ಇದನ್ನು ಕೊರೆದ ಬೊರ್ ಓಪನ್ ಸ್ಥಿತಿಯಲ್ಲಿ ಬಿಟ್ಟಿದ್ದು ಅಘಾತದ ಸಂಗತಿಯಾಗಿದೆ. ನೂತನ ಶಾಲಾ ಕಟ್ಟಡದಲ್ಲಿ ಶೌಚಾಲಯ ನಿರ್ಮಾಣ ಮಾಡಿದ ಗುತ್ರೆದಾರ ಭೂ ಸೇನಾ ಅಧಿಕಾರಿಗಳು ಶೌಚಾಲಯ ಕೊಣೆಯ ಗುಂಡಿಗೆ ಕಲ್ಲು ಜಜ್ಜಿ ಬಂದ್ ಮಾಡಿ ಕೈಬಿಟ್ಟಿದ್ದಾರೆ. ಶಾಲೆಯಲ್ಲಿ ಶೌಚಾಲಯ ನಿರ್ಮಾಣ ಮಾಡುವಲ್ಲಿ ನಿರ್ಲಕ್ಷದೊರಣೆ ಮಾಡಿದ ಸಂಭಂಧಪಟ್ಟ ಅಧಿಕಾರಿಗಳ ವಿರುದ್ದ ಯಾವ ಅಧಿಕಾರಿಗಳು ಕಾನೂನು ಕ್ರಮಕ್ಕೆ ಮುಂದಾಗುತ್ತಿಲ್ಲ. ನ್ಯಾಯಾಲಯ ಸಹ ಪ್ರತಿ ಶಾಲಾ ಕಟ್ಟಡಗಳಲ್ಲಿ ಸುಜ್ಜಿತವಾದ ಶೌಚಾಲಯಗಳ ನಿರ್ಮಾಣ ಮಾಡುವದು ಎಂದು ತಿರ್ಪು ನೀಡಿದ್ದರೂ. ಕರ್ನಾಟಕ ಭೂ ಸೇನಾ ಅಧಿಕಾರಿಗರು ಗಣನೆಗೆ ತೆಗೆದುಕೊಳ್ಳದೆ ಶೌಚಾಲಯವನ್ನು ಅರೆಬರೆ ಮಾಡಿಕೊಂಡು ಮಾಯವಾಗಿದ್ದಾರೆ. ಕಳೆದ ಐದು ವರ್ಷಗಳಾದರೂ ಈ ಶಾಲಾ ಕಟ್ಟಡದಲ್ಲಿ ಇನ್ನೂ ಸೂಕ್ತ ವಿಧ್ಯುತ್ ಸಂಪರ್ಕವಿಲ್ಲದೆ ಶಾಲಾ ಕೊಣೆಗಳಲ್ಲಿ ಕರುಳಿನಂತೆ ವಿಧ್ಯುತ್ ವೈಯರಗಳು ನೇತಾಡುತ್ತಿವೆ. ವಿಧ್ಯಾರ್ಥಿಗಳು ಅಭ್ಯಾಸ ಮಾಡುವ ಶಾಲಾ ಕೊಣೆಗಳಲ್ಲೆ ಈ ವಿಧ್ಯುತ್ ಅವ್ಯವಸ್ಥೆಗಳು ಹೆಚ್ಚಾಗುತ್ತಿದ್ದು. ಸರ್ಕಾರದ ಅನುಷ್ಠಾನದ ಸಂಸ್ಥೆಯಾದ ಈ ಕರ್ನಾಟಕ ಭೂ ಸೇನಾ ನಿಗಮ ಇಂದು ಕಟ್ಟಡ ಕಾಮಗಾರಿಗಳಲ್ಲಿ ತೀರಾ ಕಳಪೆಯಾಗಿ ಕಾಮಗಾರಿ ಮುಂದುವರೆಯುತ್ತಿವೆ. ಕಾಮಗಾರಿ ಅನುಧಾನ ಸಂಪೂರ್ಣ ಪಾವತಿಸಕೊಂಡ ಈ ನಿಗಮ ಇನ್ನೂ ಶಾಲಾ ಕಟ್ಟಡವನ್ನು ದುಸ್ಥಿತಿಯಲ್ಲಿ ಕೈಬಿಟ್ಟಿದ್ದು ಜಿಲ್ಲಾಧಿಕಾರಿಗಳು ಈ ಕುರಿತು ಕ್ರಮಕ್ಕೆ ಮುಂದಾಗಬೇಕಾಗಿದೆ ಎಂದು ಪಾಲಕರು ಆಗ್ರಹಿಸಿದ್ದಾರೆ.


ಶಾಲಾ ಕಟ್ಟಡದಲ್ಲಿ ಶೌಚಾಲಯ ನಿರ್ಮಾಣ ಮತ್ತು ವಿದ್ಯುತ್ ಸಂಪರ್ಕ, ಬೊರವೆಲ್ ಸುವ್ಯವಸತೆ ಮಾಡಬೇಕು ಜೊತೆಗೆ ಶಾಲಾ ಕಟ್ಟಡದಲ್ಲಿ ಕುಡಿಯುವ ನೀರಿನ ಕೊರತೆ ಇದ್ದು ಈ ಕುರಿತು ಕಾಮಗಾರಿ ಕೈಗೊಳ್ಳಬೇಕು. ಸಂಭಂಧಪಟ್ಟ ಜೆಇಯವರಿಗೆ ದೂರವಾಣಿ ಕರೆ ಮತ್ತು ಪತ್ರ ವ್ಯವಹಾರ ಮಾಡಿದರೂ ಇಂದಿನವರೆಗೂ ಯಾವ ಅಧಿಕಾರಿಗಳು ಪರಿಗಣೆಗೆ ತೆಗೆದುಕೊಳ್ಳುತ್ತಿಲ್ಲ. ಉಪನ್ಯಾಷಕರು ಪಾಠ ಮಾಡುವಾಗ ಈ ವಿಧ್ಯುತ್ ತಂತಿಗಳು ನೇತಾಡುವದನ್ನು ಕಂಡು ಗಾಬರಾಯಾಗುವ ಪರಿಸ್ಥಿತಿಯುಂಟಾಗಿದೆ. ಈ ಕುರಿತು ಸಾರ್ವಜನಿಕ ಕಾಲೇಜು ಶಿಕ್ಷಣ ಇಲಾಖೆ ಮುಖ್ಯಸ್ಥರು ಇತ್ತಕಡೆ ಗಮನ ಹರಿಸಿ ಶಾಲಾ ಕಟ್ಟಡ ಮೂಲ ಶೌಕರ್ಯಗಳನ್ನು ಒದಗಿಸವಲ್ಲಿ ಪ್ರಯತ್ನ ಮಾಡಬೇಕಿದೆ.

           ಡಾ. ಅಬ್ದುಲ್ ಕರಿಂ ಕನ್ಯಾಕೊಳೂರ

           ಪ್ರಾಚಾರ್ಯರು ಪಿಯು ಕಾಲೇಜು ಶಹಾಪುರ