ಭೂ ಸಂತ್ರಸ್ತರ ಪರವಾಗಿ ಕಾರ್ಯವನ್ನು ಮಾಡುತ್ತಿದ್ದು ತಾಳ್ಮೆ ಇರಲು ಕರೆ

ಸಂಜೆವಾಣಿ ವಾರ್ತೆಸಂಡೂರು:ಅ:14:  ಕ್ಷೇತ್ರದ ರೈತರಿಗೆ ಯಾವುದೇ ರೀತಿಯಲ್ಲಿ ಅನ್ಯಾಯವಾಗದಂತೆ ತಡೆಯುವ ಎಲ್ಲಾ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿದ್ದು ಅದಕ್ಕೆ ರೈತರು ತಾಳ್ಮೆಯನ್ನು ಕಳೆದುಕೊಳ್ಳಬಾರದು, ಸಹಕಾರ ಅತಿ ಅಗತ್ಯ ಎಂದು ಶಾಸಕ ಈ.ತುಕರಾಂ ತಿಳಿಸಿದರು.ಅವರು ಕುಡುತಿನಿ ಪಟ್ಟಣದಲ್ಲಿ ಭೂ ಸಂತ್ರಸ್ತರಿಂದ 238ದಿನಗಳಿಂದ ಧರಣಿ ನೆಡೆಸುತ್ತಿರವ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು. ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭೇಟಿ ನೀಡಿದ್ದರು..ಈ ಸಮಯದಲ್ಲಿ ಜಿಲ್ಲಾಧಿಕಾರಿಗಳು ಧರಣಿ ನಿರತರೊಂದಿಗೆ ಸಂವಾದ ನಡೆಸಿ ನಿಮ್ಮ ಬೇಡಿಕೆಗಳನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳವುದಾಗಿ ಭರವಸೆ ನೀಡಿದರು. ಅಲ್ಲದೆ ರೈತರು ಈ ದೇಶದ ಶಕ್ತಿಯಾಗಿದ್ದಾರೆ, ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪೂರ್ಣಪ್ರಮಾಣದಲ್ಲಿ ಸದುಪಯೋಗ ಪಡೆದುಕೊಳ್ಳುವ ಮೂಲಕ ಪ್ರಗತಿಯನ್ನು ಸಾಧಿಸಬೇಕು, ಅಗ ಮಾತ್ರ ರೈತರು ಮತ್ತು ದೇಶ ಬೆಳೆಯಲು ಸಾಧ್ಯ ಎಂದರು.
One attachment • Scanned by Gmail