ಭೂ ಸುಧಾರಣೆಯ ಸಮರ್ಪಕ ಅನುಷ್ಟಾನದ ಚರ್ಚೆಗೆ ಸಿಪಿಎಂ ಆಗ್ರಹ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಡಿ.02:  ನಾಡಿದ್ದರಿಂದ ಬೆಳಗಾವಿಯಲ್ಲಿ ಆರಂಭಗೊಳ್ಳುವ ಚಳಿಗಾಲದ ಅಧಿವೇಶನ ಅನಾವಶ್ಯಕ ಚರ್ಚೆಗೆ ಅವಕಾಶ ನೀಡದೆ. ಬರಗಾಲದ ಪರಿಹಾರದ ಜೊತೆಗೆ ಭೂ ಸುಧಾರಣೆ ಕಾಯ್ದೆಯನ್ನು ಸಮರ್ಪಕ ಅನುಷ್ಟಾನ ಮತ್ತು ಸಾರ್ವಜನಿಕ ವಲಯದ ಕೈಗಾರಿಕೆ ಮತ್ತು ಶಿಕ್ಷಣ ವಲಯದ ಅಭಿವೃದ್ಧಿ ಕುರಿತು ಚರ್ಚೆ ಆಗಬೇಕು ಎಂದು ಸಿಪಿಎಂ ಆಗ್ರಹಿಸಿದೆ.
ಪಕ್ಷದ ರಾಜ್ಯ ಕಾರ್ಯದರ್ಶಿ, ಯು.ಬಸವರಾಜ್,ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿದ ಅವರು. ಬೆಳಗಾವಿಯಲ್ಲಿ‌ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಈ ಭಾಗದ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಕೆಲಸ ಆಗಬೇಕು.1974 ರಲ್ಲಿ ಜಾರಿಗೆ ತಂದ ಭೂಸುಧಾರಣೆ ಕಾಯ್ದೆ ತಿದ್ದುಪಡಿ ಅನುಷ್ಟಾನದಲ್ಲಿ ಸಫಲತೆ ಆಗದೆ.
ಕರಾವಳಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯನ್ನು ಬಿಟ್ಟರೆ ಉತ್ತರ ಕರ್ನಾಟಕ ಭಾಗದಲ್ಲಿ ಶೇ 80 ರಷ್ಟು  ಜಮೀನು ಬಂಡವಾಳಗಾರರ ಪಾಲಾಗದೆ. ಅರ್ಜಿ ಸಲ್ಲಿಸಿದವರ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. 
ಸಾಗುವಳಿದಾರರನ್ನು ಗುರುತಿಸುವ ಕೆಲಸ ಆಗಬೇಕು ಎಂದಾಗ, ಜಮೀನ್ದಾರರು ಸಾಗುವಳಿದಾರರನ್ನು ಒಕ್ಕಲೆಬ್ಬಿಸಿ, ಅವರೇ ಸಾಗುವಳಿ‌ಮಾಡುವುದಾಗಿ ಅರ್ಜಿ ಹಾಕಿಕೊಂಡು ಜಮೀನು ಉಳಿಸಿಕೊಂಡಿದ್ದಾರೆ. ಇದರಿಂದ  ಈ ಭಾಗದಲ್ಲಿ ಇನ್ನೂ ಕೃಷಿ ಕೂಲಿ ಕಾರ್ಮಿಕರಿದ್ದಾರೆ‌ ಜಮೀನು ಹೊಂದಿರುವವರ ಸಂಖ್ಯೆ ಕಡಿಮೆಯಾಗಿದೆ. ಅದಕ್ಕಾಗಿ ಊಳುವವನೇ ಒಡೆಯ ಎಂಬ ಮೂಲ ಆಶಯ ಜಾರಿಗೆ ಬರಬೇಕು ಆ ಕಾರ್ಯವನ್ನು ಸರ್ಕಾರ ಮಾಡಬೇಕು ಎಂದರು.
ಖಾಸಗೀ ಕೈಗಾರಿಕೆ, ಶಿಕ್ಷಣಕ್ಕೆ ನೀಡುವ ಪ್ರೋತ್ಸಾಹ, ಸಾರ್ವಜನಿಕ ವಲಯಕ್ಕೆ ಇಲ್ಲದಾಗಿದೆ. ಅದಕ್ಕಾಗಿ  ಸರ್ಕಾರದ ತಪ್ಪು ನೀತಿಗಳಿಂದಾಗಿ ಭೂಸುಧಾರಣೆ ಅಗಿಲ್ಲ. ಕ.ಕರ್ನಾಟಕ ಮಂಡಳಿಯ ಅನುದಾನ ಸೂಕ್ತವಾಗಿ ಬಳಕೆ ಆಗುತ್ತಿಲ್ಲ. ಈ ಪ್ರದೇಶದಲ್ಲಿ ನೆನೆಗುದಿಗೆ ಬಿದ್ದಿರುವ ಅಭಿವೃದ್ಧಿ ಬಗ್ಗೆ ಸದನದಲ್ಲಿ ಚರ್ಚೆ ಆಗಬೇಕು ಎಂದರು.
ಪಕ್ಷದ ಮುಖಂಡರಾದ  ಎಸ್.ವೈ. ಗುರುಶಾಂತ್, ಜೆ.ಸತ್ಯಬಾಬು ಸುದ್ದಿಗೋಷ್ಟಿಯಲ್ಲಿ ಇದ್ದರು‌