ಭೂ ಮಾಲೀಕರಿಂದ ಕಾಲುವೆ ಬಂದ್ ವಿರೋಧಿಸಿ ಪ್ರತಿಭಟನೆ

ದೇವದುರ್ಗ.ಆ.೦೭- ನಾರಾಯಣಪೂರ ಬಲದಂಡೆ ಮುಖ್ಯ ಕಾಲುವೆಯ ವಿತರಣಾ ಕಾಲುವೆ ೦೯ ಎರ ಅಡಿಯಲ್ಲಿ ಬರುವ ಒಡವಟ್ಟಿ ಶಾಖಾ ಕಾಲುವೆ ಕಿ.ಮೀ ೪ರಲ್ಲಿ ದೇವದುರ್ಗ ತಾಲೂಕಿನ ತಾವಂಗಲ್
ಗ್ರಾಮದ ಸ.ನಂ: ೬೫ ಭೂ ಮಾಲೀಕರು ಕಾಲುವೆ ನೀರು ಒಂದು ಮಾಡಿರುವುದನ್ನು ವಿರೋಧಿಸಿ ರಾಜ್ಯ ರೈತ ಸಂಘ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿತು.
ಎನ್‌ಆರ್‌ಬಿಸಿ ಮುಖ್ಯ ಕಾಲುವೆಯ ವಿತರಣಾ ಕಾಲುವೆ ೯(ಎ)ರ ಅಡಿಯ ವಡವಟ್ಟಿ ಶಾಖಾ ಕಾಲುವ ಕಿ.ಮೀ ೪.೦೦ ರಲ್ಲಿ ದೇವದುರ್ಗ ತಾಲೂಕಿನ ಶಾವಂತಗಲ್ ಗ್ರಾಮದ ಜಮೀನು ಸರ್ವೆ ನಂ: ೬೫ ರಾದ ಶ್ರೀ ಕನಕಪ್ಪ ತಂದೆ ನಿಂಗಯ್ಯ , ಶ್ರೀ ಭೀಮರಾಯ ತಂದೆ ನಿಂಗಯ್ಯ, ಶ್ರೀ ದುರುಗಪ್ಪ ತಂದೆ ನಿಂಗಯ್ಯ ? ಶ್ರೀಮ ಗಂಡ: ರಂಗಯ್ಯ ಬಾಡ್ಯ, ಬಸವರಾಜ ತಂದೆ ತಿಮ್ಮಯ್ಯ ಇವರುಗಳು ತಮ್ಮ ಭೂ-ಪರಿಹಾರ ಧನ ಬಂದಿರುವುದಿಲ್ಲವೆಂದ ವರ್ಷಗಳಿಂದ ಕಾಲುವೆಗೆ ಮಣ್ಣು ಅಡ್ಡ ಹಾಕಿ ನೀರು ಬಂದು ಮಾಡಿ ಪರಿಹಾರಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದರು.
ಮಯದಲ್ಲಿ ರೈತರು ಮತ್ತು ರೈತ ಮುಖಂಡರು ಅವರ ಮನವಲಿಸಿ, ಪರಿಹಾರ ಕೊಡಿಸುವುದಾಗಿ ಕಾಲುವೆಗೆ ನೀರ ನೀವು ಆದರೆ ೪ ವರ್ಷದಿಂದಲೂ ನೀರಾವರಿ ಇಲಾಖೆಯ ಅಧಿಕಾರಿಗಳು ನಮಗೆ ಮತ್ತು ಭೂ-ಮಾಲೀಕರಿಗೆ ವಂಚ – ಬಂದಿದ್ದು ರೈತರ ಆಕ್ರೋಶಕ್ಕೆ ಕಾರಣ ಎಂದು ರೈತ ಸಂಘ ತಿಳಸಿದೆ.
ಆದರೆ ಬರವಸೆ ಕೊಟ್ಟು ೧ ತಿಂಗಳಾದರೂ ಅದಕ್ಕೆ ನಮಗೆ ಯುವರೇ ಸಂಭಂದವಿಲ್ಲ ಎನ್ನುವ ರೀತಿಯಲ್ಲಿ ಅಧಿಕಾರಿಗಳು ನಡೆದುಕೊಂಡಿದ್ದಾರೆ. ತಾವುಗಳು ಮಧ್ಯ ಪ್ರವೇಶಿಸಿ ಭೂ-ಮಾಲೀಕರಿಗೆ ವರಹಾರ ಕೊಟ್ಟು ೯(ಎ) ಕಾಲುವೆಗೆ ನೀರು ಹರಿಸಿ ಆ ಭಾಗದ ರೈತರಿಗೆ ಬೆಳೆ ಬೆಳೆಯಲು ಅನುಕೂಲ ಮಾಡಿಕೊಡಬೇಕೆಂದು ಈ ಪತ್ರದ ಮೂಲಕ ತಮ್ಮ ಅವಗಾಹನೆಗೆ ತರಬಯಸುತ್ತೇವೆ. ಇದು ಅಲ್ಲದೇ, ಉಪ ಕಾಲುವೆಗಳಾದ ೧೫,೧೬,೧೭,೧೮ರ ಅಡಿಯಲ್ಲಿ ಬರುವ ರೈತರಿಗೆ ಭೂ-ಪರಿಹಾರ ಬಂದಿರುವುದಿಲ್ಲ, ಅದನ್ನು ಕೂಡ ಗಮನಿಸಿ ಕೂಡಲೇ ಎಲ್ಲಾ ಭೂ-ಮಾಲೀಕರಿಗೆ ಪರಿಹಾರ ಕೊಡಿಸಬೇಕೆಂದು ವಿನಂತಿ, ಒಂದು ವೇಳೆ, ೨ ದಿನದಲ್ಲಿ ನೀರು ಬಿಡದಿದ್ದರೆ ಸಂಪೂರ್ಣ ಒಂದು ಬೆಳೆಯ ಬೆಳೆ ಪರಿಹಾರ ಕೊಡುವವರೆಗೆ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಅನಿರ್ಧಿಷ್ಟ ಧರಣಿ ನಡೆಸಲಾಗುವುದು ಎಂದು ರೈತ ಸಂಘ ಎಚ್ಚರಿಸಿದೆ.
ಈ ಸಂದರ್ಭದಲ್ಲಿ ಚಾಮರಾಸ್ ಮಾಲೀ ಪಾಟೀಲ್, ಅಮರಣ್ಣ ಗುಡಿಹಾಳ, ಪ್ರಭಾಕರ ಪಾಟೀಲ್, ಹಾಜಿ ಮುಸ್ತಾನ್, ಮಲ್ಲಣ್ಣ ಗೌಡೂರು, ದೇವರಾಜ ನಾಯಕ, ರಮೇಶ ಅಬಕಾರಿ, ಹುಸೇನ್ ಸಾಬ್ ತಿಮ್ಮಣ್ಣ ನಾಯಕ ಉಮಾಪತಿಗೌಡ, ರವಿಗಬ್ಬೂರು, ಉಮಣ್ಣ ನಾಯಕ ಇನ್ನಿತರರು ಉಪಸ್ಥಿತ್ತರಿದ್ದರು.