ಭೂ-ಸುಧಾರಣಾ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ

ಕುರುಗೋಡು.ಜ.9: ಪಟ್ಟಣದ ತಹಶೀಲ್ದಾರ್ ಕಛೇರಿ ಮುಂದೆ ಐಕ್ಯಹೋರಾಟ ಸಮಿತಿ ಕುರುಗೋಡು ತಾಲೂಕುಸಮಿತಿ ನೇತ್ರುತ್ವದಲ್ಲಿ ಭೂ-ಸುಧಾರಣಾ ಕಾಯ್ದೆಗಳ ತಿದ್ದುಪಡಿಯನ್ನು ಹಿಂಪಡೆಯುವಂತೆ ಒತ್ತಾಯಿಸಿ, ವಿವಿದ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ಮಾಡಿದರು.
ಪ್ರತಿಭಟನೆಯಲ್ಲಿ ಪ್ರಾಂತರೈತಸಂಘದ ಜಿಲ್ಲಾದ್ಯಕ್ಷ ವಿಎಸ್.ಶಿವಶಂಕರ್ ಮಾತನಾಡಿ, ಕೇಂದ್ರಸರ್ಕಾರ ರೈತವಿರೋಧಿ ಕ್ರುಷಿಕಾಯ್ದೆಗಳನ್ನು ಹಾಗು ಜನವಿರೋಧಿ ವಿದ್ಯುತ್ ಮಸೂದೆಗಳನ್ನು ಕೂಡಲೇ ಹಿಂಪಡೆದು ದೇಶದ ರೈತ ಹಾಗು ಕಾರ್ಮಿಕರಿಗೆ ಆಸರೆಯಾಗಬೇಕೆಂದು ಒತ್ತಾಯಿಸಿದರು.
ಸಿಐಟಿಯು ಸಂಘಟನೆಯ ರಾಜ್ಯ ಉಪಾದ್ಯಕ್ಷ ಆರ್.ಎಸ್.ಬಸವರಾಜ್ ಮಾತನಾಡಿ, ಮೂರು ಕ್ರಷಿ ಕಾನೂನುಗಳನ್ನು ವಾಪಾಸ್ ಪಡೆಯಬೇಕು, ಎಲ್ಲಾ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಿ, ವಿದ್ಯುತ್ ಮಸೂದೆ2020ನ್ನು ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸಿದರು. ರಸ್ತೆಬದಿವ್ಯಾಪಾರಿಸಂಘದ ಅದ್ಯಕ್ಷ ಹೆಚ್.ಎಂ.ವಿಶ್ವನಾಥಸ್ವಾಮಿ, ಪ್ರಾಂತರೈತಸಂಘದ ಜಿಲ್ಲಾ ಕಾರ್ಯದರ್ಶಿ ಗಾಳಿಬಸವರಾಜ್ ಮಾತನಾಡಿ, ರೈತರ ಉಳಿವಿಗಾಗಿ, ಕಾರ್ಮಿಕರ ಉಳಿವಿಗಾಗಿ ಕೇಂದ್ರಸರ್ಕಾರ ಜಾರಿಗೆ ತಂದಿರುವ ಮಸೂದೆಗಳನ್ನು ಹಿಂಪಡೆಯಬೇಕೆಂಬ ಮನವಿಪತ್ರವನ್ನು ರಾಷ್ಟಪತಿಗಳಿಗೆ ರವಾನೆಮಾಡಬೇಕೆಂದು ಕುರುಗೋಡು ಶಿರಸ್ತೆದಾರರಿಗೆ ಮನವಿಸಲ್ಲಿಸಿದರು. ಮನವಿಸ್ವೀಕರಿಸಿದ ಶಿರಸ್ತೆದಾರ್ ವಿಜಯಕುಮಾರ್ ಕೂಡಲೇ ರವಾನಿಸುವುದಾಗಿ ಭರವಸೆ ನೀಡಿದರು.
ಹಮಾಲಸಂಘದ ಅದ್ಯಕ್ಷ ಎನ್.ಸೋಮಯ್ಯ, ದಲಿತಸಂಘರ್ಷ ಸಮಿತಿ ಕುರುಗೋಡು ತಾಲೂಕುಅದ್ಯಕ್ಷ ಈಶ್ವರ, ಗ್ರಾ.ಪಂ.ನೌಕರಸಂಘದ ಅದ್ಯಕ್ಷ ರಾಜ, ಬೊಳಗೊಟಯ್ಯಸ್ವಾಮಿ, ಪೇಂಟರ್ ಸಂಘದ ನಾಗರಾಜ, ದೇವದಾಸಿಮಹಿಳೆಯರ ಸಂಘದ ಯಂಕಮ್ಮ,ಅಂಗನವಾಡಿನೌಕರಸಂಘದ ಗೀತಮ್ಮ, ದಲಿತಹಕ್ಕುಗಳ ಸಮಿತಿ ಕೆಂಚಪ್ಪ, ಡಿಎಸ್‍ಎಸ್.ಅಂಬಣ್ಣ, ರಾಮಲಿಂಗ, ಬಿಸಿಯೂಟನೌಕರಸಂಘದ ನಾಗರತ್ನಮ್ಮ, ಹೆಚ್.ತಿಮ್ಮಪ್ಪ, ಗೂಡುವಲಿ, ಮಾರೆಪ್ಪ, ಸೇರಿದಂತೆ ಇತರೆ ನೂರಾರುಮಂದಿ ರೈತ,ಕಾರ್ಮಿಕ ಮುಖಂಡರು ಬಾಗವಹಿಸಿದ್ದರು.
ಪ್ರಾರಂಭದಲ್ಲಿ ಎಲ್ಲಾರೂ ಶ್ರೀದೊಡ್ಡಬಸವೇಶ್ವರ ದೇವಸ್ಥಾನದಿಂದ ಪ್ರತಿಭಟನಾ ಮರೆವಣಿಗೆ ಮೂಲಕ ತಹಶೀಲ್ದಾರ್ ಕಛೇರಿಯಲ್ಲಿ ಸಮಾವೇಶಗೊಂಡು ಪ್ರತಿಭಟನೆ ಮಾಡಿದರು.